ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿ ಮಹಿಳೆಗೆ ಒಂದೇ ತಿಂಗಳಲ್ಲಿ 1ಕೋಟಿಗೂ ಅಧಿಕ ಹಣ ವಂಚನೆ
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿ ಮಹಿಳೆಯೊಬ್ಬರು 1.65 ಕೋಟಿ ರೂ. ಹಣ ವಂಚನೆಗೊಳಗಾದ ಬಗ್ಗೆ ಮಂಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಇನ್ ಸ್ಟಾಗ್ರಾಂನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ, ಅಂಕಿತ್ ಪಟೇಲ್ ಎಂಬ ಹೆಸರಿನ ಅಪರಿಚಿತ ಅವರ ವಾಟ್ಸ್ಆ್ಯಪ್‌ನಲ್ಲಿ ಚ್ಯಾಟ್ ಮಾಡಿ, ಷೇರ್ ಮಾರ್ಕೆಟ್ ಗ್ರೂಪಿಗೆ ಜಾಯಿನ್ ಮಾಡಿಸಿದ್ದ. ಬಳಿಕ Fidelity pearl of south Asia ಎಂಬ ಷೇರುಮಾರುಕಟ್ಟೆ ವಾಟ್ಸ್ಆ್ಯಪ್…

