ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ದರೋಡೆಕೋರ ಪಾತಕಿಗಳು ಮಂಗಳೂರಿನಲ್ಲಿ ಅರೆಸ್ಟ್..!
ಮಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರಿನ ಇಬ್ಬರು ಕುಖ್ಯಾತ ದರೋಡೆಕೋರರ ಕಾಲಿಗೆ ಸಿಸಿಬಿ ಪೊಲೀಸರು ಗುಂಡಿಕ್ಕಿದ ಘಟನೆ ಹುಬ್ಬಳ್ಳಿ ಸಮೀಪ ಭಾನುವಾರ ಸಂಭವಿಸಿದೆ. ಮಂಗಳೂರಿನ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿದೆ. ಭರತ್ ಮತ್ತು ಫಾರೂಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದಾರೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ಮಹಾರಾಷ್ಟ್ರದ ಸಾಂಗ್ಲಿಯ ರಾಹುಲ್ ಸುರ್ವೆ ಎಂಬವರ ಕಾರು ಅಡ್ಡಗಟ್ಟಿ…

