admin

ಮಂಗಳೂರು: 8 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಪೊಲೀಸ್ ಬಲೆಗೆ

ಮಂಗಳೂರು: ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ 8ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ಬಾಳುಪೇಟೆ ನಿವಾಸಿ ಕಿಶೋರ್ ಶೆಟ್ಟಿ ಬಂಧಿತ ಆರೋಪಿ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಆರೋಪಿ ಕಿಶೋರ್ ಶೆಟ್ಟಿ ಮೇಲೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಜಾಮೀನು ಪಡೆದು, ಆ ಬಳಿಕ 8 ವರ್ಷಗಳಿಂದ ನ್ಯಾಯಲಯಕ್ಕೆ ಹಾಜರಾಗದೆ ತಲೆ ಮರಿಸಿಕೊಂಡಿದ್ದಾನೆ. ಈ ಪ್ರಕರಣವನ್ನು ನ್ಯಾಯಲಯ LPC ಪ್ರಕರಣವೆಂದು ಪರಿಗಣಿಸಿತ್ತು. ಅದರಂತೆ ಆರೂಪಿಯ ಪತ್ತೆಯ ಬಗ್ಗೆ ಮಂಗಳೂರು ಉತ್ತರ…

Read More

ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಆಕಾಶ್ : ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಸನ್ಮಾನ

ಮಂಗಳೂರು: ಎಳೆಯ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಗಾಯಕ, ಸಂಗೀತ ಸಂಯೋಜಕ ಮತ್ತು ವಿಡಿಯೋ ನಿರ್ದೇಶಕ ಮಂಗಳೂರಿನ ಅಜಿತ್ ಕುಮಾರ್ ಮತ್ತು ಅಂಜು ದಂಪತಿಯ ಪುತ್ರ ಆಕಾಶ್ ಅಜಿತ್ ಕುಮಾರ್ ಇವರನ್ನು ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಅವರ ಬಹುಮುಖ ಪ್ರತಿಭೆ, ಶ್ರಮ ಮತ್ತು ಕಲೆಗೆ ನೀಡಿರುವ ಅಮೂಲ್ಯ ಕೊಡುಗೆಗಾಗಿ ಈ ಗೌರವವನ್ನು ಅರ್ಪಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ಅಪರೂಪದ ಪ್ರತಿಭೆ:ಆಕಾಶ್ ತಮ್ಮ ಗಾಯನ ಶೈಲಿಯಿಂದ ಮಾತ್ರವಲ್ಲ, ಸಂಗೀತ ಸಂಯೋಜನೆ ಮತ್ತು ನಿರ್ದೇಶನದ…

Read More

ಮಂಗಳೂರು: ಬಿಜೆಪಿ‌ ನೂತನ ದ.ಕ. ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಪುನರಾಯ್ಕೆ

ಮಂಗಳೂರು: ಬಿಜೆಪಿಯ ನೂತನ ದ.ಕ.ಜಿಲ್ಲಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಸತೀಶ್ ಕುಂಪಲ ಅವರು ಪುನರಾಯ್ಕೆಯಾಗಿದ್ದಾರೆ. ಜಿಲ್ಲಾ ಬಿಜೆಪಿ ಚುನಾವಣಾಧಿಕಾರಿಯಾಗಿರುವ ರಾಜೇಶ್ ಕಾವೇರಿ ಅವರು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಸತೀಶ್ ಕುಂಪಲ‌ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಪ್ರಕಟಿಸಿದ್ದಾರೆ. ರಾಜ್ಯ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಣಿಕ್, ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಸಹಾಯಕ ಚುನಾವಣಾಧಿಕಾರಿಗಳಾದ ವಿಕಾಸ್ ಪುತ್ತೂರು ಮತ್ತು ಸಾಜ ರಾಧಾಕೃಷ್ಣ ಆಳ್ವ, ವೀಕ್ಷಕ ಮೋನಪ್ಪ ಭಂಡಾರಿ, ಶಾಸಕರಾದ ಡಿ.ವೇದವ್ಯಾಸ ಕಾಮತ್ ಮತ್ತು ಡಾ.ವೈ ಭರತ್ ಶೆಟ್ಟಿ,…

Read More

ಇನ್ನು ಮುಂದೆ ಯಾವುದನ್ನೂ ಉಚಿತವಾಗಿ ನೀಡಲ್ಲ- ಡಿ.ಕೆ.ಶಿವಕುಮಾರ್

ಬೆಂಗಳೂರು : “ರಾಜ್ಯದ ಜನತೆಗೆ ಎಲ್ಲಾ ಉಚಿತವಾಗಿ ಕೊಟ್ಟರೆ ಸರ್ಕಾರ ನಡೆಸುವುದೇ ಕಷ್ಟ. ಇನ್ನು ಮುಂದೆ ಯಾವುದನ್ನೂ ಉಚಿತವಾಗಿ ನೀಡಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ಭವನದಲ್ಲಿ ನಡೆದ ಬಿಬಿಎಂಪಿ, ಬಿಡಿಎ, BWSSB ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದ್ದಾರೆ. ಮುಂದುವರೆಯುತ್ತಾ ಮಾತನಾಡಿದ ಡಿ.ಕೆ.ಶಿ. “ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಾರೆ, ವಿದ್ಯುತ್ ಫ್ರೀ, ನೀರು ಫ್ರೀ ಅಂದ್ರೆ ಹೇಗೆ ಒಂದು ಪೈಸೆ ಆದ್ರೂ ಬಿಲ್ ಕಟ್ಟಬೇಕಲ್ವ? ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ? ಎಲ್ಲನೂ ಫ್ರೀ…

Read More

ಆನ್‌ಲೈನ್ ನಲ್ಲಿ ಪೊಲೀಸ್ ಅಧಿಕಾರಿಗಳೆಂದು ನಂಬಿಸಿ 2.19 ಲಕ್ಷ ರೂ. ವಂಚನೆ

ಉಡುಪಿ: ಆನ್ಲೈನ್ ನಲ್ಲಿ ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 2.19 ಲಕ್ಷ ರೂ.ವಂಚಿಸಿದ ಘಟನೆ ಉಡುಪಿ 80 ಬಡಗಬೆಟ್ಟು ನಿವಾಸಿ ರವೀಂದ್ರ ವಂಚನೆಗೆ ಒಳಗಾದವರು. ಅವರಿಗೆ ಅನಾಮಧೇಯ ವೀಡಿಯೋ ಕರೆ ಬಂದಿತ್ತು. ನಾವು ಪೊಲೀಸ್ ಅಧಿಕಾರಿಗಳು ಎಂದು ಹೇಳಿದ್ದು, ನಿಮ್ಮ ಆಧಾರ್ ನಂಬರ್ ಅನ್ನು ಡ್ರಗ್ಸ್ ಕೇಸಿನಲ್ಲಿ ಉಪಯೋಗಿಸಲಾಗಿದೆ. ಉತ್ತರ ಪ್ರದೇಶ ರಾಜ್ಯದ ಅಲಂಬಾಗ್ ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿಸಿದ್ದರು. ವೀಡಿಯೋ ಕಾಲ್‌ನಲ್ಲಿ ಇಬ್ಬರು ಪೋಲೀಸ್ ಅಧಿಕಾರಿಗಳಿದ್ದರು. ಅವರು ಹಿಂದಿ…

Read More

ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರ್ ನಲ್ಲಿ ಒಂದು ಕೋಟಿ ರೂ.ಪತ್ತೆ..!

ಕಾರವಾರ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ರಾಮನಗುಳಿ ಬಳಿ ನಿಲ್ಲಿಸಿದ್ದ ಕಾರ್ ನಲ್ಲಿ ಒಂದು ಕೋಟಿ ರೂ. ಪತ್ತೆಯಾಗಿದೆ. ಕಾರ್ ನಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಯಲ್ಲಾಪುರ ಅಂಕೋಲಾ ನಡುವಿನ ಹೆದ್ದಾರಿಯಲ್ಲಿ ರಾಮನಗುಳಿ ಗ್ರಾಮ ಇದೆ. ಇಲ್ಲಿ ಮಂಗಳವಾರ ಸಂಜೆ ನಿರ್ಜನ ಪ್ರದೇಶದಲ್ಲಿ ಯಾರು ಕಾರು ನಿಲ್ಲಿಸಿ ಹೋದರು ಎಂಬುದು ಬೆಳಕಿಗೆ ಬರಬೇಕಿದೆ.‌ ಕಾರ್ ಗೆ ಹಾಕಿದ ನಂಬರ್ ಪ್ಲೇಟ್ ಫೇಕ್ ಎಂದು ಗೊತ್ತಾಗಿದೆ. ಅಂಕೋಲಾ ದಿಂದ ಬಂದ ಪೊಲೀಸರು ಕಾರ್ ನ್ನು ವಶಕ್ಕೆ ಪಡೆದು ಅದರಲ್ಲಿನ ಒಂದು…

Read More

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ..! 15 ಮಂದಿ ಸಾವು ಶಂಕೆ, ಹಲವು ಮಂದಿಗೆ ಗಂಭೀರ ಗಾಯ

 ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆ ವೇಳೆ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನಕ್ಕೆ ಭಕ್ತಸಾಗರವೇ ಹರಿದಿದೆ. ಮಂಗಳವಾರ ಮಧ್ಯರಾತ್ರಿಯ ಬಳಿಕ ಜನದಟ್ಟಣೆ, ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಹಲವರು ಗಾಯಗೊಂಡು, 15 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಇದುವರೆಗೆ ಸುಮಾರು 15 ಕೋಟಿ ಮಂದಿ ಸಂಗಮಕ್ಷೇತ್ರದಲ್ಲಿ ಪವಿತ್ರಸ್ನಾನ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.ಎರಡನೇ ಅಮೃತಸ್ನಾನದ ದಿನವಾದ ಬುಧವಾರ ಲಕ್ಷಾಂತರ ಭಕ್ತರು…

Read More

 SHOCKING :ಕರ್ನಾಟಕದಲ್ಲಿ 3ನೇ ತರಗತಿಯ ಶೇ. 7.1 ರಷ್ಟು ವಿದ್ಯಾರ್ಥಿಗಳಿಗೆ ಒಂದೇ ಒಂದು ಅಕ್ಷರ ಓದಲು ಬರುವುದಿಲ್ಲ : ವರದಿ

ಬೆಂಗಳೂರು: ಮಂಗಳವಾರ ಬಿಡುಗಡೆಯಾದ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ASER) 2024, ಗ್ರಾಮೀಣ ಕರ್ನಾಟಕದ (ಸರ್ಕಾರಿ ಮತ್ತು ಖಾಸಗಿ ಎರಡೂ) ಶಾಲೆಗಳಲ್ಲಿ ಓದುತ್ತಿರುವ 3 ನೇ ತರಗತಿಯ ಶೇ. 7.1 ರಷ್ಟು ವಿದ್ಯಾರ್ಥಿಗಳು ಒಂದೇ ಒಂದು ಅಕ್ಷರವನ್ನು ಓದಲು ಸಾಧ್ಯವಿಲ್ಲ ಎಂದು ಬಹಿರಂಗಪಡಿಸಿದೆ. ವರದಿಯಲ್ಲಿ ದಾಖಲಾಗಿರುವಂತೆ, 3 ನೇ ತರಗತಿಯ ಶೇ. 19.3 ರಷ್ಟು ವಿದ್ಯಾರ್ಥಿಗಳು ಅಕ್ಷರಗಳನ್ನು ಓದಬಲ್ಲರು, ಆದರೆ ಪದಗಳು ಅಥವಾ ವಾಕ್ಯಗಳನ್ನು ಓದಲು ಸಾಧ್ಯವಿಲ್ಲ ಮತ್ತು ಶೇ. 36.2 ರಷ್ಟು ವಿದ್ಯಾರ್ಥಿಗಳು ಪದಗಳನ್ನು ಓದಬಲ್ಲರು,…

Read More

RBI ನಿಂದ 350, 5 ರೂಪಾಯಿ ನೋಟುಗಳ ಬಿಡುಗಡೆ..? ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು.!

ನವದೆಹಲಿ : ನೋಟು ರದ್ದತಿಯ ನಂತರ ಆರ್‌ಬಿಐ ಹೊಸ ನೋಟುಗಳನ್ನು ಚಲಾವಣೆಗೆ ತಂದಿತು. ನಂತರ 2000 ರೂ. ನೋಟು ರದ್ದತಿಯನ್ನು ಘೋಷಿಸಲಾಯಿತು. ಅದಾದ ನಂತರ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ. ಈಗ ಮಾರುಕಟ್ಟೆಗೆ ಹೊಸ 350 ಮತ್ತು 5 ರೂ. ನೋಟುಗಳ ಆಗಮನದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಮಾರುಕಟ್ಟೆಯಲ್ಲಿ 350 ಮತ್ತು 5 ರೂಪಾಯಿ ನೋಟುಗಳು ಬರುವ ಬಗ್ಗೆ ವದಂತಿ ಹರಡುತ್ತಿದೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿವೆ. ಈ ಸಂದೇಶದ ಜೊತೆಗೆ,…

Read More

ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಲು ವಾಟ್ಸ್ಆ್ಯಪ್, ಎಲೆಕ್ಟ್ರಾನಿಕ್ ಸಾಧನ ಬಳಸುವಂತಿಲ್ಲ- ಸುಪ್ರೀಂ

ನವದೆಹಲಿ: ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಲು ವಾಟ್ಸ್ಆ್ಯಪ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನ ಬಳಸುವಂತಿಲ್ಲ. ಈ ರೀತಿ ನೀಡಿದ ನೋಟಿಸ್ ಸೇವೆಯನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ ಈ ಆದೇಶ ಹೊರಡಿಸಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1973ರ ಸಿಆರ್‌ಪಿಸಿ ಸೆಕ್ಷನ್ 41-ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ…

Read More