ಬ್ಯಾಂಕ್ ಖಾತೆಗೆ ನಾಮಿನಿ ಮಾಡುವ ವಿಚಾರದಲ್ಲಿ ಆಗಿರುವ ಈ ನಿಯಮ ಬದಲಾವಣೆ ನಿಮಗೆ ತಿಳಿದಿರಲಿ
ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ತರಲು ಪ್ರಯತ್ನಿಸುತ್ತಿದೆ. ಇದು ಜಾರಿಗೆ ಬಂದರೆ ನಾಮಿನಿಗಳ ಸಂಖ್ಯೆ ಹೆಚ್ಚಳ ಮಾಡುವ ಮಹತ್ವದ ಬದಲಾವಣೆಯಾಗಲಿದೆ. ಈಗ ಒಬ್ಬರ ಬ್ಯಾಂಕ್ ಖಾತೆಗೆ ಒಬ್ಬರನ್ನು ಮಾತ್ರ ನಾಮಿನಿಯಾಗಿ ಮಾಡಬಹುದಾಗಿದೆ. ಆದರೆ ಈ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಒಂದು ಖಾತೆಗೆ ಒಂದಕ್ಕಿಂತ ಹೆಚ್ಚು ಅಂದರೆ ಗರಿಷ್ಠ ನಾಲ್ಕು ಜನರವರೆಗೆ ನಾಮಿನಿಯಾಗಿ ಮಾಡಬಹುದಾಗಿದೆ. ನಾಮಿನಿ ಸಂಖ್ಯೆ ಹೆಚ್ಚಳ, ಅಡಿಟರ್ ಗಳಿಗೆ ಸಂಭಾವನೆ ನಿಗದಿ ಮಾಡುವ ಅನೇಕ ವಿಚಾರಗಳ ಬಗ್ಗೆ ನಿಯಮಗಳು ಬದಲಾಗಲಿವೆ. ನಾಮಿನಿ ಹೆಚ್ಚಳದಿಂದ…

