ಮಂಗಳೂರು: ವಿದೇಶದಲ್ಲಿ ಕುಳಿತು ಭಗವದ್ಗೀತೆ ಮತ್ತು ಮಹಿಳೆ ಬಗ್ಗೆ ಅವಹೇಳನ ಪೋಸ್ಟ್- ಮುಂಬೈ ನಲ್ಲಿ ಆರೋಪಿ ಅರೆಸ್ಟ್
ಮಂಗಳೂರು : 2024ರ ಫೆಬ್ರವರಿ ತಿಂಗಳಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಯಬಿಟ್ಟು ಸಾಮರಸ್ಯ ಕೆಡಿಸುವ ಯತ್ನ ಮಾಡಿದ್ದು ಘಟನೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದೇಶದಲ್ಲಿ ಅಡಗಿದ್ದ ಆರೋಪಿಯನ್ನು ಇದೀಗ ಅಲ್ಲಿಂದ ಬರುವಾಗಲೇ ಮುಂಬೈ ಏರ್ಪೋರ್ಟ್ ನಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಮುಂಬೈನ ಚಾರ್ಕೋಪ್ ಎಂಬಲ್ಲಿನ ನಿವಾಸಿ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ (56) ಎಂದು ಗುರುತಿಸಲಾಗಿದೆ. ಅವಹೇಳನ ಪೋಸ್ಟ್ ವೈರಲ್ ಮಾಡಿದ ಬಗ್ಗೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು….

