admin

ತಿರುಪತಿಯಲ್ಲಿ ಭೀಕರ ಕಾಲ್ತುಳಿತಕ್ಕೆ ನಾಲ್ವರು ಸಾವು…!!

ತಿರುಮಲ: ವೈಕುಂಠ ಏಕಾದಶಿ ಆಚರಣೆಯ ಟೋಕನ್ ತೆಗೆದುಕೊಳ್ಳುವ ವೇಳೆ ಉಂಟಾದ ಕಾಲ್ತುಳಿತಕ್ಕೆ ಕನಿಷ್ಠ ನಾಲ್ವರು ಭಕ್ತರು ಸಾವನಪ್ಪಿದ ಘಟನೆ ತಿರುಪತಿಯಲ್ಲಿ ನಡೆದಿದೆ. ತಮಿಳುನಾಡಿನ ಸೇಲಂನ ಮಹಿಳೆ ಸೇರಿದಂತೆ ನಾಲ್ವರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ವೈಕುಂಠ ದ್ವಾರ ದರ್ಶನದ ಟಿಕೆಟ್‌ ಪಡೆಯಲು ನೂಕುನುಗ್ಗಲು ಉಂಟಾಗಿದ್ದರಿಂದ ಈ ದುರಂತ ಘಟನೆ ನಡೆದಿದೆ. ತಿರುಪತಿಯ ವಿಷ್ಣುನಿವಾಸಂ ಬಳಿ ನೂಕುನುಗ್ಗಲು ಸಂಭವಿಸಿ ದುರಂತ ಸಂಭವಿಸಿದೆ. ಅಲಿಪಿರಿ, ಶ್ರೀನಿವಾಸಂ, ಸತ್ಯನಾರಾಯಣಪುರಂ ಹಾಗೂ ಪದ್ಮಾವತಿಪುರಂನಲ್ಲಿ ಭಕ್ತರು ಜಮಾಯಿಸಿದ್ದರಿಂದ ಭಾರಿ ನೂಕುನುಗ್ಗಲು ಉಂಟಾಗಿತ್ತು….

Read More

5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ಪಿಎಂ-ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಅಡ್ಡಗಾಲು- ಸಂಸದ ಕ್ಯಾ. ಬ್ರಿಜೇಶ್ ಚೌಟ ಆಕ್ರೋಶ

ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದಲ್ಲಿ 70ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವುದಕ್ಕೆ ಪ್ರಾರಂಭಿಸಿರುವ ಪಿಎಂ-ಆಯುಷ್ಮಾನ್ ಭಾರತ್ ಯೋಜನೆಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಅಡ್ಡಗಾಲು ಹಾಕುವ ಮೂಲಕ ಬಡವರ ಅದರಲ್ಲಿಯೂ ಹಿರಿಯ ನಾಗರಿಕರ ಜೀವದ ಜತೆಗೆ ಚೆಲ್ಲಾಟವಾಡುವ ಅತ್ಯಂತ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ಬಹಳ ಖೇದಕರ ವಿಚಾರ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ. 70 ವರ್ಷ ಮೇಲ್ಪಟ್ಟ ಹಿರಿಯ…

Read More

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿ ಮೊಹಮ್ಮದ್  ಜಾಬೀರ್ ಜಾಮೀನು ಅರ್ಜಿ ತಿರಸ್ಕೃತ

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ನರು ಅವರ ಹತ್ಯೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಮೊಹಮ್ಮದ್ ಜಾಬೀರ್ ಎಂಬಾತನಿಗೆ ಜಾಮೀನು ನೀಡಲು ಸುಪ್ರಿಂ ಕೋರ್ಟ್ ನಿರಾಕರಿಸಿದೆ. ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಜಾಬಿರ್ (32) ತನ್ನ ಕಸ್ಟಡಿ ವಿಸ್ತರಿಸಿ ಡೀಫಾಲ್ ಜಾಮೀನು ತಿರಸ್ಕರಿಸಿ ವಿಶೇಷ ಎನ್‌ ಐಎ ನ್ಯಾಯಾಲಯ 2023ರ ಫೆ.9 ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‍ ಕುಮಾರ್, ಮತ್ತು…

Read More

ಮಂಗಳೂರು: ಪ್ರವಾಸಕ್ಕೆ ಬಂದಿದ್ದ ಮೂವರು ಸಮುದ್ರದಲ್ಲಿ ಮುಳುಗಿ ಸಾವು

ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಸಮುದ್ರದ ಜೆಟ್ಟಿ ಬಳಿ ಇರುವ ಬೀಚ್ ಗೆ ಪ್ರವಾಸಕ್ಕೆ ಬಂದು ನೀರಿಗೆ ಇಳಿದ ಮೂವರು ನೀರು ಪಾಲಾದ ಘಟನೆ ಇಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ುಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿನ ಸತ್ಯವೇಲು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರು. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಹೊರಟು ಇಂದು ಮಧ್ಯಾಹ್ನ 12.30 ಕ್ಕೆ ಹೊಸಬೆಟ್ಟು ಬಳಿ ಇರುವ ಬೀಚ್ ಗೆ ಪ್ರವಾಸ ನಿಟ್ಟಿನಲ್ಲಿ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ…

Read More

ಉಡುಪಿ: ರಸ್ತೆ ಬದಿಯ ಮರಕ್ಕೆ ಬೈಕ್ ಡಿಕ್ಕಿ- 28 ವರ್ಷದ ಯುವಕ ಮೃತ್ಯು

ಉಡುಪಿ: ರಸ್ತೆ ಬದಿಯ ಮರಕ್ಕೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಬೈರಂಪಳ್ಳಿ ಗ್ರಾಮದ ದೂಪದಕಟ್ಟೆ ಚೌಡೇಶ್ವರಿ ದೇವಸ್ಥಾನದ ಸಂಭವಿಸಿದೆ. ಮೃತರನ್ನು ಸಂತೋಷ್ (28) ಎಂದು ಗುರುತಿಸಲಾಗಿದೆ. ಪೆರ್ಡೂರು ಕಡೆಯಿಂದ ಹರಿಖಂಡಿಗೆ ಕಡೆಗೆ ಹೋಗುತ್ತಿದ್ದ ಬೈಕ್, ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸವಾರ ಸಂತೋಷ್ ಹಿರಿಯಡಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹಿರಿಯಡ್ಕ…

Read More

ಮಂಗಳೂರು: ಪೆಟ್ರೋಲ್ ಬಂಕ್ ಮೇಲ್ವಿಚಾರಕನಿಂದ ಲಕ್ಷಾಂತರ ರೂ. ವಂಚನೆ- ದೂರು

ಮಂಗಳೂರು: ಪೆಟ್ರೋಲ್ ಬಂಕ್‌ನ ಸೂಪರ್‌ವೈಸರ್‌ನೊಬ್ಬ ವೈಯಕ್ತಿಕ ಖಾತೆಯ ಕ್ಯು ಆರ್ ಕೋಡ್‌ನ್ನು ಹಾಕಿ 58.85 ಲಕ್ಷ ರೂ. ವಂಚಿಸಿರುವ ಬಗ್ಗೆ ದೂರು ನೀಡಲಾಗಿದೆ. ಬಂಗ್ರಕೂಳೂರಿನ ರಿಲಯನ್ಸ್‌ ಔಟ್‌ಲೆಟ್ ಪ್ರೈಯೆಲ್ ಬಂಕ್‌ ನಲ್ಲಿ ಸೂಪರ್‌ವೈಸರ್ ಆಗಿ ದ್ದ ಮೋಹನದಾಸ್ ಎಂಬಾತ ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆಯ ಜವಾಬ್ದಾರಿ ನೋಡಿಕೊಂಡಿದ್ದನು ಈತ 2023ರ ಮಾ.1ರಿಂದ ಜು.31ರವರೆಗೆ ಪೆಟ್ರೋಲ್ ಬಂಕ್‌ನಲ್ಲಿ ಸಂಸ್ಥೆಯ ಕ್ಯುಆರ್ ಕೋಡ್ ತೆಗೆದು ವೈಯಕ್ತಿಯ ಖಾತೆಯ ಕ್ಯುಆರ್ ಕೋಡ್‌ನ್ನು ಅಳವಡಿಸಿ ಆ ಮೂಲಕ 58,85,333 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ…

Read More

ಪುತ್ತೂರು: KSRTC ಬಸ್ ಮತ್ತು ಬೈಕ್ ನಡುವೆ ಅಪಘಾತ: ಇಬ್ಬರು ಗಂಭೀರ

ಪುತ್ತೂರು: ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ವಿದ್ಯಾರ್ಥಿಗಳಿಬ್ಬರು ತೀವ್ರ ಗಾಯಗೊಂಡ ಘಟನೆ ಪುತ್ತೂರಿನ ಹೊರವಲಯ ದಾರಂದಕುಕ್ಕು ಕೊಲ್ಯದಲ್ಲಿ ಜ.8 ರಂದು ಬೆಳಿಗ್ಗೆ ನಡೆದಿದೆ. ಬೆಳ್ಳಿಪ್ಪಾಡಿ ನಿವಾಸಿಗಳಾಗಿರುವ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಬೈಕ್ ಸವಾರ ನಿಶಾಂತ್ ಮತ್ತು ಹಿಂಬದಿ ಸವಾರ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿ ಕಾರ್ತಿಕ್ ಎಂಬವರು ಗಾಯಗೊಂಡ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳಿಗೆ ಹೋಗಲು ಬೈಕ್ ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕೆ…

Read More

ಹಸಿ ಕಡಲೆ ಸೇವನೆಯ 10 ಆರೋಗ್ಯ ಪ್ರಯೋಜನಗಳು..!

ಹಸಿರು ಕಡಲೆಗಳು ಅಥವಾ ಹಸಿ ಕಡಲೆಗಳು ಎಳೆಯ ಕಡಲೆಗಳಾಗಿವೆ. ಇವುಗಳನ್ನು ಸಂಪೂರ್ಣವಾಗಿ ಬಲಿತ ಮತ್ತು ಒಣಗುವ ಮೊದಲು ಕೊಯ್ಲು ಮಾಡಲಾಗುತ್ತದೆ. ಅವು ಗಾಢವಾದ ಹಸಿರು ಬಣ್ಣ, ಹೆಚ್ಚು ನವಿರಾದ ವಿನ್ಯಾಸವನ್ನು ಹೊಂದಿರುತ್ತವೆ. ಒಣಗಿದ ಇತರ ಕಡಲೆಗಳಿಗೆ ಹೋಲಿಸಿದರೆ ಸ್ವಲ್ಪ ಸಿಹಿ ರುಚಿಯನ್ನು ಹೊಂದಿರುತ್ತವೆ. ಫೈಬರ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುವ ಹಸಿ ಕಡಲೆಯು ನಿಜವಾಗಿಯೂ ಆರೋಗ್ಯಕರವಾಗಿದೆ. ಹಸಿರು ಕಡಲೆಯನ್ನು ಸೇವಿಸುವುದರಿಂದ ಸಿಗುವ 10 ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ. 1….

Read More

ಪುತ್ತೂರು: ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ ಕಾಮುಕ ಬಶೀರ್ ಅರೆಸ್ಟ್..!

ಪುತ್ತೂರು :  ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಮಹಿಳೆಯೊಂದಿಗೆ ಕಾಮುಕ ವ್ಯಕ್ತಿಯೋರ್ವ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜದಲ್ಲಿ ನಡೆದಿದೆ. ಅಸಭ್ಯ ವರ್ತನೆ ತೋರಿದ ವ್ಯಕ್ತಿ ಬಶೀರ್‍ ಎಂದು ಪತ್ತೆ ಹಚ್ಚಲಾಗಿದೆ. ಕಾಮುಕ ಬಶೀರ್  ಮಹಿಳೆಯನ್ನು ತಾಗಿಕೊಂಡು ಹೋಗಿದ್ದು, ನಂತರ ಆಕೆಯನ್ನು ಮನೆ ತನಕ ಹಿಂಬಾಲಿಸಿದ್ದಾನೆ. ಬಳಿಕ ಮನೆಯ ಎದುರು ಭಾಗದಲ್ಲೇ ಮರ್ಮಾಂಗವನ್ನು ತೋರಿಸಿ, ಆಶ್ಲೀಲವಾಗಿ ನಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ವೇಳೆ ಮಹಿಳೆಯು ಗಾಬರಿಗೊಂಡು ಜೋರಾಗಿ ಬೊಬ್ಬೆ ಹಾಕಿದ್ದಾಳೆ. ಕಿರುಚಿದ ಶಬ್ದಕ್ಕೆ…

Read More

ಮಂಗಳೂರು: ಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕೂಲಿ ಕಾರ್ಮಿಕ ಮೃತ್ಯು

ಮಂಗಳೂರು : ಒಳಚರಂಡಿ ಕಾಮಗಾರಿ ವೇಳೆ ಮಣ್ಣಿನ ರಾಶಿ ಕುಸಿದು ಕೂಲಿ ಕಾರ್ಮಿಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಗರದ ಹೊಗೆಬೈಲ್‌ನಲ್ಲಿ ನಡೆದಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ಕಮಲ್ ಹುಸೇನ್ (20) ಎಂದು ಗುರುತಿಸಲಾಗಿದೆ. ಎಂಟು ಅಡಿ ಆಳದಲ್ಲಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದ್ದಕ್ಕಿದ್ದಂತೆ, ಸುತ್ತಮುತ್ತಲಿನ ಕೆಸರು ಒಳಕ್ಕೆ ನುಗ್ಗಿ, ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದರು. ಸ್ಥಳೀಯ ನಿವಾಸಿಗಳು ಇಬ್ಬರು ಕಾರ್ಮಿಕರನ್ನು ಅವಶೇಷಗಳಿಂದ ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಕಮಲ್ ಹುಸೇನ್…

Read More