ಮಂಗಳೂರು: ಮರದ ದಿಮ್ಮಿ ಅಕ್ರಮ ಸಾಗಾಟ- ಪ್ರಕರಣ ದಾಖಲು..!
ಮಂಗಳೂರು: ನಗರದ ಕದ್ರಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿರುವ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಪತ್ತೆ ಹಚ್ಚಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ಎರಡು ಮರಗಳ ರೆಂಬೆಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಅನುಮತಿ ಪಡೆಯಲಾಗಿತ್ತು ಎನ್ನಲಾಗಿದೆ. ಆದರೆ ದೇವದಾರ್ ಮತ್ತು ಸಾಗುವಾನಿ ಸಹಿತ 8 ಮರಗಳಿಗೆ ಕೊಡಲಿಯೇಟು ಹಾಕಿದ್ದಲ್ಲದೆ ಮರದ ದಿಮ್ಮಿಗಳನ್ನು ಖಾಸಗಿ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ…

