ದೀಪಾವಳಿ ಹಬ್ಬದೊಳಗೆ ಸಿದ್ದರಾಮಯ್ಯ ಸರ್ಕಾರ ಪತನ ಫಿಕ್ಸ್ : MLC C.T ರವಿ ಸ್ಪೋಟಕ ಹೇಳಿಕೆ
ದೀಪಾವಳಿ ಹಬ್ಬದೊಳಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಎಂಎಲ್ ಸಿ ಸಿ.ಟಿ. ರವಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದೊಳಗೆ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ. ಸಂಕ್ರಾಂತಿ ದೂರವಾಯ್ತು, ದೀಪಾವಳಿಗೆ ಸರ್ಕಾರ ಪತನ ಖಚಿತ, ಹೊಸ ಸಿಎಂ ಹೊಸ ಸರ್ಕಾರದ ಬಗ್ಗೆ ಕಾಲವೇ ನಿರ್ಣಯ ಮಾಡಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಟೈಂ ಬಾಂಬ್ ಫಿಕ್ಸ್ ಆಗಿದ್ದು, ಸಿದ್ದು ಸರ್ಕಾರದ ಪತನಕ್ಕೆ ಕಾಂಗ್ರೆಸ್…

