admin

ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಂಡನ ಹತ್ಯೆ- ಶವ 2 ಭಾಗ ಮಾಡಿ ಸುಟ್ಟು ಹಾಕಿದ ಪತ್ನಿ.!

 ಬೆಳಗಾವಿಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಹೆಂಡತಿ ಸರಸಕ್ಕೆ ಬಾರದ ಹಿನ್ನೆಲೆ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಂಡನನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ  ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಶ್ರೀಮಂತ ಇಟ್ನಾಳ್ ಎಂಬಾತ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಈ ವೇಳೆ ಶ್ರೀಮಂತ ಇಟ್ನಾಳ್ ಪತ್ನಿ ಸಾವಿತ್ರಿ  ಗಂಡನ ಕೊಲೆ ಮಾಡಿದ್ದಾಳೆ. ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಎಂದು ದೇಹವನ್ನು 2 ತುಂಡು ಬಾಡಿ ಬ್ಯಾರೆ‍ಲ್ ನಲ್ಲಿ ಸಾಗಿಸಿದ್ದಳು….

Read More

ಧರ್ಮಸ್ಥಳ: ನೇತ್ರಾವತಿ ಉಪನದಿಯಲ್ಲಿ ಗೋಮಾಂಸ ತ್ಯಾಜ್ಯ – ಧಾರ್ಮಿಕ ಭಾವನೆ ಕೆಡಿಸುವ ಹುನ್ನಾರದ ಆರೋಪ

ಧರ್ಮಸ್ಥಳ : ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಎಸೆದಿರುವ ಕೃತ್ಯದ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹುನ್ನಾರ ಇದೆ ಎಂದು ಆರೋಪಿಸಿರುವ ಹಿಂದು ಸಂಘಟನೆಗಳು ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿವೆ.ಧರ್ಮಸ್ಥಳದ ಪುಣ್ಯನದಿಯಾಗಿರುವ ನೇತ್ರಾವತಿಯನ್ನು ಗೋ ಹಂತಕರು ಗೋಮಾಂಸ ತ್ಯಾಜ್ಯ ಎಸೆದು ಮಲಿನ ಮಾಡಿದ್ದಾರೆ. ಇದರ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸ್ಪಷ್ಟ ಉದ್ದೇಶ ಇದೆ ಎಂದು ಬಜರಂಗ ದಳ ಗಂಭೀರ ಆರೋಪ ಮಾಡಿದೆ. ಬೆಳ್ತಂಗಡಿ…

Read More

ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್

ಹಿರಿಯಡ್ಕ : ಸಿಬ್ಬಂದಿಗಳು ಕೆಲಸಕ್ಕೆ ರಾಜೀನಾಮೆ ನೀಡಿದ ಕಾರಣ ಉಡುಪಿ ತಾಲೂಕು 23ನೇ ಬೈರಂಪಳ್ಳಿ ಗ್ರಾಮ ಪಂಚಾಯತ್ ವರ್ಷದ ಮೊದಲ ದಿನವೇ ಬಾಗಿಲು ಮುಚ್ಚಿದೆ. ಡಿ.ಸೆಂಬರ್ 19 ರಂದು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಚೇರಿಯಲ್ಲಿ ಕೆಲಸದ ಒತ್ತಡ ದಿಂದ ಕಾರ್ಯನಿರ್ವಹಿಸಲು ಸಂಕಷ್ಟವಾಗುತ್ತಿದ್ದು ಆರೋಗ್ಯದ ದೃಷ್ಟಿಯಿಂದ ರಾಜೀನಾಮೆಯನ್ನು ನೀಡುತ್ತಿದ್ದೇವೆ ಎಂದು ಪತ್ರವನ್ನು ಸಲ್ಲಿಸಿದ್ದರು. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮೇಲಾಧಿಕಾರಿಗಳಿಗೆ ಪತ್ರ ಮೂಲಕ ಮಾಹಿತಿ ನೀಡಿದ್ದರು ಯಾವುದೇ ಕ್ರಮವನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಗ್ರಾಮ ಪಂಚಾಯತ್ ಕಛೇರಿಗೆ…

Read More

ಮಂಗಳೂರು: ಪಾಳುಬಾವಿ ಕಟ್ಟೆಯಲ್ಲಿ ಕುಳಿತು ಮಾತನಾಡುವ ವೇಳೆ ಆಯತಪ್ಪಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಮಂಗಳೂರು: ಸಮುದ್ರ ತೀರದ ಬಳಿ ಇರುವ ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಸ್ನೇಹಿತರೊಂದಿಗೆ ಮಾತನಾಡುತ್ತಿರುವ ವೇಳೆ ಆಯತಪ್ಪಿ ಬಾವಿಗೆ ಬಿದ್ದು ಸ್ಥಳೀಯ ಮೀನುಗಾರರೊಬ್ಬರು ಸಾವನಪ್ಪಿದ ಘಟನೆ ಸೋಮೇಶ್ವರ ಉಚ್ಚಿಲದಲ್ಲಿ ನಡೆದಿದೆ. ಮೃತರನ್ನು ಉಚ್ಚಿಲ ವಾಝ್ಕೊ ರೆಸಾರ್ಟ್ ಬಳಿಯ ನಿವಾಸಿ ಶಶೀಂದ್ರ ಎಂ. ಉಚ್ಚಿಲ್ (74) ಎಂದು ಗುರುತಿಸಲಾಗಿದೆ. ಶಶೀಂದ್ರ ಅವರು ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದು, ಸ್ನೇಹಿತನೊಂದಿಗೆ ವಾಝ್ಕೋ ರೆಸಾರ್ಟ್ ಮುಂಭಾಗದ ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಹರಟುತ್ತಿದ್ದರಂತೆ. ಈ ವೇಳೆ ಶಶೀಂದ್ರ ಅವರು ಆಯತಪ್ಪಿ…

Read More

ಭಾರತಕ್ಕೆ ದೊಡ್ಡ ಯಶಸ್ಸು ; 26/11 ಮುಂಬೈ ದಾಳಿ ಆರೋಪಿ ‘ತಹವ್ವುರ್ ರಾಣಾ’ ಹಸ್ತಾಂತರಕ್ಕೆ ‘ಅಮೆರಿಕ’ ಗ್ರೀನ್ ಸಿಗ್ನಲ್

ನವದೆಹಲಿ : ಅಮೆರಿಕದಲ್ಲಿ ಭಾರತ ಭರ್ಜರಿ ಯಶಸ್ಸು ಕಂಡಿದ್ದು, 26/11ರ ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನ ಭಾರತಕ್ಕೆ ಕರೆತರಲು ದಾರಿ ಸುಗಮವಾಗಿದೆ. ರಾಣಾ ಹಸ್ತಾಂತರಕ್ಕೆ ಅಮೆರಿಕದ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಆಗಸ್ಟ್ 2024 ರಲ್ಲಿ ತೀರ್ಪು ನೀಡುವಾಗ, ಯುಎಸ್ ನ್ಯಾಯಾಲಯವು ಭಾರತ-ಯುಎಸ್ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ರಾಣಾನನ್ನ ಭಾರತಕ್ಕೆ ಕಳುಹಿಸಲು ಅನುಮೋದಿಸಿತ್ತು. ಇದೀಗ ಭಾರತ ಅವರನ್ನು ಶೀಘ್ರ ವಾಪಸ್ ಕರೆತರುವ ಪ್ರಕ್ರಿಯೆಯನ್ನ ಚುರುಕುಗೊಳಿಸುತ್ತಿದೆ. 26/11ರ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿಗೆ ಸಹಾಯ ಮಾಡಿದ…

Read More

ಮಂಗಳೂರಿನ ಬಲ್ಮಠ ಬಳಿ ಬೃಹತ್ ಗಾತ್ರದ ಮರ ಉರುಳಿ ವಾಹನಗಳಿಗೆ ಹಾನಿ

ಮಂಗಳೂರು: ಮಂಗಳೂರಿನ ಬಲ್ಮಠ ಕ್ರೀಡಾಂಗಣದ ಬಳಿ ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದ ಘಟನೆ ನಡೆದಿದೆ.  ಮರ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆಯೇ ಉರುಳಿದ್ದು, ಮೆಸ್ಕಾಂಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮರ ಬಿದ್ದ ಜಾಗದಲ್ಲಿ ನಿಲ್ಲಿಸಿದ್ದ ಆಟೋ ಹಾಗೂ ಕೆಲವು ವಾಹನಗಳಿಗೆ ಹಾನಿ ಆಗಿದೆ ಎಂದು ತಿಳಿದು ಬಂದಿದೆ.  ಅಲ್ಲದೆ ಮರ ಬಿದ್ದ ಪರಿಣಾಮ  ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್, ನೀರಿನ ಸರಬರಾಜಿನಲ್ಲಿ ವ್ಯತ್ಯಯ  ಉಂಟಾಗಿದೆ.ಸ್ಥಳಕ್ಕೆಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

Read More

ಶ್ರೀದೇವಿ ದೇವಸ್ಥಾನ ಪೋಲಿಸ್ ಲೈನ್: ಜ. 4 ರಂದು ಭಕ್ತಿನಾಮ ಸಂಕೀರ್ತನೆ ಹಾಗೂ ಸಾಮೂಹಿಕ ಶ್ರೀ ಶನಿಪೊಜೆ

ಮಂಗಳೂರು: ಶ್ರೀ ದೇವಿ ದೇವಸ್ಥಾನ ಪೋಲಿಸ್ ಲೈನ್ ಮಂಗಳೂರು ಇಲ್ಲಿ ಜನವರಿ 4 ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ವರೆಗೆ ಭಕ್ತಿನಾಮ ಸಂಕೀರ್ತನೆ ಹಾಗೂ ಸಂಜೆ 6:30 ರಿಂದ ಸಾಮೂಹಿಕ ಶ್ರೀ ಶನಿಪೊಜೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಹಾಯಕ ಪೊಲೀಸ್ ಆಯುಕ್ತರಾದ ಎಮ್.ಎಸ್.ಉಪಾಸೆ, ಬಜಪೆ ಪಟ್ಟಣ ಪಂಚಾಯತ್ ಮುಖ್ಯಧಿಕಾರಿಯಾದ ಪಕೀರ ಮೂಲ್ಯ ವೈ, ಅಸಿಸ್ಟೆಂಟ್ ಮ್ಯಾನೇಜರ್ ಎಮ್.ಸಿ.ಎಫ್. ಸಂದೀಪ್ ಅತ್ತಾವರ, ಶೈಲೇಶ್, ನಂದೀಶ ಎಸ್. ಪಾಂಡೇಶ್ವರ, ಸುಬ್ರಹ್ಮಣ್ಯ ಮುಂತಾದ ಗಣ್ಯ ಅಥಿತಿಗಳು ಪಾಲ್ಗೊಂಡು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ…

Read More

ಕಾರ್ಕಳ: ವ್ಯಕ್ತಿಯನ್ನು ಬೆದರಿಸಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 8 ಲಕ್ಷ ರೂ. ವಂಚನೆ

ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಶಿವಾನಂದ ವಿ. ಪದ್ಮಶಾಲಿ ಅವರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ಸೈಬರ್ ಕಳ್ಳರು ಲಕ್ಷಾಂತರ ರೂ. ವಂಚಿಸಿದ ಬಗ್ಗೆ ದೂರು ದಾಖಲಾಗಿದೆ. ಅಪರಿಚಿತ ವ್ಯಕ್ತಿಯು ಮುಂಬಯಿ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಮೇಲೆ ಕೇಸು ದಾಖಲಾಗಿದೆ ಎಂದು ಬೆದರಿಸಿದ್ದಾನೆ. 30 ಲಕ್ಷ ರೂ. ಹಣವನ್ನು ನೀವು ಬೇರೆ ಬೇರೆ ಅಕೌಂಟ್ ನಲ್ಲಿ ಮೋಸ ಮಾಡಿದ್ದೀರಿ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿ ನಿಮ್ಮ ಅಕೌಂಟ್ ವೆರಿಫೈ…

Read More

ಮಂಗಳೂರು: ಮೂರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಪಾಪಿ ತಂದೆಗೆ ಮರಣ ದಂಡನೆ..!!

ಮಂಗಳೂರು: ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆಗೈದು ಬಳಿಕ ಪತ್ನಿಯ ಕೊಲೆಗೆ ಯತ್ನಿಸಿದ್ದ ಅಪರಾಧಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಮುಲ್ಕಿಯ ತತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಅಲಿಯಾಸ್​ ಹಿತೇಶ್ ಕುಮಾರ್ (43) ಮರಣದಂಡನೆಗೊಳಗಾದ ಅಪರಾಧಿ. ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡಿನಲ್ಲಿ 2022 ಜೂನ್ 23ರಂದು ಸಂಜೆ ಆರೋಪಿಯು ತನ್ನ 14, 11 ಮತ್ತು 4 ವರ್ಷದ ಮಕ್ಕಳನ್ನು ಮನೆಯ ಬಳಿ ಇರುವ ಬಾವಿಗೆ…

Read More

ಮಂಗಳೂರು: ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರ – ರಜತ ಮಹೋತ್ಸವ ಹಾಗೂ ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು : ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ, ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಹಾಗೂ ಏಕಹಾ ಭಜನಾ ಮಹೋತ್ಸವವು ಇದೇ ಬರುವ ಮಾರ್ಚ್ 1 ರಿಂದ 4, 2025 ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮವು ಇತ್ತೀಚಿಗೆ ಭಜನಾ ಮಂದಿರದ ಆವರಣದಲ್ಲಿ ನಡೆಯಿತು. ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಶ್ರೀ ಡಿ. ವೇದವ್ಯಾಸ್ ಕಾಮತ್ ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಇನ್ನಿತರ…

Read More