ಉದ್ಯಮಿ ಐಕಳ ಹರೀಶ್ ಶೆಟ್ಟಿ ಅವರ ಮನೆ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಮುಲ್ಕಿ: ಐಕಳ ನಿವಾಸಿ, ಉದ್ಯಮಿ ಐಕಳ ಹರೀಶ್ ಶೆಟ್ಟಿ ಅವರ ಮನೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಕಣ್ಣು ತಪ್ಪಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಸಹಿತ ಮೂವರನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸಿದ್ದಕಟ್ಟೆ ಸಂಗಬೆಟ್ಟು ಗ್ರಾಮದ ನಿವಾಸಿ ಹುಸೈನಬ್ಬ ಯಾನೆ ಸುಹೈಲ್ (33), ಬಂಟ್ವಾಳ ಕೊಲ್ನಾಡು ಗ್ರಾಮದ ನಿವಾಸಿ ಝುಬೈರ್ ಹಾಗೂ ಕಾಸರಗೋಡು ನಿವಾಸಿ ಕಲಾಮ್ ಬಂಧಿತ ಆರೋಪಿಗಳು. ಈ ಪೈಕಿ ಹುಸೈನಬ್ಬ ಯಾನೆ ಸುಹೈಲ್ ಹಾಗೂ ಝಬೈರ್ ದರೋಡೆ ಪ್ರಕರಣದಲ್ಲಿ ನೇರ ಭಾಗಿಗಳಾಗಿದ್ದು,…

