admin

ದ.ಕ ಜಿಲ್ಲೆಯಲ್ಲಿ ನಾಳೆ (ಜು.18) ರಂದು ಶಾಲೆಗಳಿಗೆ ರಜೆ- ಅಧಿಕೃತ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯ (ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಿಗೆ) ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ದಿನಾಂಕ: 18-07- 2024ರಂದು ರಜೆಯನ್ನು ಘೋಷಿಸಲಾಗಿದೆ. ಮಂಗಳೂರು, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ ತಾಲೂಕಿನಲ್ಲಿ ರಜೆ ಇಲ್ಲ. ಕೇವಲ 5 ತಾಲೂಕಿಗೆ ರಜೆ ಘೋಷಣೆ

Read More

ದ.ಕ ಶಾಲಾ- ಕಾಲೇಜುಗಳಿಗೆ ಜು.18 ರಂದು ರಜೆ ಘೋಷಿಸಿಲ್ಲ, ನಕಲಿ ಆದೇಶ ಪ್ರತಿ ವೈರಲ್ – ಜಿಲ್ಲಾಧಿಕಾರಿ ಅಧಿಕೃತ ಪ್ರಕಟಣೆ

ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ಕಾಲೇಜುಗಳಿಗೆ ರಜೆ ಎಂದು ಸಾರುವ   ಜಿಲ್ಲಾಧಿಕಾರಿ ಆದೇಶದ ನಕಲಿ ಪ್ರತಿ ಹರಿದಾಡಿದ ಪರಿಣಾಮ ದ ಕ ಜಿಲ್ಲಾಧಿಕಾರಿ ಇದಕ್ಕೆ ಸ್ಪಷ್ಟನೆ ನೀಡಿದ್ದು ನಾಳೆ ಅಂದರೆ ಜು.18 ರಂದು ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭವಾಗಲಿದೆ ಎಂದು ಸ್ಫಷ್ಟನೆ ನೀಡಿದ್ದಾರೆ. ಎಂದಿನಂತೆ ಶಾಲಾ, ಕಾಲೇಜುಗಳಲ್ಲಿ ತರಗತಿ ನಡೆಯಲಿವೆ. ದ.ಕ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಇದ್ದು  ಮೀನುಗಾರರಿಗೆ ಮಾತ್ರ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

Read More

ರಾತ್ರಿಯಿಡೀ ‘ಧನಿಯಾ’ ನೆನೆಸಿಟ್ಟ ‘ನೀರನ್ನ’ ಬೆಳಿಗ್ಗೆ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ.?

ಅಡುಗೆ ಮನೆಯಲ್ಲಿ ಕೊತ್ತಂಬರಿ ಸೊಪ್ಪು ಮುಖ್ಯ ವಸ್ತುವಾಗಿದೆ. ಕೊತ್ತಂಬರಿ ಸೊಪ್ಪನ್ನ ಬಹುತೇಕ ಎಲ್ಲಾ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಸೊಪ್ಪಿನ ಹಲವಾರು ಔಷಧೀಯ ಗುಣಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದ್ದರಿಂದಲೇ ನಮ್ಮ ಪೂರ್ವಜರು ಕೊತ್ತಂಬರಿ ಸೊಪ್ಪನ್ನ ಆಹಾರದ ಭಾಗವಾಗಿ ಮಾಡಿಕೊಂಡಿದ್ದರು. ಆದ್ರೆ, ಅಡುಗೆಯಲ್ಲಿ ಬಳಸುವ ಧನಿಯಾ ಪುಡಿಯೊಂದಿಗೆ ಮಾತ್ರವಲ್ಲ. ಧನಿಯಾ ನೀರು ಕುಡಿಯುವುದರಿಂದಲೂ ಹಲವಾರು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? ಧನಿಯಾವನ್ನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿದರೆ ಹಲವಾರು ಪ್ರಯೋಜನಗಳಿವೆ. * ತೂಕ ಇಳಿಸಿಕೊಳ್ಳಲು…

Read More

ಕನ್ನಡಿಗರಿಗೆ ಭರ್ಜರಿ ಗುಡ್‌ ನ್ಯೂಸ್‌ : ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ಕಡ್ಡಾಯ

ಬೆಂಗಳೂರು : ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗ ಕನ್ನಡಿಗರಿಗೆ ಸಿಗಬೇಕು, ಕರ್ನಾಟಕದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಹುತೇಕ ಖಾಸಗಿ ಕಂಪೆನಿಗಳು ಅನ್ಯ ಭಾಷಿಕರಿಗೆ ಹೆಚ್ಚಿನ ಉದ್ಯೋಗಗಳನ್ನು ನೀಡುತ್ತಿರುವುದನ್ನು ಮನಗಂಡ ನಮ್ಮ ಸರ್ಕಾರ ಸಚಿವ Santosh Lad ಅವರ ಮುತುವರ್ಜಿಯಲ್ಲಿ ಖಾಸಗಿ ಕಂಪೆನಿಗಳ ಉದ್ಯೋಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿದೇಯಕವನ್ನು ಸಂಪುಟ ಅಂಗೀಕರಿಸಿದೆ. ಇದರಿಂದಾಗಿ ಖಾಸಗಿ ಕಂಪೆನಿಗಳು ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ 50% , ನಾನ್ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ 75% ಹಾಗೂ ಸಿ & ಡಿ ದರ್ಜೆಯ ಹುದ್ದೆಗಳಲ್ಲಿ 100% ಮೀಸಲಾತಿಯನ್ನು ಕನ್ನಡಿಗರಿಗೆ…

Read More

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭೂ ಕುಸಿತ

ಸಕಲೇಶಪುರ :ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು ಕೊಲ್ಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬುಧವಾರ ಮತ್ತೆ ಭೂ ಕುಸಿತ ಸಂಭವಿಸಿದೆ. ಭಾರೀ‌ ಮಳೆಯಿಂದ ಕೊಲ್ಲಹಳ್ಳಿ ಬಳಿ ತಡೆಗೋಡೆ ಕುಸಿತವಾಗಿದೆ. ಸುಮಾರು 25 ಅಡಿಗು ಹೆಚ್ಚು ಪ್ರಮಾಣದ ಮಣ್ಣು ಹಾಕಿ ನಿರ್ಮಿಸಿದ್ದ ರಸ್ತೆ ಇದಾಗಿದ್ದು ಸೂಕ್ತ ತಡೆಗೋಡೆ ನಿರ್ಮಿಸದೆ ಇದ್ದ ಕಾರಣ ಮಣ್ಣು ಕೊಚ್ಚಿ ಹೋಗುತ್ತಿದೆ. 500 ಮೀಟರ್ ಉದ್ದಕ್ಕೆ ರಸ್ತೆಗೆ ಹೊಂದಿಕೊಂದ‌ ತಡೆಗೋಡೆ ಕುಸಿಯುತ್ತಿದ್ದು, ಮಳೆ ಹೆಚ್ಚಾದರೆ ಚತುಷ್ಪಥ ರಸ್ತೆಯ ಒಂದು ಭಾಗದ ಕಾಂಕ್ರಿಟ್ ರಸ್ತೆಯೇ ಕೊಚ್ಚಿ…

Read More

ಪಂಚೆ ಹಾಕಿ ಮಾಲ್‌ಗೆ ಬಂದಿದ್ದ ಅನ್ನದಾತನನ್ನು ಒಳಗೆ ಬಿಡದ ಜಿಟಿ ಮಾಲ್ ಸಿಬ್ಬಂದಿ..!

ಪಂಚೆ ಹಾಕಿಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ಸಿಬ್ಬಂದಿ ದರ್ಪ ತೋರಿದ ಘಟನೆ ನಡೆದಿದೆ. ಹಾವೇರಿ ಮೂಲದ ನಾಗರಾಜ್ ಎನ್ನುವರು ಜುಲೈ 16ರಂದು ತಮ್ಮ ತಂದೆ ತಾಯಿಗೆ ಸಿನಿಮಾ ತೋರಿಸಲು ಜಿಟಿ ಮಾಲ್ ಗೆ ಕರೆದೊಯ್ದಿದ್ದಾರೆ. ಆದರೆ, ನಾಗರಾಜ್ ತಂದೆ ಪಂಚೆ ಹಾಕಿಕೊಂಡು ತಲೆಗೆ ಪಟಗ ಸುತ್ತಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಮಾಲ್​ ಒಳಗೆ ಪ್ರವೇಶಿಸಲು ನಿರಾಕರಿಸಿದ್ದಾರೆ. ಪುತ್ರ ನಾಗರಾಜ್ ಎಂಬುವರು ಒಳಗೆ ಬಿಡಿ ಎಂದು ಇಷ್ಟು ಬಾರಿ…

Read More

ಈರುಳ್ಳಿ ಸಿಪ್ಪೆಯಲ್ಲಿ ಅಡಗಿದೆ ‘ಆರೋಗ್ಯ’ದ ಗುಟ್ಟು

ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ನಾವು ಅಡುಗೆಗೆ ಬಳಸುತ್ತೇವೆ. ಆದರೆ ಅದರ ಸಿಪ್ಪೆಯನ್ನು ನಾವು ಎಸೆಯುತ್ತೇವೆ. ಆದರೆ ಈ ಸಿಪ್ಪೆಗಳಿಂದಲೂ ಕೂಡ ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. * ನಿಮಗೆ ಗಂಟಲು ನೋವು ಕಾಡುತ್ತಿದ್ದರೆ ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಸೇವಿಸಿ. ಇದರಲ್ಲಿ ಉರಿಯೂತದ ಗುಣಗಳಿರುವುದರಿಂದ ಗಂಟಲು ನೋವು ಬೇಗ ವಾಸಿಯಾಗುತ್ತದೆ. * ಕೂದಲನ್ನು ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಿದ ನೀರಿನಲ್ಲಿ ತೊಳೆಯಿರಿ. ಇದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲು ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯುವಂತೆ…

Read More

ನಕಲಿ ದಾಖಲೆ ಸೃಷ್ಟಿಸಿ ವಾಹನ ಮಾರಾಟ : 2.5 ಕೋಟಿ ಮೌಲ್ಯದ 17 ಕಾರುಗಳು ವಶಕ್ಕೆ, ಇಬ್ಬರು ಅರೆಸ್ಟ್

ಬೆಂಗಳೂರು : ನಕಲಿ ದಾಖಲೆ ಮತ್ತು ನೋಂದಣಿ ಸಂಖ್ಯೆ ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, 2.5 ಕೋಟಿ ಮೌಲ್ಯದ 17 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಗಳಿಂದ ಇನ್ನೋವಾ, ಫಾರ್ಚೂನರ್, ಮಹೀಂದ್ರಾ ಜೀಪ್, ಹ್ಯೂಂಡೈ ಕ್ರೆಟಾ ಸೇರಿದಂತೆ 2.5 ಕೋಟಿ ಮೌಲ್ಯದ 17 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೌದು ನಕಲಿ ದಾಖಲೆ ಮತ್ತು ನೋಂದಣಿ ಸಂಖ್ಯೆ ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡುವ ಮೂಲಕ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಬಯಲಿಗೆಳೆದಿರುವ ಸಿಸಿಬಿಯ ಪಶ್ಚಿಮ ವಿಭಾಗದ…

Read More

 ಮಂಗಳೂರು: ಹಿರಿಯ ರಂಗನಿರ್ದೇಶಕ ‘ಗುಡ್ಡದ ಭೂತ’ದ ಸೃಷ್ಟಿಕರ್ತ ಸದಾನಂದ ಸುವರ್ಣ ನಿಧನ

ಮಂಗಳೂರು: ಹಿರಿಯ ರಂಗನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ಸಿನಿಮಾ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ (93) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಮಧ್ಯಾಹ್ನ 1ರಿಂದ 3ರವರೆಗೆ ಪುರಭವನದಲ್ಲಿ ವ್ಯವಸ್ಥೆ ಮಾಡಲಾಗುವುದು. ಬಳಿಕ ಅವರ ಬಯಕೆಯಂತೆ ದೇಹದಾನವನ್ನು ಮಾಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಕನ್ನಡದಲ್ಲಿ ಅತ್ಯಂತ ಯಶಸ್ವಿ ರಂಗಭೂಮಿ ನಿರ್ದೇಶಕರಾಗಿ ನೂರಾರು ನಾಟಕಗಳನ್ನು ನಿರ್ದೇಶಿಸಿದ ಇವರು ಕೋರ್ಟ್‌ಮಾರ್ಷಲ್, ಉರುಳು, ಮಳೆನಿಲ್ಲುವವರೆಗೆ, ಗುಡ್ಡದ ಭೂತ, ಸುಳಿ ಮುಂತಾದವು ಪ್ರಯೋಗಾತ್ಮಕ, ಸದಭಿರುಚಿಯ…

Read More

ಉಡುಪಿ: ಮನೆಯಲ್ಲಿ ಅಗ್ನಿ ಅವಘಡ- ಗಂಭೀರ ಗಾಯಗೊಂಡಿದ್ದ ಪತ್ನಿ ಚಿಕಿತ್ಸೆ ಫಲಿಸದೆ ಮೃತ್ಯು..!

ಉಡುಪಿ: ಉಡುಪಿ ನಗರದ ಮನೆಯೊಂದರಲ್ಲಿ ನಡೆದಿದ್ದ ಭಾರೀ ಬೆಂಕಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ್ ಶೆಟ್ಟಿ ಅವರ ಪತ್ನಿ ಅಶ್ವಿನಿ (45) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿನ್ನೆ ಮುಂಜಾನೆ ನಡೆದಿದ್ದ ಅಗ್ನಿ ಅವಘಡದಲ್ಲಿ ಅಶ್ವಿನಿ ಅವರ ಪತಿ ರಮಾನಂದ್ ಶೆಟ್ಟಿ ಮೃತಪಟ್ಟಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಕೂಡ ಮೃತಪಟ್ಟಿದ್ದು ಕುಟುಂಬದಲ್ಲಿ ಶೋಕ ಮುಗಿಲು ಮುಟ್ಟಿದೆ. ಉಡುಪಿ ನಗರದಲ್ಲಿ ವಾಸ ಮಾಡುತ್ತಿದ್ದ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಮನೆಯಲ್ಲಿ ನಿನ್ನೆ…

Read More