admin

ಉಳ್ಳಾಲ: ಸಹೋದರನ ಪುತ್ರಿಯನ್ನು ಸಮುದ್ರದ ನೀರಿನಿಂದ ರಕ್ಷಿಸಲು ಹೋಗಿ ಮೃತ್ಯು..!!

ಉಳ್ಳಾಲ: ಸಹೋದರನ ಪುತ್ರಿಯನ್ನು ಸಮುದ್ರದ ನೀರಿನಿಂದ ರಕ್ಷಿಸಲು ತೆರಳಿದ ಬೆಂಗಳೂರು ನಿವಾಸಿ ಸಮುದ್ರದ ಅಲೆಗಳ ನಡುವೆ ಸಿಲುಕಿ ಮೃತಪಟ್ಟ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ರವಿವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಬೆಂಗಳೂರು ಶಿವಾಜಿನಗರದ ಎಚ್.ಪಿ.ಕೆ ರೋಡ್ ನಿವಾಸಿ ದಿ.ಖಝೂಮ್ ಅಬ್ದುಲ್ ಶೈಖ್ ಎಂಬವರ ಪುತ್ರ ಕೆ.ಎಮ್. ಸಜ್ಜದ್ ಆಲಿ (45) ಮೃತರು. ಹಿರಿಯ ಸಹೋದರನ ಪುತ್ರಿ ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಅಲೆಗಳ ನಡುವೆ ಸಿಲುಕಿದ್ದನ್ನು ಸಾಜಿದ್ ಆಲಿ ರಕ್ಷಿಸಿ, ತಾವೇ ಖುದ್ದು ಅಲೆಗಳ ನಡುವೆ ಸಿಲುಕಿ ಘಟನೆ…

Read More

ಮಂಗಳೂರು: ಹೊಸ ವರ್ಷದ ಶುಭಾಶಯ ಕೋರುವ ಲಿಂಕ್, ಎಪಿಕೆ ಫೈಲ್‌ ತೆರೆಯದಿರಿ, ಮೊಬೈಲ್‌ ಹ್ಯಾಕ್ ಸಾಧ್ಯತೆ – ಎಚ್ಚರಿಕೆ.!

ಮಂಗಳೂರು: ಎರಡು ದಿನಗಳು ಕಳೆದ್ರೆ ನಾವು 2025ನೇ ಹೊಸ ವರ್ಷವನ್ನು ಸ್ವಾಗತಿಸಲಿದ್ದೇವೆ. ಈ ಸಂದರ್ಭವನ್ನು ಬಳಸಿ ಸೈಬರ್ ಖದೀಮರು ಹಾನಿಕಾರಕ ಲಿಂಕ್ ಹಾಗೂ ಎಪಿಕೆ ಫೈಲ್‌ಗಳನ್ನು ಕಳುಹಿಸಿ ಮೊಬೈಲ್‌ ಹ್ಯಾಕ್ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಹೊಸವರ್ಷದ ಶುಭಾಶಯ ಕೋರುವ ಎಪಿಕೆ ಫೈಲ್, ಲಿಂಕ್‌ಗಳನ್ನು ತೆರೆಯದಿರಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಸಾರ್ವಜನಿಕರಿಗೆ ಎಚ್ಚರಿಕೆ ಸೂಚಿಸಿದ್ದಾರೆ. 2025ನೇ ಹೊಸವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಸಾರ್ವಜನಿಕರ ಮೊಬೈಲ್‌ಗಳಿಗೆ ಹಾನಿಕಾರಕ ಲಿಂಕ್ ಮತು APK ಫೈಲ್‌ಗಳನ್ನು…

Read More

ಮಂಗಳೂರು: ಬೀಚ್‌ಗಳನ್ನು ರಾತ್ರಿ ವೇಳೆ ಸಾರ್ವಜನಿಕರಿಗೆ ಮುಕ್ತವಾಗಿಡಲು ಜಿಲ್ಲಾಡಳಿತ ಚಿಂತನೆ

 ಮಂಗಳೂರು: ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ರಾತ್ರಿ ವೇಳೆ ಬೀಚ್‌ಗಳನ್ನು ತೆರೆದಿಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಪ್ರವಾಸಿಗರ ಸುರಕ್ಷತೆಗಾಗಿ ಬೀಚ್‌ಗಳಲ್ಲಿ ಜೀವರಕ್ಷಕರ ನಿಯೋಜನೆ ಮತ್ತು ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಉಪಕ್ರಮವನ್ನು ಮೊದಲು ಪಣಂಬೂರು ಬೀಚ್‌ನಲ್ಲಿ ಜಾರಿಗೊಳಿಸಲಾಗುವುದು. ಅಗತ್ಯ ಕಾಮಗಾರಿಗಳು ಇನ್ನೂ ನಡೆಯುತ್ತಿವೆ. ತಣ್ಣೀರುಭಾವಿ ಬೀಚ್‌ನಲ್ಲಿ ನೀಲಿ ಧ್ವಜವನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಜಿಲ್ಲಾಡಳಿತವು ಬೀಚ್‌ಗಳನ್ನು ರಾತ್ರಿ 1 ಗಂಟೆಯವರೆಗೆ ತೆರೆದಿಡಲು ಯೋಚಿಸುತ್ತಿದೆ, ನಗರ ಪೊಲೀಸ್…

Read More

ಡ್ರಗ್ಸ್ ಮಾರಾಟ, ಸೇವನೆ: ಮಂಗಳೂರಿನಲ್ಲಿ 1,090, ಉಡುಪಿಯಲ್ಲಿ 116 ಕೇಸ್ ದಾಖಲು..!

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2024ರಲ್ಲಿ ಡ್ರಗ್ಸ್ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿ ಒಟ್ಟು 1,090 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಉಡುಪಿ ಜಿಲ್ಲೆಯಲ್ಲಿ 2024ರಲ್ಲಿ ಮಾದಕ ವಸ್ತು ಮಾರಾಟ, ಸೇವನೆಗೆ ಸಂಬಂಧಿಸಿ ಈ ವರ್ಷ 116 ಪ್ರಕರಣ ದಾಖಲಾಗಿರುತ್ತದೆ. ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿ 88, ಸೇವನೆಗೆ ಸಂಬಂಧಿಸಿ 1,002 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿ 157 ಹಾಗೂ ಸೇವನೆಗೆ ಸಂಬಂಧಿಸಿ 1,211 ಮಂದಿ ಸಹಿತ ಒಟ್ಟು 1,372 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಪೈಕಿ…

Read More

ಸಿಲಿಂಡರ್ ಸ್ಪೋಟ ಪ್ರಕರಣ: ಮತ್ತೊಬ್ಬ ಮಾಲಾಧಾರಿ ಸಾವು

ಹುಬ್ಬಳ್ಳಿ : ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಮಾಲಾಧಾರಿ ನಿಧನರಾಗಿದ್ದಾರೆ. ಶಂಕರ್ ಚವ್ಹಾಣ್ ​(29ವ) ಮೃತ ಅಯ್ಯಪ್ಪ ಮಾಲಾಧಾರಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ನಾಲ್ವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹುಬ್ಬಳ್ಳಿಯ ಉಣಕಲ್​ ನಿವಾಸಿಯಾಗಿದ್ದ ಶಂಕರ್ ಚವ್ಹಾಣ್, ಅವರು ಇದೇ ಮೊದಲ ಬಾರಿ ಅಯ್ಯಪ್ಪನ ಮಾಲೆ ಧರಿಸಿದ್ದರು. ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್​ 22ರಂದು ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಕಳೆದ ಏಳು…

Read More

ಬಂಟ್ವಾಳ: ಬೈಕ್‌ ಗೆ ಲಾರಿ ಢಿಕ್ಕಿ- ಆರು ವರ್ಷದ ಬಾಲಕ ಮೃತ್ಯು!!

ಬಂಟ್ವಾಳ: ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ‘ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ ಸಂಭವಿಸಿದೆ. ಅಪಘಾತದಲ್ಲಿ ಮಗುವಿನ ತಂದೆ, ತಾಯಿ ಹಾಗೂ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ನಾವೂರು ಸಮೀಪದ ಮುರ ನಿವಾಸಿ ಅಬ್ದುಲ್ ಸಲೀಂ ಎಂಬವರ ಹಿರಿಯ ಪುತ್ರ ಶಾಝಿನ್ (6) ಎಂದು ಗುರುತಿಸಲಾಗಿದೆ. ಸಲೀಂ ತನ್ನ ಪತ್ನಿ-ಮಕ್ಕಳೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ…

Read More

ಈ ಸೊಪ್ಪು ತಿನ್ನುವುದರಿಂದ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರ

ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ದವಸ, ಧಾನ್ಯ, ಹಣ್ಣುಗಳ ಜೊತೆಗೆ ಹಸಿರು ತರಕಾರಿಗಳನ್ನು ಸಹ ಸೇರಿಸಬೇಕಾಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ (winter) ಹೆಚ್ಚಾಗಿ ದೊರಕುವ ಮೆಂತ್ಯೆ ಸೊಪ್ಪನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಮೆಂತ್ಯ ಸೊಪ್ಪಿನಲ್ಲಿ ಪೊಟಾಷಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ (Calcium), ವಿಟಮಿನ್ ಎ, ವಿಟಮಿನ್ ಸಿ, ಸೆಲೆನಿಯಂ, ವಿಟಮಿನ್ ಸಿ ಯಂತಹ ಪೋಷಕಾಂಶಗಳು ಕಂಡುಬರುತ್ತವೆ. ಕೂದಲನ್ನು ಆರೋಗ್ಯಕರವಾಗಿಡಲು ಮೆಂತ್ಯ ಸೊಪ್ಪು (Fenugreek) ಸಹಾಯ ಮಾಡುವುದು. ಮೆಂತ್ಯದಲ್ಲಿರುವ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸಾರಜನಕವು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇನ್ನೂ ಈ…

Read More

ಮಂಗಳೂರು: ಅಕ್ರಮ 300kg ಗೋಮಾಂಸ ಸಾಗಾಟ – ಇಬ್ಬರು ಆರೋಪಿಗಳು ವಶಕ್ಕೆ

ಮಂಗಳೂರು : ನಗರದ ಹೊರವಲಯದ ಗುರುಪುರ ಕೈಕಂಬದ ವಿಕಾಸನಗರದಲ್ಲಿ ಟೆಂಪೊದಲ್ಲಿ ಅಕ್ರಮ ಸಾಗಾಟದ 300ಕೆಜಿ ಗೋಮಾಂಸ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂಲರಪಟ್ಣ ನಿವಾಸಿ ಅಝೀಝ್ ಮತ್ತು ಮೂಡುಬಿದಿರೆ ಹಂಡೇಲು ನಿವಾಸಿ ಅಬೂಬಕ್ಕರ್‌ ಬಂಧಿತ ಆರೋಪಿಗಳು. ಸಾರ್ವಜನಿಕರು ನೀಡಿದ ಮಾಹಿತಿಯಂತೆ ಪೋಲಿಸರು ದಾಳಿ ನಡೆಸಿದ್ದರು. ಈ ವೇಳೆ ರಿಕ್ಷಾಟೆಂಪೊದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಪೊಲೀಸರು ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಹಾಗೂ ಸುಮಾರು 300 ಕೆ.ಜಿ. ಗೋಮಾಂಸ ಮತ್ತು ಮಾಂಸ ಸಾಗಾಟಕ್ಕೆ…

Read More

ಮಂಗಳೂರು: ಡಿ.29 ರಂದು ಮೂರನೇ ವರ್ಷದ ಶ್ರೀ ಪೊಳಲಿ ಅಮ್ಮಾ ನಡೆಗೆ ನಮ್ಮ ನಡೆ ಪಾದಯಾತ್ರೆ

ಮಂಗಳೂರು: ಹಿಂದು ಜಾಗರಣ ವೇದಿಕೆ ಶಕ್ತಿನಗರ ಮೂರನೇ ವರ್ಷದ ಶ್ರೀ ಪೊಳಲಿ ಅಮ್ಮಾ ನಡೆಗೆ ನಮ್ಮ ನಡೆ ಪಾದಯಾತ್ರೆಯು ಇದೆ ಬರುವ 29-12-2024 ಅದಿತ್ಯವಾರ ಮುಂಜಾನೆ 05:00 ಗಂಟೆಗೆ ಹೊರಡಲಿದೆ. ಈ ಸಂದರ್ಭದಲ್ಲಿ ಪಾದಯಾತ್ರೆ ಮಾಡುವ ಎಲ್ಲಾ ಪೊಳಲಿ ಶ್ರೀ ರಾಜ ರಾಜೇಶ್ವರಿ ಅಮ್ಮನ ಭಕ್ತರು 4.45 ಕ್ಕೆ ಸರಿಯಾಗಿ ವೈದ್ಯನಾಥ ದೈವಸ್ಥಾನ ಕೊಡಂಗೆಯಲ್ಲಿ ಸೆರಬೇಕಾಗಿ ವಿನಂತಿ. ಬೆಳಗ್ಗಿನ ಉಪಹಾರದ ವ್ಯವಸ್ಥೆ ಇದ್ದು ಉಪಹಾರ ಸೇವಿಸಿ ಸರಿಯಾಗಿ 05:00 ಗಂಟೆಗೆ ಪಾದಯಾತ್ರೆ ಹೊರಡಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ…

Read More

ಪುತ್ತೂರು: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು- ಮೂವರು ಸ್ಥಳದಲ್ಲೇ ಮೃತ್ಯು..!!!

ಪುತ್ತೂರು: ಪರ್ಲಡ್ಕ ಜಂಕ್ಷನ್ ಬಳಿಯ ಬೈಪಾಸ್ ರಸ್ತೆಯಲ್ಲಿ‌ಕಾರೊಂದು ಹೊಂಡಕ್ಕೆ ಉರುಳಿ ಬಿದ್ದು, ಮೂವರು ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತಪಟ್ಟವರನ್ನು ಸುಳ್ಯ ಮೂಲದವರು ಎಂದು ಹೇಳಲಾಗಿದೆ. ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಬಳಿಯಲ್ಲೇ ಘಟನೆ ನಡೆದಿದ್ದು, ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

Read More