admin

ಅಡಮಾನ ರಹಿತ ಕೃಷಿ ಸಾಲ ಮಿತಿ 2 ಲಕ್ಷ ರೂ.ಗೆ ಹೆಚ್ಚಳ

ಹೊಸದಿಲ್ಲಿ: ಹೊಸ ವರ್ಷ 2025ಕ್ಕೆ ರೈತರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗುಡ್‌ ನ್ಯೂಸ್‌ ಕೊಟ್ಟಿದ್ದು ಜನವರಿ 1ರಿಂದ ಅಡಮಾನರಹಿತ ಕೃಷಿ ಸಾಲ ಮಿತಿಯನ್ನು 2 ಲಕ್ಷ ರೂ.ಗೆ ಏರಿಕೆ ಮಾಡಿದೆ. ಈ ಹಿಂದೆ ಇದು 1.60 ಲಕ್ಷ ರೂ. ಇತ್ತು. ಇದರಿಂದ ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗಲಿದೆ. ಉತ್ಪಾದನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ದೇಶದ ಶೇ.86 ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ…

Read More

ಕುಂಬಳೆ: ಸ್ಕೂಟರಿಗೆ ಕಾರು ಢಿಕ್ಕಿ: ಬಿಜೆಪಿ ಯುವ ಮುಖಂಡ ಸಾವು

ಕುಂಬಳೆ: ಮಂಗಲ್ಪಾಡಿ ಪ್ರತಾಪ ನಗರ ನಿವಾಸಿ, ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಧನರಾಜ್‌ ಪೂಜಾರಿ (44) ಡಿ. 14ರಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಮೃತರು ಅವಿವಾಹಿತರಾಗಿದ್ದು, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಕುಂಬಳೆಯಿಂದ ಸ್ಕೂಟರಿನಲ್ಲಿ ಮನೆಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ಬಂದ್ಯೋಡು ಸಮೀಪದ ಶಿರಿಯದಲ್ಲಿ ಎದುರುಗಡೆಯಿಂದ ಬಂದ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡರು. ತತ್‌ಕ್ಷಣ ಅವರನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು. ಕೇರಳ ರಾಜ್ಯ ಸರಕಾರಿ ಬಸ್ಸಿನಲ್ಲಿ…

Read More

ಮಂಗಳೂರು: ಮಹಿಳಾ ವೃತ್ತಿಪರ ಭಾಗವತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಲೀಲಾವತಿ ಬೈಪಾಡಿತ್ತಾಯ ಇನ್ನಿಲ್ಲ

ಮಂಗಳೂರು: ಯಕ್ಷಗಾನ ಕ್ಷೇತ್ರದ ಪ್ರಪ್ರಥಮ ಮಹಿಳಾ ವೃತ್ತಿಪರ ಭಾಗವತರೆಂದೇ ಖ್ಯಾತಿವೆತ್ತ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಲೀಲಾವತಿ ಬೈಪಾಡಿತ್ತಾಯ (77) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ, ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಾಡಿತ್ತಾಯ, ಪುತ್ರರಾದ ಪತ್ರಕರ್ತ ಅವಿನಾಶ್ ಮತ್ತು ಗುರುಪ್ರಸಾದ್ ಅವರನ್ನು ಅಗಲಿದ್ದಾರೆ. ಮೃತ ಲೀಲಾವತಿ ಅವರ ಅಂತಿಮ ಸಂಸ್ಕಾರವು ಡಿ.15ರಂದು ಬೆಳಗ್ಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕಾಸರಗೋಡಿನ ಮಧೂರಿನಲ್ಲಿ 1947ರ ಮೇ 23ರಂದು ಜನಿಸಿದ್ದ ಲೀಲಾವತಿ ಸಣ್ಣ ಪ್ರಾಯದಲ್ಲೇ ತಂದೆಯನ್ನು ಕಳೆದು ಕೊಂಡ…

Read More

ಕಾರ್ಕಳ: ಹೊತ್ತಿ ಉರಿದ ಟೂರಿಸ್ಟ್ ವಾಹನ- ಪ್ರಯಾಣಿಕರು ಅಪಾಯದಿಂದ ಪಾರು..!

ಕಾರ್ಕಳ: ಟೂರಿಸ್ಟ್ (ಟಿಟಿ) ವಾಹನವೊಂದು ಹೊತ್ತಿ ಉರಿದ ಘಟನೆ ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ನಡೆದಿದೆ. ಉಡುಪಿಯಿಂದ ಮಾಳ ಮಾರ್ಗವಾಗಿ ಕುದುರೆಮುಖ ಮೂಲಕ ಕಳಸ ಕಡೆಗೆ ತೆರಳುತ್ತಿದ್ದ ಹನ್ನೊಂದು ಮಂದಿ ಇದ್ದ ಟೂರಿಸ್ಟ್ ವಾಹನದಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ವಾಹನದ ತುಂಬಾ ವ್ಯಾಪಿಸಿದೆ. ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ತಕ್ಷಣ ಹೊರ ಬಂದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿ ಜ್ವಾಲೆಗೆ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಕಾರ್ಕಳ ಅಗ್ನಿಶಾಮಕ ಠಾಣೆ ತಂಡವು…

Read More

ಉಡುಪಿ: ಪೇಜಾವರ ಶ್ರೀಗಳಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ ವ್ಯಕ್ತಿ ವಿರುದ್ಧ ದೂರು ದಾಖಲು

ಉಡುಪಿ: ಉಡುಪಿಯ ಪೇಜಾವರ ಶ್ರೀಗಳಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ ದುಷ್ಕರ್ಮಿಯ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಭೀಮ್ ಆರ್ಮಿ ಸಂಘಟನೆಯ ಮತಿನ್ ಕುಮಾರ್ ಬಿಜಾಪುರ ಉಡುಪಿಯ ಪೇಜಾವರ ಅಧೋಕ್ಷಜ ಪೀಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ದೂರಲಾಗಿದೆ. ಮಾತನಾಡುವ ವೇಳೆ ಪೇಜಾವರ ಶ್ರೀಗಳಿಗೆ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿದ್ದಾನೆ. ಸುಮ್ಮನೆ ಕೂತರೆ ಸರಿ, ಮುಂದೆ ಏನಾದರೂ ನಾಟಕ ಮಾಡಿದರೆ ಎರಡನೇ ಭೀಮ ಕೋರೆಗಂವ್ ಯುದ್ಧ ಅಲ್ಲೇ…

Read More

ನಾಳೆ (ಡಿ‌.15) ರಂದು ಕುಲಾಲ ಚಾವಡಿ ವಾಟ್ಸಪ್ ಬಳಗದಿಂದ ಚಾವಡಿ ಸಂಬ್ರಮ (ಕುಟುಂಬ ಸಮ್ಮಿಲನ) ಕಾರ್ಯಕ್ರಮ

ಕಾರ್ಕಳ: ತಂತ್ರಜ್ಞಾನ ಮುಂದುವರಿದಂತೆ ಯಾಂತ್ರಿಕ ಜೀವನಕ್ಕೆ ಮನುಷ್ಯ ಒಗ್ಗಿ ಕೊಳ್ಳುತ್ತಾನೆ. ಈ ಜಾಲತಾಣದ ಪ್ರಭಾವದಿಂದ ಜೀವಂತಿಕೆ ಇಲ್ಲದ ಸಂವೇದನಾಶೀಲ ರಹಿತ ಬದುಕು ಯುವ ಪೀಳಿಗೆಯಲ್ಲಿ ಪ್ರಸ್ತುತ ಕಾಣಬಹುದು ಎಂಬ ನೂರಾರು ಸಾಮಾಜಿಕ ಜಾಲ ತಾಣದ ಮೇಲಿನ ಆರೋಪದ ನಡುವೆಯೂ ಕೇವಲ ಜಾಲತಾಣದ ಮುಖಾಂತರ ಕುಲಾಲ ಚಾವಡಿ ವಾಟ್ಸಪ್ ಬಳಗವು ನೂರಾರು ಸಂಕಷ್ಟ ಪೀಡಿತ ಸಮುದಾಯ ಬಾಂಧವರಿಗೆ ಆರ್ಥಿಕ ನೆರವು ನೀಡಿದೆ. ಬಡತನ ಸಿರಿತನದ ತುಲನೆಯನ್ನು ಬಾಹ್ಯ ದೌಲತ್ತಿಗಿಂತ ಅಂತರ್ಯದ ಸಿರಿವಂತಿಕೆಯಲ್ಲಿ ಕಾಣಬಹುದಾದ ನೂರಾರು ಸಹೃದಯಿ ಚಾವಡಿ ಬಂಧುಗಳಿಂದ…

Read More

ಮಂಗಳೂರು: ಲಂಚ ಸ್ವೀಕಾರ ಆರೋಪ ಸಾಬೀತು- ಪಿಡಿಒಗೆ 3 ವರ್ಷ ಜೈಲು…!!

ಮಂಗಳೂರು: ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ಸಿಲುಕಿದ ಆರೋಪಿ ಪಿಡಿಒಗೆ ಮಂಗಳೂರಿನ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 3 ವರ್ಷದ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯತ್ ಪಿಡಿಒ ಪ್ರೇಮ್ ಸಿಂಗ್ ನಾಯ್ಕ್ ಶಿಕ್ಷೆಗೊಳಗಾದವರು.  2019ರ ಜೂ.3ರಂದು ವ್ಯಕ್ತಿಯೊಬ್ಬರಿಂದ 9 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸ್ ನಿರೀಕ್ಷಕ…

Read More

ಮಂಗಳೂರು: ಮಾದಕ ಪದಾರ್ಥ ಸೇವನೆ – 8 ಮಂದಿ ಆರೋಪಿಗಳ ಬಂಧನ

ಮಂಗಳೂರು : ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಪೊಲೀಸ್ ಕಾರ್ಯಾಚರಣೆಯಲ್ಲಿ, ಮಾದಕ ಪದಾರ್ಥ ಸೇವಿಸಿದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಾಞಂಗಾಡ್‌ನ ನಮೃತ್(20), ಕೊಲ್ಲಂನ ಜೋನೆ ಅಲೆಕ್ಸ್ ಜಾರ್ಜ್(19), ಬಿಜೈ ಕಾಪಿಕಾಡ್‌ನ ಶಮಿತ್ ಕುಮಾರ್(21), ಮಂಗಳೂರು ಕಣ್ಣೂರಿನ ನಿವಾಸಿ ಸಿದ್ದೀಕ್(42), ಕೋಲಾಡಿಯ ಅಭಿನ್‌ಕೆ.ಬಿ(19), ಪುರಪಿಲ್ಲಿಯ ನವನೀತ್ ಪಿ.ಎಂ(19), ಪಣಂಬೂರಿನ ತಾಲೀಮ(26) ಮತ್ತು ಕಸ್ಬಾ ಬೆಂಗ್ರೆಯ ಸಾದಾತ್(27) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಆ್ಯಕ್ಟ್ ನ ಕಲಂ 27(ಬಿ) ನಂತೆ ಪ್ರಕರಣವು ದಾಖಲಾಗಿದೆ.

Read More

ಪುತ್ತೂರು: ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಅಜೀಜ್ ಅರೆಸ್ಟ್

ಪುತ್ತೂರು: ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಂಟ್ವಾಳ ಪೊಲೀಸರು ಮುಂಬೈಯಲ್ಲಿ ಬಂಧಿಸಿದ ಘಟನೆ ನಡೆದಿದೆ. ಆರ್ಯಪು ಗ್ರಾಮದ ಸಂಪ್ಯ ನಿವಾಸಿ ಅಬ್ದುಲ್ ಅಜೀಜ್ ಬಂಧಿತ ಆರೋಪಿ. ವಂಚನೆ ಪ್ರಕರಣದ ಆರೋಪಿಯಾಗಿದ್ದು, ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಮುಂಬಯಿಯಲ್ಲಿ ಬಂಧಿಸಿ‌ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ವಂಚನೆ ಪ್ರಕರಣಗಳು ದಾಖಲಾಗಿವೆ.ವಂಚನೆ ಸಹಿತ ಇನ್ನಿತರ ಪ್ರಕರಣಗಳಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿದ್ದು, ಈತ ನ್ಯಾಯಾಲಯಕ್ಕೆ…

Read More

BREAKING : ಅಲ್ಲು ಅರ್ಜುನ್‌ಗೆ ಬಿಗ್‌ ರಿಲೀಫ್‌ – ಮಧ್ಯಂತರ ಜಾಮೀನು ಮಂಜೂರು

ಹೈದರಾಬಾದ್: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ಅಲ್ಲು ಅರ್ಜುನ್‌ ಗೆ ತೆಲಂಗಾಣ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ತುರ್ತು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಚಿಕ್ಕಡಪಲ್ಲಿ ಪೊಲೀಸರು ಇಂದು ಅಲ್ಲು ಅರ್ಜುನ್‌ ಅವರನ್ನು ಬಂಧಿಸಿ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ 14 ದಿನ ನ್ಯಾಯಾಂಗ ಬಂಧನ ವಿಧಿಸಿಸಿತ್ತು. ಕೋರ್ಟ್‌ ಆದೇಶದ ಬೆನ್ನಲ್ಲೇ ಅಲ್ಲು ಅರ್ಜುನ್‌ ಅವರನ್ನು ಚಂಚಲಗೂಡ ಜೈಲಿಗೆ ಶಿಫ್ಟ್‌…

Read More