admin

ಇದ್ಯಾವ ಸೀಮೆ ಪ್ರೀತಿಯೋ..!! ಮೂರು ಮಕ್ಕಳಿರುವ ವಿವಾಹಿತನ ಜೊತೆ 19 ವರ್ಷದ ಯುವತಿ ಎಸ್ಕೇಪ್….!!

ಮಂಗಳೂರು: ಈಗಿನ ಕಾಲದಲ್ಲಿ ಪ್ರೀತಿ- ಪ್ರೇಮ ಎಲ್ಲವೂ ಒಂದು ಅರ್ಥವಿಲ್ಲದ ಬಂಧವಾಗಿಬಿಟ್ಟಿದೆ. ಯಾವುದೋ ಆಮಿಷಕ್ಕೋ, ಆಕರ್ಷಣೆಗೋ ಬಲಿಯಾಗಿ ಹೆಣ್ಮಕ್ಕಳು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಪ್ರಾಯದ ತರುಣಿಯರು ಮುದುಕನನ್ನು ವಿವಾಹವಾಗೋದು, ಆಂಟಿಯರು ಶಾಲೆ ಕಲಿಯುವ ಬಾಲಕರೊಂದಿಗೆ ಓಡಿ ಹೋಗುವುದು ಇಂತಹ ಚಿತ್ರವಿಚಿತ್ರ ಸನ್ನಿವೇಶಗಳನ್ನು ನಾವು ಇತ್ತೀಚೆಗೆ ಸಮಾಜದಲ್ಲಿ ನೋಡುತ್ತಲೇ ಇರುತ್ತೇವೆ. ಕಾಮದಾಹಕ್ಕೋ, ಹಣದ ಆಸೆಗೋ ಇಂತಹ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಭವಿಷ್ಯವನ್ನು ತಾವೇ ನರಕಕ್ಕೆ ದೂಡಿಕೊಳ್ಳುವ ಯುವಜನತೆಗೆ ಯಾವಾಗ ಬುದ್ಧಿ ಬರುತ್ತೋ..? ಅದೇನೇ ಇರಲಿ…ಇದೀಗ ಇಲ್ಲೊಂದು ಅಂತಹುದೇ…

Read More

ಅಯ್ಯಪ್ಪ ಸ್ವಾಮಿಯ ಪವಾಡ: ಪುತ್ತೂರಿನ ಮಾತು ಬಾರದ ಯುವಕನಿಗೆ ಮಾತು ಕೊಟ್ಟ ಮಣಿಕಂಠ..!

ಪುತ್ತೂರು: ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸ್ವಾಮಿಯ ಮಹಿಮೆಯ ಪ್ರತ್ಯಕ್ಷ್ಯ ದರ್ಶನವಾಗುತ್ತದೆ ಎನ್ನುವ ಹಲವು ಸುದ್ದಿಗಳು ಎಲ್ಲೆಡೆ ಕೇಳಿ ಬರುತ್ತದೆ. ಇದೇ ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿಯ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತೆ. ಇಂತಹುದೇ ಒಂದು ಪವಾಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಒಂದು ಶಬ್ದ ಮಾತನಾಡಲೂ ಬಾಯಿ ಬರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ. ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ…

Read More

ಮುರುಡೇಶ್ವರದಲ್ಲಿ ಮುಳುಗಡೆಯಾದ 4 ವಿದ್ಯಾರ್ಥಿಗಳ ಕುಟುಂಬಕ್ಕೆ ಸಿಎಂ ತಲಾ 5 ಲಕ್ಷ ರೂ.ಪರಿಹಾರ

ಬೆಂಗಳೂರು :ಕೋಲಾರ ಜಿಲ್ಲೆಯ ಮುಳಬಾಗಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿದ್ದಾರೆ. ಇದೇ ವೇಳೆ ಘಟನೆ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅಧ್ಯಯನ ಪ್ರವಾಸದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ನಾಲ್ವರು ವಿದ್ಯಾರ್ಥಿಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.ನಾಲ್ವರು ವಿದ್ಯಾರ್ಥಿಗಳ ಪಾರ್ಥಿವ ಶರೀರವನ್ನು ಅವರವರ ಊರಿಗೆ ಕಳುಹಿಸುವಂತೆ ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ…

Read More

ಬಿಜೆಪಿ ಕಾರ್ಯಕರ್ತನ ಮೇಲೆ ಚಾಕು ಇರಿತ..!!

ಬದಿಯಡ್ಕ: ಬಿಜೆಪಿ ಕಾರ್ಯಕರ್ತನಾದ ರಂಜಿತ್ (30) ಮೇಲೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಮಧ್ಯಾಹ್ನದ ವೇಳೆಯಲ್ಲಿ ರಂಜಿತ್ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಹಳೆಯ ಪೊಲೀಸ್ ಕ್ವಾರ್ಟರ್‌ ಬಳಿ ಇಬ್ಬರು ತಡೆದು ನಿಲ್ಲಿಸಿದಾಳಿ ನಡೆಸಿದರೆಂದು ತಡೆಯಲು ಯತ್ನಿಸಿದಾಗ ರಂಜಿತ್ ಅವರ ಕೈಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ರಂಜಿತ್ ನನ್ನು ಆಸ್ಪತ್ರೆಗೆ ಕರೆದೊಯ್ದು,ಚಿಕಿತ್ಸೆ ನೀಡಲಾಯಿತು. ಈ ಘಟನೆಯ ಹಿಂದಿನ ಉದ್ದೇಶವೇನು ಎಂಬುದು ಸ್ಪಷ್ಟವಾಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರು ಈ ದಾಳಿಯ ಹಿಂದೆ ಅನ್ಯಮತೀಯರ…

Read More

ಉಡುಪಿ: ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆ..!

ಉಡುಪಿ: ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ಡಿಸೆಂಬರ್ 4 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾದ ಘಟನೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡನಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡನಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ಲಕ್ಷಮವ್ವ ಕುಮಾರ ಮಾಳವತ್ತರ (30) ಎಂಬ ಮಹಿಳೆಯು ತನ್ನ ಮೂವರು ಮಕ್ಕಳಾದ ಅಪೂರ್ವ (7), ಶ್ರೇಯಾ (5) ಹಾಗೂ ಮನೋಜ್ (2) ಎಂದು ಗುರುತಿಸಲಾಗಿದೆ. ಕಾಣೆಯಾದವರ ಚಹರೆ: ಲಕ್ಷಮವ್ವ…

Read More

ಮಂಗಳೂರು: ಅನ್ಯಮತೀಯ ಯುವಕನಿಂದ ಅತ್ಯಾಚಾರ ಪ್ರಕರಣ- ಆರೋಪಿಗಳ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ

ಮಂಗಳೂರು: ಯುವತಿಯೋರ್ವಳಿಗೆ ಸಹಾಯ ಮಾಡಲು ಬಂದ ಅನ್ಯಕೋಮಿನ ಯುವಕ ಆಕೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನಲ್ಲಿ‌ ನಡೆದಿದೆ. ಕಳೆದ ಜುಲೈ 21 ರಂದು ಯುವತಿಯ ಕಾರು ಕದ್ರಿಯಲ್ಲಿ ಕೆಟ್ಟು ನಿಂತಿತ್ತು. ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಕಾರನ್ನು ಸರಿಪಡಿಸಿದ್ದ. ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ್ ಬೈಲ್‌ನ‌ ಆಕೆಯ ಅಪಾರ್ಟ್ ಮೆಂಟ್ ಗೆ ಬಿಟ್ಟು ಬಂದಿದ್ದು, ಈ ವೇಳೆ‌ ಆಕೆಯ ಮೊಬೈಲ್ ನಂಬರ್ ಪಡೆದಿದ್ದ. ಯುವತಿ ಅಪಾರ್ಟ್…

Read More

ಸುರತ್ಕಲ್: ಹಿಂದೂ ಸಮಾಜ, ಸಂಘಟನೆ ಎಂದರೆ ರೈಗಳಿಗೆ ಅಲರ್ಜಿ ಯಾಕೆ..? ಡಾ.ಭರತ್ ಶೆಟ್ಟಿ

ಸುರತ್ಕಲ್: ಹಿಂದೂಗಳಿಗೆ ಮಾತ್ರ ಸದಾ ಬುದ್ದಿ ಹೇಳಲು ಬರುವ ಕಾಂಗ್ರೆಸ್ ಮಾಜಿ ಸಚಿವ ರಮಾನಾಥ ರೈಗಳದ್ದು ಮುಸ್ಲಿಂ ಸಮುದಾಯದ ಮೇಲೆ ಕುರುಡು ಪ್ರೇಮ , ಹಿಂದೂ ಸಮಾಜ ,ಸಂಘಟನೆ ಎಂದರೆ ಅಲರ್ಜಿ ಎಂದು ಡಾ.ಭರತ್ ಶೆಟ್ಟಿ ಕಿಡಿ ಕಾರಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಿಂಸಾಚಾರದ ವಿರುದ್ದ ಹಿಂದೂ ಸೇವಾ ಸಮಿತಿ ಮಂಗಳೂರಿನಲ್ಲಿ ಮಾಡಿದ ಪ್ರತಿಭಟನೆಯನ್ನು ಟೀಕಿಸಿರುವ ರೈಗಳು ಪ್ಯಾಲೆಸ್ತೀನ್ ಪರ ಹೋರಾಟವಾದಾಗ ಇಂತಹ ಬುದ್ದಿ ಮಾತು ತಪ್ಪಿಯೂ ಹೇಳಿಲ್ಲ, ವಕ್ಫ್ ಬೋರ್ಡ್ ಸಮಸ್ಯೆ ಗಂಭೀರವಾಗಿದ್ದರೂ ಹಿಂದೂ…

Read More

ಮಂಗಳೂರು : ಸ್ಕೂಟರ್ ಸ್ಕಿಡ್ – ಟ್ರಕ್‌ ಹರಿದು ಸವಾರ ಸಾವು..!

ಮಂಗಳೂರು : ರಸ್ತೆ ಮೇಲೆ ಬಿದ್ದಿದ್ದ ಮಣ್ಣಿನಿಂದಾಗಿ ಸ್ಕೂಟರ್ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದ ಸವಾರನ ಮೇಲೆ ಲಾರಿ ಹರಿದ ಘಟನೆ ಕಾವೂರು ಜಂಕ್ಷನ್ ಬಳಿ ನಡೆದಿದೆ. ಮೃತ ಸವಾರನನ್ನು ಪ್ರಕಾಶ್ ಅಂಚನ್ ಎಂದು ಗುರುತಿಸಲಾಗಿದೆ. ಪ್ರಕಾಶ್ ಅಂಚನ್ ತಮ್ಮ ಸ್ಕೂಟರ್‌ನಲ್ಲಿ ಮರಕಡ ಕಡೆಯಿಂದ ಕಾವೂರು ಕಡೆಗೆ ಬರುತ್ತಿದ್ದರು. ಈ ವೇಳೆ ಸ್ಕೂಟರ್‌ ಸ್ಕಿಡ್‌ ಆಗಿ ಸವಾರ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಲಾರಿಯೊಂದು ಪ್ರಕಾಶ್‌ ಅವರ ಮೇಲೆ ಹರಿದಿದೆ. ಲಾರಿಯ ಚಕ್ರ ದೇಹದ ಮೇಲೆ ಹರಿದ…

Read More

ಬೆಳ್ತಂಗಡಿ: ರಿಕ್ಷಾದಲ್ಲಿ ಅನ್ಯಕೋಮಿನ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ- ಆರೋಪಿಗಳಿಗೆ 5 ವರ್ಷ ಜೈಲು ಮತ್ತು ದಂಡ

ಬೆಳ್ತಂಗಡಿ: ಆಟೋರಿಕ್ಷಾದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸ್) ಎಫ್ಟಿಎಸ್‌ಸಿ 1 ನ್ಯಾಯಾಲಯದ ನ್ಯಾಯಾಧೀಶರಾದ ಡಿ. ವಿನಯ್ ಅವರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಇಳಂತಿಲ ಗ್ರಾಮದ ನಿವಾಸಿ ಅಬ್ದುಲ್ ಕರೀಂ (39) ಹಾಗೂ ಮೊಗ್ರು ಗ್ರಾಮದ ಅಟೋ ಚಾಲಕ ಸಾಧಿಕ್ (34) ಶಿಕ್ಷೆಗೆ ಒಳಗಾದವರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು 2023ರ ಜೂನ್ 18ರಂದು ಬಂದಾರು ಗ್ರಾಮದ ನೇಲೋಳ್ಪಲ್ಕೆ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಂಟಾಲ ಎಂಬಲ್ಲಿಗೆ…

Read More

ಉಳ್ಳಾಲ: ಓವರ್ ಟೇಕ್ ರಭಸಕ್ಕೆ ಎರಡು ಕಾರುಗಳು ಡಿಕ್ಕಿ- ವೃದ್ಧೆ ಸಾವು..!

ಉಳ್ಳಾಲ: ಎರಡು ಕಾರುಗಳ ನಡುವಿನ ಓವರ್ ಟೇಕ್ ರಭಸಕ್ಕೆ ವೃದ್ಧೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಡಂಕುದ್ರು ನಲ್ಲಿ ಸಂಭವಿಸಿದ್ದು, ಬಳಿಕ ಎರಡೂ ಕಾರುಗಳು ರಸ್ತೆ ಬದಿಯ ಕಮರಿಗೆ ಬಿದ್ದಿವೆ. ಮೃತಪಟ್ಟ ಮಹಿಳೆ ಸೇವಂತಿಗುಡ್ಡೆಯ ನಿವಾಸಿ ಕೃಷ್ಣಪ್ಪ ಅವರ ಪತ್ನಿ ಬೇಬಿ (65) ಎಂದು ಗುರುತಿಸಲಾಗಿದೆ. ಬೇಬಿ ಅವರು ಅಡಂ ಕುದ್ರುವಿನಲ್ಲಿ ಅಂಗಡಿ ಹೊಂದಿದ್ದು, ಪಂಪ್ವೆಲ್ ಅಪಾರ್ಟ್ ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಅವರು ಕೆಲಸಕ್ಕೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ತೊಕ್ಕೊಟ್ಟಿನಿಂದ…

Read More