ರಿಷಬ್ ಅದ್ಭುತ ಅಭಿನಯ ತೋರಿಸೋದು ಉದ್ದೇಶವಾಗಿತ್ತು, ನೋವಾಗಿದ್ದರೆ ಕ್ಷಮಿಸಿ : ರಣವೀರ್ ಸಿಂಗ್
ನವದೆಹಲಿ : ತುಳುನಾಡಿನ ದೈವದ ಬಗ್ಗೆ ನಟ ರಿಷಬ್ ಶೆಟ್ಟಿಯ ಅದ್ಭುತ ಅಭಿನಯ ತೋರಿಸೋದು ನನ್ನ ಉದ್ದೇಶವಾಗಿತ್ತು. ಆ ಭರದಲ್ಲಿ ತಪ್ಪಾಗಿದೆ. ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಬಾಲಿವುಡ್ ನಟ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ಈ ಕುರಿತು ರಣವೀರ್ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. `ಕಾಂತಾರ ಚಾಪ್ಟರ್ 1′ ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ನಾನೊಬ್ಬ ನಟನಾಗಿ ಆ ನಿರ್ದಿಷ್ಟ ದೃಶ್ಯದಲ್ಲಿ ನಟಿಸುವುದು ಎಷ್ಟು ಸವಾಲಾಗಿರುತ್ತದೆ ಎನ್ನೋದು ನನಗೆ ಚೆನ್ನಾಗಿ ಗೊತ್ತು….

