admin

ಉಳ್ಳಾಲ: ಗ್ಯಾಸ್ ಸಿಲಿಂಡರ್ ಸ್ಪೋಟ – ತಾಯಿ ಮತ್ತು ಮಕ್ಕಳಿಗೆ ಗಂಭೀರ..!!

ಉಳ್ಳಾಲ: ಮನೆಯೊಳಗಡೆ ಭಾರೀ ಸ್ಫೋಟವುಂಟಾಗಿ ತಾಯಿ ಹಾಗೂ ಮೂವರು ಹೆಣ್ಮಕ್ಕಳು ಗಂಭೀರ ಸುಟ್ಟ ಗಾಯಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ  ಘಟನೆ ಸಂಭವಿಸಿದೆ ಎನ್ನಲಾಗಿದೆ. ಶನಿವಾರ ಮಧ್ಯರಾತ್ರಿ ನಾಟೆಕಲ್ ಮಂಜನಾಡಿ ಎಂಬಲ್ಲಿ ಘಟನೆ ಸಂಭವಿಸಿದೆ. ಮಂಜನಾಡಿಯ ಖಂಡಿಕ ನಿವಾಸಿ ವಿದೇಶದಲ್ಲಿರುವ ಮುತ್ತಲಿಬ್ ಎಂಬವರ ಮನೆಯಲ್ಲಿ ಸ್ಫೋಟ ನಡೆದಿದೆ. ಮುತ್ತಲಿಬ್ ಪತ್ನಿ ಖುಬ್ರಾ ಮತ್ತು ಮೂವರು ಮಕ್ಕಳಾದ ಮೆಅದಿಯಾ, ಮಝಿಯಾ, ಮಾಯಿದಾ ಅವರು ಒಂದೇ ಕೊಠಡಿಯಲ್ಲಿ ಮಲಗಿದ್ದರು….

Read More

ಕೋಡಿ ಬೀಚಿನಲ್ಲಿ ಈಜಲು ಬಂದ ಮೂವರು ಸಹೋದರರು ನೀರು ಪಾಲು…!

ಕುಂದಾಪುರ : ಇಲ್ಲಿಗೆ ಸಮೀಪದ ಕೋಡಿ ಬೀಚಿನಲ್ಲಿ ಕುಟುಂಬ ಸಮೇತರಾಗಿ ಬಂದಿದ್ದ ಸದಸ್ಯರ ಪೈಕಿ ಸಮುದ್ರದಲ್ಲಿ ಈಜಾಡಲು ಹೋಗಿ ಮೂವರು ಯುವಕರು ಸಮುದ್ರ ಪಾಲಾದ ಘಟನೆ ಶನಿವಾರ ಸಂಜೆ ನಡೆದಿದೆ. ತಕ್ಷಣದ ಮಾಹಿತಿಯಂತೆ ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎಂಬುವರ ಮಗ ಧನರಾಜ್ (23) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರ ಸಹೋದರನ ಪುತ್ರ ದರ್ಶನ್ (18) ಸಮುದ್ರ ಪಾಲಾಗಿದ್ದು ಇದುವರೆಗೆ ಪತ್ತೆ…

Read More

BIGG NEWS: ಕೇಂದ್ರ ಸರ್ಕಾರದಿಂದ ಸಾರ್ವಜನಿಕರ ಸಂದೇಶಗಳ ಮೇಲೆ ಗರಿಷ್ಠ 6 ತಿಂಗಳವರೆಗೆ ನಿಗಾ…!

ನವದೆಹಲಿ: ಕೇಂದ್ರ ಸರ್ಕಾರವು ದೂರಸಂಪರ್ಕ (ಸಂದೇಶಗಳ ಕಾನೂನುಬದ್ಧ ತಡೆಗಾಗಿ ಕಾರ್ಯವಿಧಾನಗಳು ಮತ್ತು ಸುರಕ್ಷತಾ ಕ್ರಮಗಳು) ನಿಯಮಗಳು, 2024 ಅನ್ನು ಹೊರಡಿಸಿದೆ, ಇದು ಕಾನೂನು ಜಾರಿ ಮತ್ತು ಭದ್ರತಾ ಸಂಸ್ಥೆಗಳಿಗೆ ನಿರ್ದಿಷ್ಟ ಕಾರಣಗಳು ಮತ್ತು ಸಮಯಾವಧಿಗಳಿಗಾಗಿ ಸಂದೇಶಗಳನ್ನು ತಡೆಹಿಡಿಯುವ ಕಾರ್ಯವಿಧಾನಗಳನ್ನು ವಿವರಿಸುತ್ತದೆ. ಖಾಸಗಿ ಮಾಧ್ಯಮಗಳ ವರದಿಯ ಪ್ರಕಾರ, ಹೊಸ ನಿಯಮಗಳು ಅಸ್ತಿತ್ವದಲ್ಲಿರುವ ಕರೆ ತಡೆ ಪ್ರೋಟೋಕಾಲ್ಗಳಿಗೆ ಹೋಲುತ್ತವೆ ಮತ್ತು ವಿವಿಧ ಏಜೆನ್ಸಿಗಳಿಂದ ಅನಧಿಕೃತ ಹಸ್ತಕ್ಷೇಪದ ಸುತ್ತಲಿನ ಹಿಂದಿನ ವಿವಾದಗಳನ್ನು ಗಮನದಲ್ಲಿಟ್ಟುಕೊಂಡು ಖಾಸಗಿತನದ ಹಕ್ಕಿನ ಬಗ್ಗೆ ಚರ್ಚೆಗಳನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆಯಿದೆ….

Read More

ಬೆಳ್ತಂಗಡಿ: ವಿಪರೀತ ಜ್ವರದಿಂದ ಬಳಲುತ್ತಿದ್ದ ಮಹಿಳೆ ಸಾವು

ಬೆಳ್ತಂಗಡಿ : ವಿಪರೀತ ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಮೃತರನ್ನು ಬಳಂಜದ ಜನತಾ ಕಾಲನಿ ನಿವಾಸಿ ವಸಂತಿ (45) ಎಂದು ಗುರುತಿಸಲಾಗಿದೆ. ಅವರು ಕೆಲವು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಡಿಸೆಂಬರ್ 6 ರಂದು ಸಾವನ್ನಪ್ಪಿದ್ದಾರೆ. ಮೃತರು ಮುಂಬಯಿಯಲ್ಲಿ ಉದ್ಯೋಗದಲ್ಲಿರುವ ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Read More

ಮಂಗಳೂರು : ಮಾದಕದ್ರವ್ಯ ಎಂಡಿಎಂಎ ಮಾರಾಟ – ನೈಜೀರಿಯಾ ಪ್ರಜೆ ಸೇರಿದಂತೆ ಇಬ್ಬರ ಅರೆಸ್ಟ್..!

ಮಂಗಳೂರು : ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 200 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಅಂದ್ರಹಳ್ಳಿ ನಿವಾಸಿ ದರ್ಶನ್ ಕೆ.ಜಿ.(25), ನೈಜೀರಿಯಾ ಪ್ರಜೆ, ಹಾಲಿ ಬೆಂಗಳೂರಿನ ಬೆಟ್ಟಹಲ್ಸೂರ್ ನಲ್ಲಿ ವಾಸ್ತವ್ಯವಿರುವ ಚಿಕ ಜೋಸೇಫ್ ಇಝಿ(26) ಬಂಧಿತ ಆರೋಪಿಗಳು. ಇತ್ತೀಚೆಗೆ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಕ್ಬಾಲ್ ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಈ…

Read More

ಮಂಗಳೂರು: ಕೊಲೆಯತ್ನ ಪ್ರಕರಣ ಬಜರಂಗದಳದ ಸಂಯೋಜಕ ಅರ್ಜುನ್ ಮಾಡೂರು ಬಂಧನ

ಮಂಗಳೂರು: ಹಲ್ಲೆಗೆ ಪ್ರತೀಕಾರಕ್ಕೆ ನಡೆದ ತಲವಾರ ದಾಳಿ ನಡೆಸಿದ್ದರೆನ್ನಲಾದ ಪ್ರಕರಣದಲ್ಲಿ ಬಜರಂಗದಳದ ಸಂಯೋಜಕ ಅರ್ಜುನ್ ಮಾಡೂರುನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಅ.16ರಂದು ರಾತ್ರಿ ಕುಂಪಲದ ಶರತ್, ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ನಡುವೆ ನಡೆದಿದ್ದ ಸಣ್ಣ ಅಪಘಾತ ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಶರತ್ ಸ್ನೇಹಿತ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ‌ ಠಾಣೆಗೆ ಭೇಟಿ ನೀಡಿ ಇನ್‌ಸ್ಪೆಕ್ಟರ್ ಕೊಠಡಿಯೊಳಗೆ ಕಾರು ಚಾಲಕರಾದ ಶರತ್, ಖಲೀಲ್‌ರೊಂದಿ ಸಂಧಾನ ನಡೆಸುತ್ತಿದ್ದ ವೇಳೆ ಖಲೀಲ್…

Read More

ಮಂಗಳೂರು: ಮನೆಗೆ ನುಗ್ಗಿ ಅನ್ಯಕೋಮಿನ ಯುವಕನಿಂದ ಯುವತಿ ಮತ್ತು ಮಹಿಳೆಯ ಮೇಲೆ ಹಲ್ಲೆ..! ಆರೋಪಿಯ ಬಂಧನ

ಮಂಗಳೂರು: ಹಿಂದೂ ಯುವತಿ ಮತ್ತು ಮಹಿಳೆ ಇರುವ ಮನೆಗೆ ಅನ್ಯ ಕೋಮಿನ ಯುವಕನೋರ್ವ ಬಂದು ಕಿಟಾಲೆ ಮತ್ತು ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ಮಾಹಿತಿ ಪಡೆದ ಸ್ಥಳೀಯರು ಯುವಕಕನ್ನು ಹಿಡಿದು ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಈತ ಮಹಿಳೆಗೆ ರವಿ ಎಂಬ ಹೆಸರಿನಲ್ಲಿ ಒಂದು ವರ್ಷದ ಹಿಂದೆ ಪರಿಚಯವಾಗಿದ್ದು ಆಗಾಗ ಮಹಿಳೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರವೂ ಇತ್ತೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಬಂದಿದ್ದ ಯುವಕ ಮಹಿಳೆ…

Read More

ಪುತ್ತೂರು: ಸೊಸೈಟಿಯಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ…! ಕೊಲೆ ಶಂಕೆ

ಪುತ್ತೂರು : ಡಿ.5 ರಂದು ಸೊಸೈಟಿಯಿಂದ ಹಣ ವಿಡ್ರಾ ಮಾಡಿ ತೆರಳಿದ್ದ ಪುತ್ತೂರಿನ ಪಡ್ಡಾಯೂರಿನ ನಿವಾಸಿಯಾಗಿರುವ ನಂದಕುಮಾರ್(61) ಶವವಾಗಿ ಪತ್ತೆಯಾಗಿದ್ದಾರೆ. ನಂದಕುಮಾರ್ ಅವರು ವಿವೇಕನಾಂದ ಕಾಲೇಜಿನ ನಿವೃತ್ತ ಸಿಬ್ಬಂದಿಯಾಗಿದ್ದು, ಡಿಸೆಂಬರ್ 5 ರಂದು ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೊರಟಿದ್ದರು. ಈ ಸಂದರ್ಭ ಸಂಬಂಧಿಯೊಬ್ಬರಿಗೆ ಹಣ ನೀಡುವ ಸಲುವಾಗಿ ಸೊಸೈಟಿಯಿಂದ 1.40 ಲಕ್ಷ ರೂ. ಹಣ ವಿಡ್ರಾ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಪುತ್ತೂರಿನ ಸಾಲ್ಮರ ಬಳಿ ರೋಟರಿಪುರ ಎಂಬಲ್ಲಿಯ ನೀರು ಹರಿಯುವ ತೋಡಿನಲ್ಲಿ ಇವರ…

Read More

ಮಂಗಳೂರು: ಎಪಿಕೆ ಫೈಲ್ ಕಳಿಸಿ ಫ್ಲಿಪ್‌ಕಾರ್ಟ್ ಖಾತೆ ಹ್ಯಾಕ್- 1,31,000 ಹಣ ವಂಚಕ ದೆಹಲಿಯಲ್ಲಿ ಅರೆಸ್ಟ್..!

ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಎಪಿಕೆ ಫೈಲ್‌ ಅನ್ನು ವಾಟ್ಸ್ಆ್ಯಪ್‌ಗೆ ಕಳುಹಿಸಿ ಮಂಗಳೂರಿನ ಯುವಕನೊಬ್ಬನಿಗೆ 1.31 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಸೆನ್ ಕ್ರೈಂ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ದೆಹಲಿಯ ಮಾಳವೀಯಾ ನಗರದ ಪಂಚಶೀಲ ವಿಹಾರದ ಗೌರವ್ ಮಕ್ವಾನ್(25) ಬಂಧಿತ ಆರೋಪಿ. ಮಂಗಳೂರಿನ ಕೊಟ್ಟಾರದ ಯದುನಂದನ್ ಆಚಾರ್ಯ ಎಂಬವರ ವಾಟ್ಸ್ಆ್ಯಪ್‌ಗೆ VAHAN PARIVAHAN.apk ಫೈಲ್ ಬಂದಿತ್ತು. ಆ ಫೈಲ್ ಅನ್ನು ಡೌನ್‌ಲೋಡ್ ಮಾಡುತ್ತಿದ್ದಂತೆ ಅವರ ಫ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಆಗಿದೆ. ಸೈಬರ್ ವಂಚಕರು…

Read More

ಮಂಗಳೂರು: ಸಹಾಯ ಮಾಡುವ ನೆಪದಲ್ಲಿ ಜ್ಯೂಸ್ ಕೊಟ್ಟು ಅತ್ಯಾಚಾರ- ವಿಡಿಯೋ ಮಾಡಿ ಬ್ಲಾಕ್ ಮೇಲ್…!

ಮಂಗಳೂರು: ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದು ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ತಮ್ಮ ಅತ್ಯಾಚಾರ ನಡೆಸಿದ್ರೆ, ಅಣ್ಣ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ಥೆ ಯುವತಿಯೊಬ್ಬಳು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡಿದ್ದಾಳೆ. ಜು. 21ರಂದು ಸಂತ್ರಸ್ಥೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಗರದ ಕದ್ರಿ ಬಳಿ  ಕಾರು ಕೆಟ್ಟು ಹೋಗಿದೆ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ ಸವಾರ ಮೊಹಮ್ಮದ್‌ ಶಫಿನ್‌ ಎಂಬಾತ ಕಾರನ್ನು ಸರಿಪಡಿಸಿ, ಬಳಿಕ ಆಕೆಯನ್ನು ಅದೇ…

Read More