ಶಾಂತಿ ಕದಡುವ ವಿಡಿಯೋ ವೈರಲ್- SDPI ಮುಖಂಡರ ವಿರುದ್ಧ ಪ್ರಕರಣ ದಾಖಲು
ಉಡುಪಿ: ಇಂದು ಹಮ್ಮಿಕೊಳ್ಳಲಾದ “ಚಲೋ ಬೆಳಗಾವಿ” ಅಂಬೇಡ್ಕರ್ ಜಾಥಾ ಕಾರ್ಯಕ್ರಮಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿ ನಡೆಸಿ ಶಾಂತಿ ಕದಡುವ ವಿಡಿಯೋ ಮಾಡಿದ ಆರೋಪದಡಿ ಎಸ್ ಡಿ ಪಿ ಐ ಮುಖಂಡರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಎಸ್ ಡಿಪಿಐ ಮುಖಂಡರಾದ ಭಾಸ್ಕರ ಪ್ರಸಾದ್, ಶಾಹೀದ್ ಅಲಿ, ಅಪ್ಸರ್ ಕೊಡ್ಲಿಪೇಟೆ, ರಿಯಾಝ್ ಕಡುಂಬು ಅವರು ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ನಾವು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆನಮತಿ ಕೇಳಿಲ್ಲ, ಕೇವಲ ಮಾಹಿತಿಯನ್ನು ನೀಡಿದ್ದು, ಅವರು…

