admin

ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಯಾಕೆ ತಿನ್ನಬೇಕು ಗೊತ್ತಾ…?

ದೇಹದಲ್ಲಿ ಬಿಳಿ ರಕ್ತ ಕಣಗಳನ್ನು  ಹೆಚ್ಚು ಉತ್ಪತ್ತಿ ಮಾಡಿ ಸೋಂಕುಗಳು ಹಾಗೂ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ತನ್ನಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಅಧಿಕವಾಗಿ ಹೊಂದಿರುವ ಕಿತ್ತಳೆ ಹಣ್ಣು, ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು  ಬಲಪಡಿಸುತ್ತದೆ. ಕಿತ್ತಳೆ ಹಣ್ಣು ದೇಹದ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ನೀರಿನ ಪ್ರಮಾಣ ಇದ್ದು, ಹೊಟ್ಟೆ ತುಂಬಿಕೊಂಡ ಅನುಭವ ಉಂಟಾಗುತ್ತದೆ (Stomach- full feeling). ಸೂರ್ಯನ ಹಾನಿಕಾರಕ ಕಿರಣಗಳಿಂದ  ನಮ್ಮ ಚರ್ಮವನ್ನು ರಕ್ಷಿಸುವುದು. ಹೃದಯ ಹಾಗೂ ಹೃದಯ…

Read More

ಮಂಗಳೂರು: ಲೋಕಾಯುಕ್ತ ಎಂದು ರೆವಿನ್ಯೂ ಆಫೀಸರನ್ನೇ ವಂಚಿಸಲು ಹೋದ ಖದೀಮ ಅರೆಸ್ಟ್..!

ಮಂಗಳೂರು: ಲೋಕಾಯುಕ್ತ ಎಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರನ್ನೇ ವಂಚಿಸಲು ಹೋದ ಖದೀಮನೋರ್ವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಕದಿರಿ ತಾಲೂಕಿನ ಓ.ಡಿ.ಸಿ ಮಂಡಲ್, ವೆಂಕಟಾಪುರಂ ಪಂಚಾಯತ್, ನಲ್ಲಗುಟ್ಲಪಲ್ಲಿ ಗ್ರಾಮದ ನಿವಾಸಿ ಧನಂಜಯ ರೆಡ್ಡಿ ತೋಟ ಬಂಧಿತ ಆರೋಪಿ. 2024ರ ಎಪ್ರಿಲ್ 6ರಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರ್ ಪುರುಷೋತ್ತಮ ಅವರ ಮೊಬೈಲ್‌ಗೆ ಅಪರಿಚಿತನಿಂದ ವಾಟ್ಸ್ಆ್ಯಪ್ ಕರೆ ಬಂದಿದೆ. ಅತ್ತಕಡೆಯಿಂದ ಮಾತನಾಡಿದ ಅಪರಿಚಿತ ‘ತಾನು ಲೋಕಾಯುಕ್ತದಿಂದ ಮಾತನಾಡುತ್ತಿದ್ದೇನೆ‌. ತಮ್ಮ ಮೇಲೆ ಆರೋಪ ಬಂದಿದೆ….

Read More

ತಾಜ್‌ಮಹಲ್‌ ಹಿಂದಿಕ್ಕಿದ ಅಯೋಧ್ಯೆ – ಅಗ್ರ ಸ್ಥಾನಕ್ಕೇರಿದ ರಾಮ ಭೂಮಿ

ಲಕ್ನೋ : ಉತ್ತರ ಪ್ರದೇಶವು ಹೊಸ ಪ್ರವಾಸೋದ್ಯಮ ದಾಖಲೆಗಳನ್ನು ಸ್ಥಾಪಿಸಿದೆ, ಜನವರಿ ಮತ್ತು ಸೆಪ್ಟೆಂಬರ್ 2024 ರ ನಡುವೆ ಗಮನಾರ್ಹವಾದ 476.1 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿದೆ. ದೇಶದ ಆಧ್ಯಾತ್ಮಿಕ ಹೃದಯವಾಗಿರುವ ಅಯೋಧ್ಯೆ, ಆಗ್ರಾದ ತಾಜ್ ಮಹಲ್ ಅನ್ನು ಹಿಂದಿಕ್ಕಿ ರಾಜ್ಯದ ಅತಿ ಹೆಚ್ಚು ಭೇಟಿ ನೀಡುವ ತಾಣವಾಗಿ ಅಗ್ರ ಸ್ಥಾನಕ್ಕೇರಿದೆ. ಈ ಅವಧಿಯಲ್ಲಿ ಅಯೋಧ್ಯೆಯು 135.5 ಮಿಲಿಯನ್ ದೇಶೀಯ ಪ್ರವಾಸಿಗರನ್ನು ಮತ್ತು 3,153 ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ವರದಿ ಮಾಡಿದೆ. ರಾಮಮಂದಿರದ…

Read More

ಮಂಗಳೂರು: ಅಪ್ರಾಪ್ತ ಬಾಲಕಿ ಸ್ನಾನ ಮಾಡುತ್ತಿರುವ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ 5 ವರ್ಷ ಜೈಲು

ಮಂಗಳೂರು: ಅಪ್ರಾಪ್ತ ಬಾಲಕಿ ಮತ್ತು ವಿವಾಹಿತ ಮಹಿಳೆ ಮನೆಯಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೊ ಎಫ್ ಟಿಎಸ್ ಸಿ -1) ನ್ಯಾಯಾಧೀಶ ವಿನಯ್ ಡಿ ಐದು ವರ್ಷ ಜೈಲು ಶಿಕ್ಷೆ ಮತ್ತು 15,000 ರೂ ದಂಡ ವಿಧಿಸಿದರು. ತೋಟ ಬೆಂಗ್ರೆ ನಿವಾಸಿ ರಮ್ಶೀದ್ ಶಿಕ್ಷೆಗೊಳಗಾದ ಆರೋಪಿ. ಜುಲೈ 5 ಮತ್ತು 7 ರ ನಡುವೆ ರಾಮ್ಶೀದ್ ತನ್ನ ಮೊಬೈಲ್ ಫೋನ್ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಜುಲೈ…

Read More

ತ್ರಾಸಿ ಬೀಚ್‌ನಲ್ಲಿ ಜೆಟ್‌ಸ್ಕೀ ಬೋಟ್ ಮಗುಚಿ ರೈಡರ್ ನಾಪತ್ತೆ..! ಪ್ರವಾಸಿಗನ ರಕ್ಷಣೆ

ಉಡುಪಿ: ಪ್ರವಾಸಿಗನನ್ನು ಕರೆದೊಯ್ದಿದ್ದ ಜೆಟ್‌ಸ್ಕೀ ಬೋಟ್ ಮಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಬೋಟ್ ರೈಡರ್ ನಾಪತ್ತೆಯಾದ ಘಟನೆ ಕುಂದಾಪುರ ಸಮೀಪದ ತ್ರಾಸಿ ಕಡಲ ಕಿನಾರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ರೈಡರ್ ರೋಹಿದಾಸ್ ಅಲಿಯಾಸ್ ರವಿ (45) ನಾಪತ್ತೆಯಾಗಿದ್ದು, ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್ ಅವರನ್ನು ರಕ್ಷಿಸಲಾಗಿದೆ. ಬಚಾವ್ ಆದ ಪ್ರಶಾಂತ್  ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್‌ಸ್ಕೀ ಬೋಟ್‌ನಲ್ಲಿ  ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ…

Read More

ಪೆರ್ಲ ಪೇಟೆಯಲ್ಲಿ ರಾತ್ರಿ ಅಗ್ನಿ ಅವಘಡ..! ಐದು ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿ

ಪುತ್ತೂರು: ಪೆರ್ಲ ಪೇಟೆಯ ಕಟ್ಟಡವೊಂದಕ್ಕೆ ಶನಿವಾರ ತಡ ರಾತ್ರಿ ಬೆಂಕಿ ಹತ್ತಿಕೊಂಡಿದ್ದು ಐದು ಅಂಗಡಿಗಳು ಸಂಪೂರ್ಣವಾಗಿ ಹೊತ್ತಿ ಉರಿದು ನಾಶವಾಗಿದೆ.  ಇಲ್ಲಿನ ಬದಿಯಡ್ಕ ಪುತ್ತೂರು ರಸ್ತೆಯ ಎಡಭಾಗದಲ್ಲಿರುವ ಪೂಜಾ ಫ್ಯಾನ್ಸಿ, ಪೈಗಳ ಕ್ಲೋತ್ ಸ್ಟೋರ್ ಸಹಿತ ಪೇಪರ್ ವಿತರಣ ಸೆಂಟರ್,ಪ್ರವೀಣ್ ಆಟೋಮೊಬೈಲ್ಸ್,ಸದಾತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಎಂಬಿ ಅಂಗಡಿ ಮುಂಗಟ್ಟು ಈ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದೂ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ.  ಮಧ್ಯರಾತ್ರಿ 12 ಗಂಟೆಯ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಸೇರಿದ ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ…

Read More

ಎರಡು ಪ್ರತ್ಯೇಕ ಪ್ರಕರಣದ 3 ಕಳ್ಳಿಯರನ್ನು ಅರೆಸ್ಟ್ ಮಾಡಿದ ಪುತ್ತೂರು ನಗರ ಠಾಣಾ ಪೊಲೀಸರು

ಪುತ್ತೂರು : ಎರಡು ಪ್ರತ್ಯೇಕ ಪ್ರಕರಣದಲ್ಲಿ 3 ಕಳ್ಳಿಯರನ್ನು ಪುತ್ತೂರು ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ರಾಜಾಜಿನಗರ ಬೆಂಗಳೂರು ನಿವಾಸಿಗಳಾದ ಜ್ಯೋತಿ ಹಾಗೂ ಶ್ರೀಮತಿ ಯಶೋದ ಹಾಗೂ ನೀರುಮಾರ್ಗ ಮಂಗಳೂರು ನಿವಾಸಿ ವಿದ್ಯಾ ಎಂದು ಗುರುತಿಸಲಾಗಿದೆ. ದಿನಾಂಕ 19.12.2024 ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗೋಳ್ತಮಜಲು ಗ್ರಾಮದ ನಿವಾಸಿ ಶ್ರೀಮತಿ ಸರಸ್ವತಿ ಎಂಬವರ ಬ್ಯಾಗಿನಿಂದ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 120/2024 ಕಲಂ:…

Read More

ಪಶುವೈದ್ಯಾಧಿಕಾರಿ ಹುದ್ದೆಗೆ ನೇಮಕಾತಿ: ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

(Veterinary) ಪಶುಪಾಲನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಉದ್ಯೋಗ ಇಲಾಖೆ:ಆಯುಕ್ತರವರ ಕಾರ್ಯಾಲಯ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಪಶುಪಾಲನಾ ಭವನ, ಸಿಬಿಐ ಕಚೇರಿ ಎದುರು, ಬೆಂಗಳೂರು. ಹುದ್ದೆಯ ವಿವರ:ಪಶು ವೈದ್ಯಾಧಿಕಾರಿ ಹುದ್ದೆಯ ಸಂಖ್ಯೆ:120 (Veterinary) ವಿದ್ಯಾರ್ಹತೆ:* ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಅಥವಾ ಭಾರತದಲ್ಲಿ…

Read More

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಂಧನ..!!

ಚೆನ್ನೈ :ಕೊಯಮತ್ತೂರು ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳಿಗೆ ಡಿಎಂಕೆ ಸರ್ಕಾರ ಬೆಂಬಲ ನೀಡಿದೆ ಎಂದು ಟೀಕಿಸಿ ಪ್ರತಿಭಟಿಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. 1998ರ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಲ್-ಉಮ್ಮಾ ಸಂಸ್ಥಾಪಕ ಬಾಷಾ ಅವರ ಅಂತ್ಯಕ್ರಿಯೆಗೆ ಡಿಎಂಕೆ ಸರ್ಕಾರ ಅನುಮತಿ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಣ್ಣಾಮಲೈ ಮತ್ತು ಇತರ ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ. ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು…

Read More

ಕರಾವಳಿ ಉತ್ಸವ :  ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ಕರಾವಳಿ ದರ್ಶನ

ಮಂಗಳೂರು: ಈ ಬಾರಿಯ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ಕರಾವಳಿಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೆ ತಲಾ 4500 ರೂ. ವೆಚ್ಚದಲ್ಲಿ ಮಂಗಳೂರು ಪ್ರದೇಶವನ್ನು ಆಕಾಶ ಮಾರ್ಗದಲ್ಲಿ ಹೆಲಿಕಾಪ್ಟರ್ ಮೂಲಕ ಸುತ್ತ ಹಾಕಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ತುಂಬಿ ಹೆಲಿಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಡಿ.21ರಿಂದ 31ರವರೆಗೆ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಒಂದು ಬಾರಿ ಆರು ಮಂದಿ ಪ್ರಯಾಣಿಸಲು ಸಾಧ್ಯವಿರುವ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬಹುದಾಗಿದೆ. ಈ ಕಾಪ್ಟರ್ ಮಂಗಳೂರು…

Read More