
ಗೆಳೆಯರಿಬ್ಬರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ..!!
ಬೈಂದೂರು: ಮದ್ಯವ್ಯಸನಿಗಳಾದ ಗೆಳೆಯರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಕೇರಳ ಮೂಲದ ಬಿನೋ ಫಿಲಿಪ್ (45) ಕೊಲೆಯಾದ ಕಾರ್ಮಿಕ. ಉದಯ್ ಕೊಲೆ ಆರೋಪಿ. ತೂದಳ್ಳಿ ದೇವರಗದ್ದೆ ನಿವಾಸಿ ಥೋಮಸ್ ಎನ್ನುವವರ ತೋಟದಲ್ಲಿ ಕೇರಳ ಮೂಲದ ಬಿನೋ ಫಿಲಿಪ್ ಹಾಗೂ ಉದಯ್ ಕಳೆದ ಎರಡು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಮದ್ಯಪಾನ ಮಾಡಿದಾಗ ಆಗ್ಗಾಗೆ ಗಲಾಟೆ ಮಾಡಿಕೊಳ್ಳುತ್ತಿದ್ದರೆನ್ನಲಾಗಿದೆ. ಶನಿವಾರ ತಡರಾತ್ರಿಯೂ ಇಬ್ಬರ ನಡುವೆ…