admin

ಮಂಗಳೂರು: ಆಟವಾಡುತ್ತಿದ್ದ ವೇಳೆ ಯುವಕ ಕುಸಿದು ಬಿದ್ದು ಸಾವು

ಮಂಗಳೂರು: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಫಳ್ನೀರ್‌ನಲ್ಲಿ ಜನವರಿ 15 ರಂದು ನಡೆದಿದೆ. ಅಟ್ಟಾವರ್ ಐವರಿ ಟವರ್ ನಿವಾಸಿಯಾಗಿದ್ದ ಮತ್ತು ಅದ್ದೂರು ಮೂಲದ ಶರೀಫ್ ಅವರ ಪುತ್ರ ಶಹೀಮ್ (20) ಮೃತ ಯುವಕ. ಗೆಳೆಯರೊಂದಿಗೆ ಆಡುತ್ತಿದ್ದಾಗ ಶಹೀಮ್ ಅವರು ಏಕಾಏಕಿ ಕೋರ್ಟ್ ಮೇಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶಹೀಮ್ ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿದ್ದರು.

Read More

ಮಂಗಳೂರು: ಸೈಬರ್ ಅಪರಾಧಿಗಳಿಗೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಗೆ ನೆರವಾದ ಇಬ್ಬರು ಆರೋಪಿಗಳು ಅರೆಸ್ಟ್

ಮಂಗಳೂರು: ಸೈಬರ್ ಅಪರಾಧಿಗಳಿಗೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಸೆನ್ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ. ಪಿರ್ಯಾದಿದಾರರಿಗೆ ಅಪಚಿರಿತ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂದು ನಂಬಿಸಿ ಹಂತ ಹಂತವಾಗಿ ಒಟ್ಟು 77,96,322.08 ರೂ. ಹಣ ಪಡೆದು ವಂಚನೆಗೈದಿದ್ದ.‌ ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ 108/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ 318(4),3(5) ಬಿ.ಎನ್.ಎಸ್ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು…

Read More

ಮಂಗಳೂರು: ಟಿಪ್ಪರ್ ನ ಒಳಗೆ ಯುವಕ ನಿಗೂಢ ಸಾವು

ಮಂಗಳೂರು : ಗಡಿ ಭಾಗದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಯರ್‌ಕಟ್ಟೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ವ್ಯಕ್ತಿಯೊಬ್ಬನ ಮೃತ ದೇಹ ಸಿಕ್ಕಿದ್ದು, ಪೈವಳಿಕೆ ಬಾಯಾರು ಪದವು ಕ್ಯಾಂಪ್ಕೋ ಕಂಪೌಂಡ್‌ ಬಳಿಯ ಮುಹಮ್ಮದ್‌ ಆಶಿಫ್‌ (29) ಎಂದು ಗುರುತಿಸಲಾಗಿದೆ. ಬುಧವಾರ ಮುಂಜಾನೆ 3.20ಕ್ಕೆ ಟಿಪ್ಪರ್‌ನೊಳಗೆ ಆಶಿಫ್‌ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಹೈವೇ ಪಟ್ರೋಲಿಂಗ್‌ ಪೊಲೀಸ್‌ ಹಾಗೂ ಸ್ಥಳೀಯರು ಅಶಿಫ್ ಅವರನ್ನು ಬಂದ್ಯೋ ಡ್‌ನ‌ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಕುಂಬಳೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ, ಫೋನ್‌…

Read More

ಜ.18 ರಂದು `ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ’

ಯಲ್ಲಾಪುರ: ಬೆಡಸಗದ್ದೆಯ ಸಮಾನ ಮನಸ್ಕರೆಲ್ಲರೂ ಸೇರಿ ಜಿಲ್ಲಾ ಮಟ್ಟದ `ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ’ ಆಯೋಜಿಸಿದ್ದಾರೆ. ಜನವರಿ 18ರ ಶನಿವಾರ ಮಧ್ಯಾಹ್ನ 3 ಗಂಟೆಗೆ ವನಶ್ರೀ ಕ್ರೀಡಾಂಗಣದಲ್ಲಿ ಈ ಆಟ ಶುರುವಾಗಲಿದೆ. ಹೀಗಾಗಿ ಜನವರಿ 17ಕ್ಕೆ ಹೆಸರು ನೊಂದಾಯಿಸಲು ಕೊನೆ ದಿನ. ಈ ಆಟದಲ್ಲಿ ಗೆದ್ದ ತಂಡಕ್ಕೆ ಮೊದಲ ಬಹುಮಾನ 10 ಸಾವಿರ ರೂ ಸಿಗಲಿದೆ. ಎರಡನೇ ಬಹುಮಾನ 5 ಸಾವಿರ ರೂ, ಮೂರನೇ ಬಹುಮಾನ 2 ಸಾವಿರ ರೂ ಘೋಷಣೆಯಾಗಿದೆ. ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಪಿ…

Read More

ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಮೈಸೂರಿನ ಮುಡಾ ಹಗರಣದಡಿ ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಮುಖ್ಯಮಂತ್ರಿಗಳ ಕುಟುಂಬ ಅಕ್ರಮವಾಗಿ ಪಡೆದುಕೊಂಡಿತ್ತು. ನಿವೇಶನಗಳನ್ನು ಹಿಂತಿರುಗಿಸಿದರೂ ತಪ್ಪು ತಪ್ಪೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಅಪರಾಧ ಅಪರಾಧವೇ; ನಿವೇಶನ ಹಿಂತಿರುಗಿಸಿದ ಮಾತ್ರಕ್ಕೆ ಕಳಂಕದಿಂದ ಹೊರಕ್ಕೆ ಬರಲು ಸಾಧ್ಯವಿಲ್ಲ. ಇವತ್ತು ಸ್ನೇಹಮಯಿ ಕೃಷ್ಣರ ಮೇಲೆ ಬೆದರಿಕೆ ಹಾಕಿ ಕೇಸುಗಳನ್ನು ಹಾಕುತ್ತಿದ್ದಾರೆ. ಇವೆಲ್ಲ ಷಡ್ಯಂತ್ರ, ಪಿತೂರಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು….

Read More

ಕಾರ್ಕಳ : ಯಕ್ಷಗಾನ ಪ್ರದರ್ಶನ ಸ್ಥಗಿತಕ್ಕೆ ಮುಂದಾದ ಪೊಲೀಸರು – ಗ್ರಾಮಸ್ಥರಿಂದ ವಿರೋಧ

ಕಾರ್ಕಳ : ಅನುಮತಿ ಪಡೆಯದೇ ರಾತ್ರಿ ಗಂಟೆ 10ರ ಬಳಿಕ ಯಕ್ಷಗಾನ ಪ್ರದರ್ಶನಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜಾರ್ಕಳ ಮುಂಡ್ಲಿ ಎಂಬಲ್ಲಿ ನಡೆದಿದೆ. ಜ. 14ರಂದು ರಾತ್ರಿ ಮುಂಡ್ಲಿ ಗ್ರಾಮದಲ್ಲಿ ಶ್ರೀ ಈಶ್ವರ ಯಕ್ಷಗಾನ ಸಂಘದ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತಿತ್ತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಜೆಕಾರು ಠಾಣಾ ಪೊಲೀಸರು ಧ್ವನಿವರ್ಧಕಕ್ಕೆ ಅನುಮತಿ ಪಡೆದಿಲ್ಲವಾದ್ದರಿಂದ ಯಕ್ಷಗಾನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದಾರೆ….

Read More

ಮಂಗಳೂರು ಫುಡ್ ಫೆಸ್ಟಿವಲ್ ಗೆ ಡಾಲಿ ಚಾಯ್ ವಾಲ ಆಗಮನ

ಮಂಗಳೂರು: ಜನವರಿ 18ರಿಂದ ಪ್ರಾರಂಭವಾಗಲಿರುವ ಮಂಗಳೂರು ಫುಡ್ ಫೆಸ್ಟಿವಲ್ ಗೆ ಸೋಶಿಯಲ್ ಮಿಡಿಯಾ ಟ್ರೆಂಡ್ ಖ್ಯಾತ ಡಾಲಿ ಚಾಯ್ ವಾಲ ಆಗಮಿಸಲಿದ್ದಾರೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜನವರಿ 18 ರಿಂದ 22ರ ವರೆಗೆ ಐದು ದಿನಗಳ ಕಾಲ ನಗರದಲ್ಲಿ “ಮಂಗಳೂರು ಸ್ಟ್ರೀಟ್‌ ಫುಡ್‌ ಫಿಯೆಸ್ಟ’ ನಡೆಯಲಿದೆ. ಈ ಕಾರ್ಯಕ್ರಮದ ಮೊದಲ ದಿನದ ಆಕರ್ಷಣೆಯಾಗಿ ಡಾಲಿ ಚಾಯ್‌ವಾಲ ಅವರು ಭಾಗವಹಿಸಲಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನವರಿ 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ….

Read More

ಮಂಗಳೂರು: ಎರಡು ಬೈಕ್‌ಗಳ ನಡುವೆ ಅಪಘಾತ- ಬಾಲಕಿ ಸಾವು

ಮಂಗಳೂರು: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ರಾತ್ರಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್‌ಕಟ್ಟೆ ಎಂಬಲ್ಲಿ ನಡೆದಿದೆ. ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶ(13) ಮೃತಪಟ್ಟ ಬಾಲಕಿ. ಬೈಕ್ ಚಲಾಯಿಸುತ್ತಿದ್ದ ಬಾಲಕಿಯ ತಂದೆ ಅಬ್ದುರ್ರಹ್ಮಾನ್ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಲ್‌ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್‌ ನಲ್ಲಿ ಬಂದ ನೆತ್ತರಕೆರೆ ನಿವಾಸಿ ರಂಜಿತ್ ಎಂಬವರ ಬೈಕ್ ಬಿ.ಸಿ.ರೋಡ್ ಕಡೆಯಿಂದ ತುಂಬೆ ಕಡೆಗೆ ಬರುತ್ತಿದ್ದ ಅಬ್ದುರ್ರಹ್ಮಾನ್ರ ಬೈಕಿಗೆ ಡಿಕ್ಕಿ ಹೊಡೆದಿದೆ…

Read More

ಬೆಳ್ತಂಗಡಿ: ನಾಪತ್ತೆಯಾಗಿದ್ದ ನಾಗೇಶ್ ಕುಲಾಲ್ ಶವವಾಗಿ ಪತ್ತೆ..!

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಮಾಲಾಡಿ ಶಕ್ತಿನಗರ ಕೋಲ್ಪೆದಬೈಲ್ ನಿವಾಸಿ ನಾಗೇಶ್ ಕುಲಾಲ್( 33) ಜ.13 ರಂದು ಬೆಳಗ್ಗೆ ಮನೆಯಲ್ಲಿ ಸಂಜೆ ಬರುತ್ತೇನೆ ಎಂದು ಹೇಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು,ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜ.14 ರಂದು ಧರ್ಮಸ್ಥಳ ಪೋಲಿಸ್ ಠಾಣೆ ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ನಿಷೇಧಿತ MDMA ಪೌಡರ್‌ ಮಾರಾಟಕ್ಕೆ ಯತ್ನಿಸಿದ ನಾಲ್ಕು ಮಂದಿ ಪೊಲೀಸ್ ವಶಕ್ಕೆ

ಉಡುಪಿ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್‌ ಮಾರಾಟಕ್ಕೆ ಯತ್ನಿಸಿದ ನಾಲ್ಕು ಮಂದಿಯನ್ನು ಸೆನ್ ಅಪರಾಧ ದಳ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಬೈಂದೂರು ತಾಲೂಕು ಮರವಂತೆ ಬೀಚ್‌ ಸಮೀಪ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್‌ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ದಾಳಿ ಸಂದರ್ಭ ಅಬ್ರಾರ್ ಶೇಖ್, ಮೊಹಮ್ಮದ್ ಇಸ್ಮಾಯಿಲ್‌ ಫ‌ರ್ಹಾನ್, ಮೊಹಮ್ಮದ್ ಜಿಯಾಮ್ ಬೆಳ್ಳಿ, ನೌಮನ್ ಸಜ್ಜಾದ್ ಮುಸ್ತಕೀಮ್…

Read More