admin

ಇಂದಿನಿಂದ 1121 ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

ಗಡಿ ಭದ್ರತಾ ಪಡೆ (BSF) ಇಂದಿನಿಂದ ಹೆಡ್ ಕಾನ್ಸ್ಟೇಬಲ್, ರೇಡಿಯೋ ಆಪರೇಟರ್ (RO) ಮತ್ತು ರೇಡಿಯೋ ಮೆಕ್ಯಾನಿಕ್ (RM) ಹುದ್ದೆಗಳು 2025 ರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 1121 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. BSF ನ ಅಧಿಕೃತ ವೆಬ್ಸೈಟ್ rectt.bsf.gov.in ನಲ್ಲಿ ಸೆಪ್ಟೆಂಬರ್ 23, 2025 ರವರೆಗೆ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025 ರಲ್ಲಿ ಒಟ್ಟು 1121 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇವುಗಳಲ್ಲಿ, 910 ಹುದ್ದೆಗಳು…

Read More

ದೆಹಲಿಗೂ ಧರ್ಮಸ್ಥಳ ಬುರುಡೆಗು ಇದೆ ನಂಟು : SIT ತನಿಖೆ ವೇಳೆ ಮತ್ತಷ್ಟು ಸ್ಪೋಟಕ ವಿಚಾರ ಬಯಲು!

 ಚಿನ್ನಯ್ಯ ತಂದುಕೊಟ್ಟ ಬುರುಡೆ ಎಲ್ಲಿಯದ್ದು ಅನ್ನೋ ಯಕ್ಷ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮುಸುಕುಧಾರಿಯನ್ನ 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿರುವ SIT ಸ್ಫೋಟಕ ರಹಸ್ಯಗಳನ್ನ ಬಯಲಿಗೆಳೆಯುತ್ತಿದೆ. ಚಿನ್ನಯ್ಯ ತಂದಿದ್ದ ʻಬುರುಡೆʼ ಅಧಿಕಾರಿಗಳು ಧರ್ಮಸ್ಥಳ ನೋಡುವುದಕ್ಕೂ ಮುನ್ನವೇ ದೆಹಲಿ ನೋಡಿತ್ತು ಅನ್ನೋದು ಗೊತ್ತಾಗಿದೆ. ಹೌದು. ಷಡ್ಯಂತ್ರದ ಗ್ಯಾಂಗ್‌ ಚಿನ್ನಯ್ಯನ ಸಮೇತ ಬುರುಡೆಯನ್ನ ದೆಹಲಿಗೆ ತೆಗೆದುಕೊಂಡು ಹೋಗಿತ್ತು. ಅಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನ ಭೇಟಿಯಾಗಿ ಬುರುಡೆಯನ್ನ ತೋರಿಸಲಾಗಿತ್ತು. ಬುರುಡೆ ಸಮೇತ ಇಡೀ ಪ್ರಕರಣದ ಕಥೆಯನ್ನು ಅಲ್ಲಿ ಹೇಳಲಾಗಿತ್ತು….

Read More

ಉಡುಪಿ :ಆನ್ ಲೈನ್ ನಲ್ಲಿ ವಿಡಿಯೋ ಕರೆ ಮಾಡಿ ವಂಚನೆ ಆರೋಪಿ ಹಾಗೂ ಸ್ವತ್ತು ವಶ

ದೂರುದಾರರಿಗೆ ಫೇಸ್ ಬುಕ್ ನಲ್ಲಿ ಯುವತಿಯ ಪರಿಚಯವಾಗಿ, ದೂರುದಾರರಿಗೆ ವಿಡಿಯೋ ಕಾಲ್ ಮಾಡಿದ್ದು ಪಿರ್ಯಾದಿದಾರರು ವಿಡಿಯೋ ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪಿರ್ಯಾದಿದಾರರ ಮುಖ ಇರುವ ಮಾರ್ಪಿಂಗ್ ಮಾಡಿದ ನಗ್ನ ವಿಡಿಯೋವನ್ನು ಪಿರ್ಯಾದಿದಾರರ ವಾಟ್ಯಾಪ್ ನಂಬರಿಗೆ ಕಳುಹಿಸಿ, ಅಪರಿಚಿತ ವ್ಯಕ್ತಿಗೆ ಹಣವನ್ನು ನೀಡದಿದ್ದರೆ ಪಿರ್ಯಾದಿದಾರರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಪಿರ್ಯಾದಿದಾರರಿಗೆ ಬೆದರಿಸಿ ಪಿರ್ಯಾದಿದಾರರಿಂದ ಹಂತ-ಹಂತವಾಗಿ ಒಟ್ಟು 4,44,999.97/- ಹಣವನ್ನ ವರ್ಗಾಯಿಸಿಕೊಂಡು ಮೊಸ ಮಾಡಿರುತ್ತಾರೆ. ಪಿರ್ಯಾದಿದಾರರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ…

Read More

ಗ್ರಾಹಕರೇ ಗಮನಿಸಿ : LPG ಸಿಲಿಂಡರ್ ಡೆಲಿವರಿಗೆ ಯಾವುದೇ ಶುಲ್ಕ ಇಲ್ಲ.!

ಬೆಂಗಳೂರು : ಆಗಸ್ಟ್-2025 ರ ಮಾಹೆಯಲ್ಲಿ ಅಡುಗೆ ಅನಿಲದ ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ ಗ್ರಾಹಕರು ಡೆಲಿವರಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ತಿಳಿಸಿದೆ. ಗ್ಯಾಸ್ ಏಜೆನ್ಸಿಗಳು ಗೃಹ ಬಳಕೆಯ ಅನಿಲ ಸಿಲಿಂಡರನ್ನು ನೇರವಾಗಿ ಗೋದಾಮಿನಿಂದ ಗ್ರಾಹಕರಿಗೆ ಸರಬರಾಜು ಮಾಡತಕ್ಕದ್ದು. ಯಾವುದೇ ಕಾರಣಕ್ಕಾಗಿಯೂ ಅನಿಲ ಸಿಲಿಂಡರನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೈದಾನಗಳಲ್ಲಿ ಇಟ್ಟು ಮಾರಾಟ ಮಾಡತಕ್ಕದಲ್ಲ. ಸರ್ಕಾರದ ಆದೇಶ ಸಂಖ್ಯೆ FCS 163 Epp 2025 ಬೆಂಗಳೂರು…

Read More

ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ: ಮೃತ ಕಂದನನ್ನ ಬ್ಯಾಗಿನಲ್ಲಿಡಿದು ಜಿಲ್ಲಾಧಿಕಾರಿ ಕಚೇರಿಗೆ ಬಂದ ತಂದೆ

ಉತ್ತರ ಪ್ರದೇಶದ ಲಖಿಂಪುರ ಖೇರಿಯಿಂದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ, ವ್ಯಕ್ತಿಯೊಬ್ಬ ತನ್ನ ನವಜಾತ ಶಿಶುವಿನ ಶವವನ್ನ ಚೀಲದಲ್ಲಿ ಹೊತ್ತುಕೊಂಡು ಜಿಲ್ಲಾ ಕಲೆಕ್ಟರ್ ಕಚೇರಿಗೆ ಬಂದಿದ್ದಾನೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ದುಃಖಿತ ತಂದೆ ಆರೋಪಿಸಿದ್ದಾರೆ. ಇಡೀ ಘಟನೆಯನ್ನು ಆ ವ್ಯಕ್ತಿ ವಿವರಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ. ಆ ವ್ಯಕ್ತಿಯನ್ನ ವಿಪಿನ್ ಗುಪ್ತಾ ಎಂದು ಗುರುತಿಸಲಾಗಿದೆ. ತನ್ನ ಕಷ್ಟವನ್ನು ವಿವರಿಸುತ್ತಾ, “ನಾನು ಹರಿದ್ವಾರದಿಂದ ಬರುತ್ತಿದ್ದೆ. ನನ್ನ ಹೆಂಡತಿಯ ಸಹೋದರಿ ಮತ್ತು ಆಕೆಯ…

Read More

ಧರ್ಮಸ್ಥಳ ಕೇಸ್ : ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯ 10 ದಿನ ಎಸ್‌ಐಟಿ ಕಸ್ಟಡಿಗೆ

ಧರ್ಮಸ್ಥಳ ಪ್ರಕರಣದಲ್ಲಿ ಇದೀಗ ದೂರುದಾರ ಚಿನ್ನಯ್ಯನನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಐಪಿಎಸ್‌ ಅಧಿಕಾರಿ ಪ್ರಣವ್ ಮೊಹಂತಿ ಅವರು ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ಮಾಸ್ಕ್​ ಮ್ಯಾನ್​ ವಿಚಾರಣೆ ನಡೆಸಿದ್ರು. ಸುದೀರ್ಘ ವಿಚಾರಣೆ ಬಳಿಕ ಚಿನ್ನಯ್ಯನನ್ನು ವಶಕ್ಕೆ ಪಡೆಯಲಾಗಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್​ಗೆ ಮಾಸ್ಕ್​ಮ್ಯಾನ್​ ನನ್ನ ಎಸ್​ಐಟಿ ಅಧಿಕಾರಿಗಳು ಹಾಜರುಪಡಿಸಿದ್ದಾರೆ. ಇದೀಗ ದೂರುದಾರ ಮಾಸ್ಕ್ ಮ್ಯಾನ್ ನನ್ನನ್ನು 10 ದಿನ ಎಸ್ ಐ ಟಿ ಕಸ್ಟಡಿಗೆ ನೀಡಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಸುದೀರ್ಘ…

Read More

ಮಂಗಳೂರು: ಲಕ್ಕಿ ಸ್ಕೀಂ ಹೆಸರಲ್ಲಿ 15 ಕೋಟಿ ರೂ. ಅಧಿಕ ವಂಚನೆ – ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಸುರತ್ಕಲ್ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಕಿ ಸ್ಕೀಂ ಹೆಸರಲ್ಲಿ ಸಾವಿರಾರು ಗ್ರಾಹಕರಿಗೆ 15 ಕೋ.ರೂ. ಅಧಿಕ ವಂಚನೆ ಮಾಡಿದ ಆರೋಪದಲ್ಲಿ ಸುರತ್ಕಲ್‌ ಮತ್ತು ಬಜ್ಪೆಯ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ಮಾಡಿ ವಂಚಿಸಿದ್ದ ಕಾಟಿಪಳ್ಳ ಒಂದನೇ ಬ್ಲಾಕ್‌ನ ಮಹಾಕಾಳಿ ದೈವಸ್ಥಾನ ಬಳಿಯ ನಿವಾಸಿ ಅಹ್ಮದ್ ಖುರೇಶಿ (34), ಕಾಟಿಪಳ್ಳ ಎರಡನೇ ಬ್ಲಾಕ್‌ನ ಕೋರ್ದಬ್ಬು ದ್ವಾರದ ಬಳಿಯ ನಿವಾಸಿ ನಝೀರ್ ಯಾನೆ ನಾಸಿರ್ (39) ಹಾಗೂ ನ್ಯೂ…

Read More

ನೂರಾರೂ ಶವ ಹೂತಿಟ್ಟ ಪ್ರಕರಣ: ದೂರುದಾರ ಅನಾಮಿಕನ ಬಂಧನ  

ಬೆಳ್ತಂಗಡಿ : ನೂರಾರೂ ಶವ ಹೂತಿಟ್ಟ ಪ್ರಕರಣದ ದೂರುದಾರನನ್ನು ಎಸ್‌.ಐ.ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆ.22 ರಂದು ಮಂಗಳೂರು ಸಕ್ಷಮ ಪ್ರಾಧಿಕಾರದಿಂದ ಪ್ರೊಟೆಕ್ಷನ್ ಕಾಯ್ದೆಯನ್ನು ರದ್ದು ಮಾಡಿದ್ದು. ಆ.23 ರಂದು ಬೆಳಗ್ಗೆ ಬಂಧಿಸಿ 11 ಗಂಟೆಗೆ ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ ಎಂದು ಎಸ್.ಐ.ಟಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Read More

ಆನ್‌ಲೈನ್‌ ಗೇಮಿಂಗ್‌ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

ನವದೆಹಲಿ : ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿದ್ದ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಅನುಮೋದಿಸಿದ್ದಾರೆ. ಹಣ ಕಟ್ಟಿ ಆಡಲಾಗುವ ಎಲ್ಲಾ ಆನ್‌ಲೈನ್‌ ಗೇಮ್‌ಗಳನ್ನು ಕಾನೂನು ನಿಷೇಧಿಸುತ್ತದೆ. ಆನ್‌ಲೈನ್‌ ಗೇಮ್‌ ಆಡುವುದಕ್ಕೆ ಅವಕಾಶ ಹಾಗೂ ಪ್ರೋತ್ಸಾಹ ನೀಡುವವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿಯವರೆಗೆ ದಂಡ ವಿಧಿಸಲಾಗುವುದು ಅಂತಹ ಆಟಗಳ ಕುರಿತು ಜಾಹೀರಾತು ಪ್ರಕಟಿಸಿದರೆ ಎರಡು ವರ್ಷಗಳವರೆಗೆ ಶಿಕ್ಷೆ ಮತ್ತು 50 ಲಕ್ಷ ದಂಡ ವಿಧಿಸಬಹುದಾಗಿದೆ. ಅಪರಾಧಗಳ ಪುನರಾವರ್ತನೆ ಕಂಡುಬಂದಲ್ಲಿ 3-5…

Read More

ಉಡುಪಿ: ಗರುಡ ಗ್ಯಾಂಗ್ ಸದಸ್ಯ ಕಬೀರ್ ಹುಸೇನ್ ಬಂಧನ ಎತ್ತಿ ಹಿಡಿದ ಹೈಕೋರ್ಟ್

ಗರುಡ ಗ್ಯಾಂಗ್‌ನ ಸಕ್ರೀಯ ಸದಸ್ಯ ಹಾಗೂ ಉಡುಪಿ ಜಿಲ್ಲೆಯಲ್ಲದೇ ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಸಹ ತನ್ನ ಅಪರಾಧಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಕುಖ್ಯಾತ ಆರೋಪಿ ಕಬೀರ್ ಅಲಿಯಾಸ್ ಕಬೀರ್ ಹುಸೇನ್ (46) ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿರುವ ನಡೆಯನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿದೆ. ಕಾರ್ಕಳ ನಗರ ಠಾಣಾ ಉಪನಿರೀಕ್ಷಕರು ಜಿಲ್ಲಾ ಎಸ್ಪಿಯವರಿಗೆ ಸಲ್ಲಿಸಿದ ವರದಿಯನ್ನು, ಎಸ್ಪಿ ಅವರು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದಾರೆ. ಪರಿಶೀಲಿಸಿದ ಅವರು 2025 ರ ಜು.10 ರಂದು ಬಂಧನ ಆದೇಶ ಹೊರಡಿಸಿದ್ದರು….

Read More