ಹಿಂದೂಗಳ ಮನೆ ಮೇಲೆ ಭೀಕರ ದಾಳಿ, ಕೊಲೆಗೂ ಪ್ರಯತ್ನ: ಬಾಂಗ್ಲಾದೇಶ ಪೂರ್ತಿ ಧಗಧಗ..
ಹಿಂದೂಗಳ ಮನೆ ಮೇಲೆ ನೆರೆಯ ಬಾಂಗ್ಲಾದೇಶದಲ್ಲಿ ಈಗ ಹಿಂಸಾತ್ಮಕ ದಾಳಿ ಆರಂಭ ಆಗಿದ್ದು ಹಿಂದೂಗಳ ಹತ್ಯೆಗೂ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಇದೀಗ ದೇಶ ಬಿಟ್ಟು ಓಡಿ ಬಂದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಸಮಯದಲ್ಲೇ ಧಗಧಗ ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶದಲ್ಲಿ, ಹಿಂದೂಗಳ ಮನೆ ಮೇಲೆ ಹಿಂಸಾತ್ಮಕ ದಾಳಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಂಗ್ಲಾದೇಶ ಇವತ್ತು ಸ್ವಾತಂತ್ರ್ಯ ಪಡೆದು ನೆಮ್ಮದಿಯಾಗಿ ಸ್ವತಂತ್ರ ದೇಶವಾಗಿ ಜೀವನವನ್ನು ನಡೆಸುತ್ತಿದೆ ಎಂದರೆ ಅದಕ್ಕೆ…

