ಕುಲಾಲ ಚಾವಡಿ ವಾಟ್ಸಪ್ ಬಳಗದಿಂದ ಚಾವಡಿ ಸಂಬ್ರಮ (ಕುಟುಂಬ ಸಮ್ಮಿಲನ)ಕಾರ್ಯಕ್ರಮ
ಕಾರ್ಕಳ: ಸಮುದಾಯದ ಅಶಕ್ತ ಬಂಧುಗಳ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಧನ ಸಂಗ್ರಹದ ಮೂಲಕ ಆರ್ಥಿಕ ಸಹಕಾರ ನೀಡಲು ಒಗ್ಗೂಡಿದ ಸಮಾನ ಮನಸ್ಕ ಯುವಕರ ತಂಡವೇ ಈ ಕುಲಾಲ ಚಾವಡಿ. ಕೇವಲ ಸಾಮಾಜಿಕ ಜಾಲತಾಣದ ಮೂಲಕವೇ ಸಂಕಷ್ಟ ಪೀಡಿತರ ದಯನೀಯ ಸ್ಥಿತಿಯ ಬಗ್ಗೆ ಸಚಿತ್ರ ವರದಿ ನೀಡಿ ದೇಶ ವಿದೇಶದಲ್ಲಿರುವ ಸಮುದಾಯದ ಸಹೃದಯಿ ದಾನಿಗಳ ಮುಖಾಂತರ ಮತ್ತು ಸ್ಥಳೀಯ ಸಮುದಾಯ ಬಂಧುಗಳ ಜೊತೆಗೂಡಿ ಆರ್ಥಿಕ ನೆರವಿನ ಪುಟ್ಟ ಪುಟ್ಟ ಗಂಟುಗಳನ್ನು ಎತ್ತಿಕೊಂಡು ಅಶ್ರಿತರ ಮನೆಯಂಗಳ ತಲುಪಿ ಅವರ ನೋವಿನ…

