ಬೆಳ್ತಂಗಡಿ: ಕಾರಿಗೆ ಟಿಪ್ಪರ್ ಡಿಕ್ಕಿ- ಚಾಲಕನಿಗೆ ಗಂಭೀರ ಗಾಯ
ಬೆಳ್ತಂಗಡಿ: ಉಜಿರೆ ಹಳೆಪೇಟೆಯಲ್ಲಿ ಕಾರಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದ ಘಟನೆ ಇಂದು(ಡಿ.31) ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕ ಬೆಳ್ತಂಗಡಿ ಕಕ್ಕೇನ ನಿವಾಸಿ ಮುನೀರ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ. ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದೆ ಎಂದು ತಿಳಿದು ಬಂದಿದೆ.

