admin

ಮೇ 3 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹ – ಅರ್ಜಿ ಸಲ್ಲಿಸಲು ಏ.25 ಕೊನೆಯ ದಿನ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹವು ಮೇ.3 ರ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನದಲ್ಲಿ ನಡೆಯಲಿದೆ. ವರನಿಗೆ ಧೋತಿ, ಶಾಲು, ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ಹೂವಿನ ಹಾರ ನೀಡಲಾಗುವುದು.ಎರಡನೇ ವಿವಾಹಕ್ಕೆ ಅವಕಾಶವಿಲ್ಲ.ಮದುವೆಯ ಎಲ್ಲಾ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ವತಿಯ ಮೂಲಕ ಮಾಡಲಾಗುವುದು.ಆಸಕ್ತರು 2025 ಎ.25 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08256-266644 ಸಂಖ್ಯೆಯನ್ನು ಸಂಪರ್ಕಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Read More

ಕರ್ನಾಟಕದಾದ್ಯಂತ ಹೋಮ್ ನರ್ಸಿಂಗ್ ಸೇವೆಯಲ್ಲಿ ಮುಂಚೂಣಿಯಲ್ಲಿರುವ ದಾಸ್‌ ಸೇವಾ ಸಂಸ್ಥೆ ಸಹಸ್ರಾರು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ

ಮಂಗಳೂರಿನಲ್ಲಿರುವ ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಕೇರ್ ಸಂಸ್ಥೆ ಕರ್ನಾಟಕದಾದ್ಯಂತ ತನ್ನ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿ ಬೆಳೆದಿದೆ. ಸಾರ್ಥಕತೆಯ 21 ವರ್ಷದ ಸೇವೆಯಲ್ಲಿ ಸಹಸ್ರಾರು ನಿರುದ್ಯೋಗಿಗಳ ಆಶಾಕಿರಣವಾಗಿ, ವೃದ್ಧರ, ಅಷಕ್ತರ, ಅದೆಷ್ಟೋ ರೋಗಿಗಳ ಆರೈಕೆ ಮಾಡುವ ಮೂಲಕ ಕರ್ನಾಟಕ ರಾಜ್ಯದಾದ್ಯಂತ ಶಾಖೆಗಳನ್ನು ಹೊಂದಿರುವ ದಾಸ್ ಸೇವಾ ಸಂಸ್ಥೆಯು ಅನುಭವಿ ನರ್ಸ್, ಹೋಮ್ ನರ್ಸ್ ಗಳನ್ನು, ಸಂಸ್ಥೆಯ ಜವಾಬ್ದಾರಿಯೊಂದಿಗೆ ಕಳುಹಿಸಿ ಕೊಡುತ್ತದೆ. ಮಗು ಬಾಣಂತಿ ಆರೈಕೆಯಲ್ಲಿ ಅನುಭವ ಉಳ್ಳವರು ಲಭ್ಯವಿರುತ್ತಾರೆ. ಇದರೊಂದಿಗೆ, ದಾಸ್ ಸಂಸ್ಥೆಯಲ್ಲಿ ಉಚಿತ ತರಬೇತಿಯನ್ನು ನೀಡಿ…

Read More

ಕೌಟುಂಬಿಕ ಕಲಹ ಶಂಕೆ : ಪತ್ನಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ಪತಿ

ಸುಳ್ಯ: ಪತಿಯು ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆ ಸುಳ್ಯ ತಾಲೂಕಿನ ದೊಡ್ಡತೋಟ ಸಮೀಪದ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಜ 17ರ ತಡ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ರಾಮಚಂದ್ರ ಎಂಬಾತ ಕೊಲೆ ಆರೋಪಿ. ಆತನ ಪತ್ನಿ ವಿನೋದ ಹತ್ಯೆಯಾದವರು. ರಾಮಚಂದ್ರ ಪತ್ನಿಯನ್ನು ಕೋವಿಯಿಂದ ಗುಂಡಿಕ್ಕಿ ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ವಿನೋದವರಿಗೆ 43 ವರ್ಷವಾಗಿದ್ದು, ರಾಮಚಂದ್ರಗೆ 54 ವರ್ಷ…

Read More

ಬ್ಯಾಂಕ್ ದರೋಡೆ ಪ್ರಕರಣ: ಪರಾರಿಯಾದ ಆರೋಪಿಗಳು ಟೋಲ್ ಗೇಟಿನಲ್ಲಿ ಯಡವಟ್ಟು

ಉಳ್ಳಾಲ: ಮುಸುಕುದಾರಿಗಳಿಂದ ಬ್ಯಾಂಕ್ ದರೋಡೆ ನಡೆಸಿದ ಆರೋಪಿಗಳು ಚಿನ್ನ, ಒಡವೆ, ನಗದುಗಳೆಲ್ಲವೂ ದರೋಡೆ ಮಾಡಿದ್ದು ಫಿಯೇಟ್ ಕಾರಿನಲ್ಲಿ ಬಂದು ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾರೆ. ದೇರಳಕಟ್ಟೆ ಮಾರ್ಗವಾಗಿ ದರೋಡೆಕೋರರು ಪರಾರಿಯಾಗಿರುವ ಮಾಹಿತಿ ಬಂದಿದೆ. ಎಲ್ಲಾ ಟೋಲ್ ಗಳಲ್ಲೂ ತಪಾಸಣೆ ಮಾಡಿ ನೋಡಿದಾಗ ಕೇರಳ ಗಡಿಯಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಸದ್ಯ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿದ್ದು ತಲಪಾಡಿ ಟೋಲ್ ಗೇಟ್ನಲ್ಲಿ 150 ರೂಪಾಯಿ ಹಣ ಕೊಟ್ಟು ರಶೀದಿಯನ್ನು ದರೋಡೆಕೋರರು ಪಡೆದಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ….

Read More

 ಕಾರು ಪಲ್ಟಿ, ಮೂವರಿಗೆ ಗಾಯ, ಓರ್ವ ಗಂಭೀರ..!

ಕಾರ್ಕಳ : ಚಾಲಕನ ನಿಯಂತ್ರಣ ತಪ್ಪಿ ಲಕ್ಸುರಿ ಕಾರೊಂದು ಪಲ್ಟಿಯಾದ ಘಟನೆ ಮುಂಡ್ಕೂರು- ಜಾರಿಗೆಕಟ್ಟೆ ಚರ್ಚ್ ಬಳಿ ನಡೆದಿದೆ. ಕಾರು ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಕಟೀಲು ಪಾದಯಾತ್ರೆ ನಡೆಸುತ್ತಿರುವ ಭಕ್ತರು ಕೂಡಲೇ ಸಮಾಜಸೇವಕ ಕೆದಿಂಜೆ ಸುಪ್ರಿತ್ ಶೆಟ್ಟಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಳುಗಳನ್ನು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದಾರೆ.

Read More

ಉಳ್ಳಾಲ: ಕೋಟೆಕಾರು ಸಹಕಾರಿ ಬ್ಯಾಂಕ್ ನಲ್ಲಿ ಹಗಲು ದರೋಡೆ..!

ಉಳ್ಳಾಲ: ಇಲ್ಲಿನ ಕೋಟೆಕಾರಿನ ಬ್ಯಾಂಕ್ ನ ಕೆ.ಸಿರೋಡು ಶಾಖೆಯಿಂದ ಭಾರೀ ದರೋಡೆ ನಡೆದ ಘಟನೆ ಜ.17ರಂದು ನಡೆದಿದೆ. ಕೋಟೆಕಾರ್ ನಲ್ಲಿ ಬ್ಯಾಂಕ್ ಕಳ್ಳತನ ನಡೆದಿದ್ದು 11 ಕೋಟಿ ಮೌಲ್ಯದ ಚಿನ್ನಾಭರಣ 5 ಲಕ್ಷ ರೂಪಾಯಿ ಹಣವನ್ನು ಗನ್ ತೋರಿಸಿ ಲೂಟಿ ಹೊಡೆದದ್ದಾರೆಂದು ಮಾಹಿತಿ ದೊರೆತಿದೆ. ಗನ್ ಪಾಯಿಂಟ್ ನಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದು ಐವರು ಸದಸ್ಯರೊಂದಿಗೆ ದುಷ್ಕರ್ಮಿಗಳು ಫಿಯೆಟ್ ಕಾರಿನಲ್ಲಿ ಬಂದಿದ್ದಾರೆಂದು ತಿಳಿದಿದೆ. ದುಷ್ಕರ್ಮಿಗಳು ಸ್ಥಳದಿಂದ ಮಂಗಳೂರು ಕಡೆಗೆ ಪರಾರಿಯಾಗಿದ್ದು ಇದೀಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ..

Read More

ನಾನು ತುಳುನಾಡಿನವ “ತುಳುವ“ ಎನ್ನುವುದೇ ಹೆಮ್ಮೆ – ಬಾಲಿವುಡ್ ನಟ ಸುನಿಲ್ ಶೆಟ್ಟಿ

ಮಂಗಳೂರು: ”ನಾನು ತುಳುನಾಡಿನವ, ಮೂಲ್ಕಿ ಬಳಿಯ ಬಪ್ಪನಾಡು ನನ್ನ ಹುಟ್ಟೂರು. ನಾನು ವರ್ಷಕ್ಕೆ ನಾಲ್ಕು ಬಾರಿ ಇಲ್ಲಿಗೆ ಭೇಟಿ ಕೊಡುತ್ತೇನೆ. ನಾನು ತುಳುವ ಎನ್ನುವುದೇ ನನಗೆ ಹೆಮ್ಮೆ. ತುಳು ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನುವ ಆಸೆ ಹಿಂದಿನಿಂದಲೂ ಇತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಬರುತ್ತಿರುವ ಜೈ ಸಿನಿಮಾ ಕಥೆ ಕೇಳಿ ಇಷ್ಟಪಟ್ಟು ನಟಿಸುತ್ತಿದ್ದೇನೆ“ ಎಂದು ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ”ಕಾಮಿಡಿ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು ಅನ್ನುವ…

Read More

ಕಡು ಕಷ್ಟದಲ್ಲಿರುವ ಮೋಹಿನಿ ಕುಲಾಲರ ಮಕ್ಕಳ ವಿದ್ಯಾರ್ಜನೆಗೆ ಕುಲಾಲ ಚಾವಡಿಯಿಂದ ಸಹಕಾರ

ಬೆಳ್ಮಣ್ ಇನ್ನಾ ಗ್ರಾಮ ಸಾಂತೂರು ಕೊಪ್ಪಳದ ಶ್ರೀಮತಿ ಮೋಹಿನಿ ಕುಲಾಲರ ಕಡು ಬಡತನದ ಜೀವನ. ಪಾರ್ಶ್ವವಾಯುವಿಗೆ ತುತ್ತಾದ ಪತಿ, ವಯೋ ಸಹಜ ಖಾಯಿಲೆಯಿಂದ ಬಳಲುತ್ತಿರುವ ತಾಯಿ, ಅನಾರೋಗ್ಯ ಪೀಡಿತ ಹಿರಿಯಕ್ಕ ಮತ್ತು ಅಪಸ್ಮಾರದಿಂದ ಬಳಲುತ್ತಿರುವ ಅಣ್ಣ ಇದರೊಂದಿಗೆ ಶಾಲೆ ಕಲಿಯುತ್ತಿರುವ ಎರಡು ಹೆಣ್ಣು ಮಕ್ಕಳು. 35 ಸೆಂಟ್ಸ್ ಜಾಗದಲ್ಲಿ ಹುಲ್ಲು ಕಡ್ಡಿಯೂ ಚಿಗುರುದಂತ ಬರಡು ಒಣ ಭೂಮಿಯಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದ ಹಳೆಯ ಮನೆಯಲ್ಲಿ ವಾಸವಾಗಿರುವ ಈ ತುಂಬು ಸಂಸಾರದ ತುತ್ತಿನ ಚೀಲ ತುಂಬಲು ಮೋಹಿನಿಯವರು ಕಟ್ಟುವ…

Read More

ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಯುವಕ ಸಾವು..!

ಧರ್ಮಸ್ಥಳ: ಗ್ರಾಮದ ಮುಂಡ್ರುಪಾಡಿ ನಿವಾಸಿ ಮಿಥುನ್ ಕರ್ಕೇರ (25) ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಸಾವನ್ನಪ್ಪಿರುವ ಘಟನೆ ಜ. 16 ರಂದು ತಡರಾತ್ರಿ ನಡೆದಿದೆ. ಯಾವುದೋ ಸಮಾರಂಭ ಕಾರ್ಯಕ್ರಮಕ್ಕೆಂದು ಮಂಗಳೂರಿನಿಂದ ಬಂದ ಯುವಕ ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ಆಗಿ ರೋಡಿಗೆ ಬಿದ್ದು ತಲೆಬಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೃತರುಖಾಸಗಿ ಬಸ್ ಮತ್ತು ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ತಂದೆ ನಾರಾಯಣ ಪೂಜಾರಿ ಹಾಗೂ…

Read More

ಪುತ್ತೂರು : ಸ್ಕೂಟರ್‌ ಮೇಲೆ ಕುಳಿತಿದ್ದ ಯುವಕನಿಗೆ ಕಾರು ಢಿಕ್ಕಿ : ಯುವಕ ಸಾವು

 ಪುತ್ತೂರು ಕೆದಿಲ ಗ್ರಾಮದ ಸತ್ತಿಕಲ್ಲು ಎಂಬಲ್ಲಿ ಸ್ಕೂಟರ್‌ ಮೇಲೆ ಕುಳಿತಿದ್ದ ಯುವಕನಿಗೆ ಕಾರು ಢಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ಕೆದಿಲ ಗ್ರಾಮದ ಸತ್ತಿಕಲ್ಲು ನಿವಾಸಿ ಉಸ್ಮಾನ್‌ (26) ಎಂದು ತಿಳಿಯಲಾಗಿದೆ. ರಸ್ತೆಯ ಎಡ ಬದಿಯ ಮಣ್ಣು ರಸ್ತೆಯಲ್ಲಿ ಸ್ಕೂಟರನ್ನು ನಿಲ್ಲಿಸಿ ಸ್ಕೂಟರಿನ ಮೇಲೆ ಕುಳಿತುಕೊಂಡು ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಿದ್ದ ಉಸ್ಮಾನ್‌ ಅವರ ಸ್ಕೂಟರಿಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್‌ ಸವಾರ ಚರಂಡಿಗೆ ಎಸೆಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ…

Read More