admin

ಕಟ್ಟಡ ಧ್ವಂಸ ಆರೋಪ : ಶಾಸಕ ಅಶೋಕ್‌ ಕುಮಾರ್‌ ರೈ ವಿರುದ್ಧ ದೂರು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಡೆತನದ ಜಮೀನಿನಲ್ಲಿ ಬಾಡಿಗೆಗಿದ್ದ ಕುಟುಂಬವೊಂದರ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಧ್ವಂಸಗೊಳಿಸಲಾಗಿದೆ ಎಂದು ಬಾಡಿಗೆದಾರರ ಪೈಕಿ ಓರ್ವರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ ಹಾಗೂ ಶಾಸಕ ಅಶೋಕ್‌ ಕುಮಾರ್‌ ರೈ ವಿರುದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಉಜಿರೆ ನಿವಾಸಿ ದಿ| ಜಯಶ್ರೀ ಹೊಳ್ಳ ಅವರ ಪುತ್ರ ವಿಜಯ ರಾಘವೇಂದ್ರ ದೂರು ನೀಡಿದವರು. ಇವರ ಅಜ್ಜ ವಿಷ್ಣಯ್ಯ ಹೊಳ್ಳ ಎಂಬವರಿಗೆ ದೇಗುಲದಿಂದ ಬಾಡಿಗೆಗೆ ನೀಡಿದ ಸ್ಥಳದಲ್ಲಿ ವಿಷ್ಣಯ್ಯ…

Read More

ನಾಳೆ (ಫೆ. 5) ಕ್ಕೆ ಪ್ರಧಾನಿ ಮೋದಿ ಮಹಾ ಕುಂಭ ಮೇಳಕ್ಕೆ ಭೇಟಿ

ಪ್ರಯಾಗ್‌ರಾಜ್‌ : ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5ರಂದು ಭೇಟಿ ನೀಡಲಿದ್ದಾರೆ. ಮಾಘ ಮಾಸದ ಅಷ್ಟಮಿಯಂದು ಅವರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಸ್ನಾನದ ನಂತರ ಸಂಗಮದಲ್ಲಿ ಗಂಗೆಯನ್ನು ಪೂಜಿಸಲಿದ್ದಾರೆ. ಪ್ರಧಾನಿ ನಾಳೆ ಬೆಳಗ್ಗೆ 10 ಗಂಟೆಗೆ ಮಹಾಕುಂಭವನ್ನು ತಲುಪಲಿದ್ದಾರೆ. ಅವರು ಅರೈಲ್ ಘಾಟ್ ನಿಂದ ದೋಣಿ ಮೂಲಕ ಸಂಗಮ್ ಗೆ ಹೋಗಲಿದ್ದಾರೆ. ಈ ಸಮಯದಲ್ಲಿ, ನಾವು ಸ್ನಾನ ಮಾಡಿ ಗಂಗೆಯನ್ನು ಪೂಜಿಸಿ ನಂತರ ಹಿಂತಿರುಗುತ್ತಾರೆ.ಮಹಾ…

Read More

ಈ ಬಾರಿ SSLC ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಇಲ್ಲ..!

ಬೆಂಗಳೂರು: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಕಡ್ಡಾಯವಾಗಿ ನಡೆಯಲಿದೆ. ಆದ್ರೆ ವೆಬ್‌ಕಾಸ್ಟಿಂಗ್ ಹಿನ್ನೆೆಲೆಯಲ್ಲಿ ಫಲಿತಾಂಶ ಕುಸಿತ ಎಂದು ನೀಡಲಾಗಿದ್ದ ಶೇ. 10 ಕೃಪಾಂಕ ಈ ಬಾರಿ ಇರುವುದಿಲ್ಲ ಸ್ಪಷ್ಟಪಡಿಸಿದ್ದಾರೆ. ಕಳೆದ ಬಾರಿ ಫಲಿತಾಂಶದಲ್ಲಿ ಭಾರಿ ಇಳಿಕೆ ದಾಖಲಾಗಿದ್ದ ಕಾರಣ ಶೇ. 10 ಕೃಪಾಂಕ…

Read More

ಮರಗೆಣಸಿನ ಆರೋಗ್ಯಕಾರಿ ಪ್ರಯೋಜನಗಳು

ಸಾಮಾನ್ಯವಾಗಿ ಮಾರ್ಕೆಟ್ ನಲ್ಲಿ ಮರಗೆಣಸು ಸಿಗುವುದು ತುಂಬಾನೇ ವಿರಳ. ಆದರೆ ಒಂದು ವೇಳೆ ಈ ಮರಗೆಣಸನ್ನು ಖರೀದಿಸದೆ ಬಿಡಬೇಡಿ. ಯಾಕೆಂದರೆ ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಗೊತ್ತಾದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ದೇಹದ ತೂಕ ಇಳಿಸುವಲ್ಲಿಂದ ಹಿಡಿದು, ಅಜೀರ್ಣ ಮಲಬದ್ಧತೆಯಂತಹ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ನಮಗೆಲ್ಲಾ ಗೊತ್ತೇ ಇರುವ ಹಾಗೆ ಹಿಂದಿನ, ಕಾಲದಲ್ಲಿ ಜನರು, ಕಾಡಿನಲ್ಲಿ ಸಿಗುವ ಕೆಲೆವೊಂದು ಬಗೆಯ ಗಡ್ಡೆಗೆಣಸುಗಳನ್ನು, ತಿಂದು ಜೀವನ ಸಾಗಿಸುತ್ತಿದ್ದರು. ಯಾವುದೇ ರೀತಿಯ ಕಾಯಿಲೆಗಳೂ ಕೂಡ ಇವರು ಬಗ್ಗುತ್ತಿರಲಿಲ್ಲ. ಸರಿಯಾಗಿ ತಿಂದು-ಉಂಡು ಅರೋಗ್ಯಕಾರಿ ಜೀವನ…

Read More

ಪುತ್ತೂರು: ಬೀಡಿ ಮಾಲಕನ ಮನೆಯಲ್ಲಿ ದರೋಡೆ ಪ್ರಕರಣ- ಮತ್ತೋರ್ವ ಆರೋಪಿ ಅರೆಸ್ಟ್

ಪುತ್ತೂರು: ಬೀಡಿ ಮಾಲಕನ ಮನೆಯಲ್ಲಿ ನಡೆದ ನಕಲಿ ಇಡಿ ದಾಳಿ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಸಚಿನ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮುಂಬೈಯಿಂದ‌ ಪೊಲೀಸರು ಕರೆತಂದಿದ್ದಾರೆ. ಆದರೆ ಪೋಲೀಸ್ ವಶಕ್ಕೆ ಪಡೆದ ತಕ್ಷಣವೇ ಆರೋಪಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆರೋಪಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಧಿತ ಆರೋಪಿ ಅಪಸ್ಮಾರ ಮತ್ತು ತಲೆನೋವು ಸಮಸ್ಯೆಯಿಂದ ಬಳಲುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ…

Read More

ಉಪ್ಪಿನಂಗಡಿ: ನಾಳೆ ರಥಸಪ್ತಮಿಯ ಪ್ರಯುಕ್ತ ವಿಷೇಶವಾಗಿ ಪ್ರಸಾದ್ ಕುಲಾಲ್ ರವರಿಂದ 1008 ಸೂರ್ಯ ನಮಸ್ಕಾರ

ಉಪ್ಪಿನಂಗಡಿ: ರಥಸಪ್ತಮಿಯ ವಿಶೇಷ ದಿನದಂದು 1008 ಸೂರ್ಯ ನಮಸ್ಕಾರ ಪ್ರಸಾದ್ ಕುಲಾಲ್ ಸಿದ್ದಕಟ್ಟೆ ಇವರಿಂದ ನಾಳೆ (04-02-2025) ರಥಸಪ್ತಮಿ ವಿಶೇಷ ದಿನ ಉಪ್ಪಿನಂಗಡಿಯ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ 1008 ಸೂರ್ಯ ನಮಸ್ಕಾರಗಳನ್ನು ಮಾಡಲಿದ್ದಾರೆ. ಸತತ ನಾಲ್ಕು ವರ್ಷಗಳಿಂದ 1008 ಸೂರ್ಯ ನಮಸ್ಕಾರವನ್ನು ಮಾಡಿ ಸಾಧನೆಗಾಗಿ ಮಾಡಿರುತ್ತಾರೆ… ಯೋಗ ಶಿಕ್ಷಕರಾಗಿ ಮಕ್ಕಳಲ್ಲಿ ಪ್ರೇರಣೆಯನ್ನು ಮೂಡಿಸುತ್ತಾ ಮನಸ್ಸು ದೇಹ ಉಸಿರುಗಳನ್ನು ಉಲ್ಲಾಸವಾಗಿಡಲು ನಿತ್ಯ ಯೋಗ ಅಭ್ಯಾಸವನ್ನು ಮಾಡಿಸುತ್ತಿದ್ದಾರೆ. ಆನ್ಲೈನ್ ಮೂಲಕ ಮಕ್ಕಳಿಗೆ ಉಚಿತ ಯೋಗ ಶಿಕ್ಷಣವನ್ನು ಹೇಳಿಕೊಡುತ್ತಿದ್ದಾರೆ. ಆಸಕ್ತರು…

Read More

ಮಂಗಳೂರು: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ- ಆರೋಪಿಗಳು ಬಚ್ಚಿಟ್ಟಿದ್ದ ಪಿಸ್ತೂಲ್‌ ಪತ್ತೆ..!

ಉಳ್ಳಾಲ: ಕೋಟೆಕಾರು ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಶಿ ಥೇವರ್ ಬಚ್ಚಿಟ್ಟಿದ್ದ ಪಿಸ್ತೂಲನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಜ್ಜಿನಡ್ಕ ಬಳಿ ಶಶಿ ಥೇವರ್ ಪಿಸ್ತೂಲು ಬಚ್ಚಿಟ್ಟಿರುವ ವಿಚಾರವನ್ನು ಆರೋಪಿ ಮುರುಗನ್ ಡಿ ಥೇವರ್ ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಪಿಸ್ತೂಲನ್ನು ಶನಿವಾರ ಶೂಟೌಟ್‌ ನಡೆದ ಸ್ಥಳದಿಂದ 200 ಮೀಟರ್‌ ದೂರದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದರೋಡೆ ಸಂದರ್ಭ ಶಶಿ ಉಪಸ್ಥಿತನಿರದ ಕಾರಣ ಈ ಪಿಸ್ತೂಲನ್ನು ದರೋಡೆಗೆ ಬಳಸಿಲ್ಲ. ದರೋಡೆಕೋರರ ಬಂಧನದ ಬಳಿಕ ದರೋಡೆಗೆ ಸ್ಕೆಚ್‌ ರೂಪಿಸಿದ್ದ ಸ್ಥಳೀಯನ ಬಗ್ಗೆ…

Read More

ಮನೆ ಗೋಡೆಯಲ್ಲಿ ಡೆತ್ ನೋಟ್ ಬರೆದಿಟ್ಟು ಮಹಿಳೆ ನೇಣಿಗೆ ಶರಣು..!

ಕಾರ್ಕಳ: ಮಾನಸಿಕ ಖಿನ್ನತೆಯಿಂದ ಮಹಿಳೆಯೋರ್ವರು ಮನೆಯ ಗೋಡೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಇಂದು ಮುಂಜಾನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಪೊಸ್ರಾಲ್ ಎಂಬಲ್ಲಿ ನಡೆದಿದೆ. ಶಶಿಕಲಾ (36) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂಲತಃ ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿಯ ಇವರು, 2 ವರ್ಷಗಳ ಹಿಂದೆ ಇಲ್ಲಿ ಮನೆ ಖರೀದಿಸಿ 5 ವರ್ಷದ ಪುತ್ರಿ ಹಾಗೂ 11 ವರ್ಷದ ಪುತ್ರನೊಟ್ಟಿಗೆ ವಾಸಿಸುತ್ತಿದ್ದು, ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ…

Read More

ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿ ರಾಷ್ಟ್ರಪತಿ ಭವನದಲ್ಲಿ ಮದುವೆ-ವಧು-ವರರು ಯಾರು ಗೊತ್ತಾ?

ನವದೆಹಲಿ : ಭಾರತದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನವು ವಿವಾಹ  ಸಮಾರಂಭವೊಂದಕ್ಕೆ ಸಾಕ್ಷಿಯಾಗಲಿದೆ. ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ನೀಡಿದ್ದಾರೆ. ಇದು ಯಾವುದೇ ರಾಜಕಾರಣಿಗಳ ಮಕ್ಕಳದ್ದು, ಸೆಲೆಬ್ರಿಟಿಗಳದ್ದು ಅಲ್ಲ. ಹಾಗಾದರೆ ಆ ಮದುವೆ ಯಾರದ್ದು ಗೊತ್ತಾ ? ಇಲ್ಲಿದೆ ಪೂರ್ತಿ ಮಾಹಿತಿ. ದೇಶದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿ ರಾಷ್ಟ್ರಪತಿ ಭವನವು ಕಾರ್ಯನಿರ್ವಹಿಸುತ್ತದೆ. ಹೆಚ್ಚಾಗಿ ವಿದೇಶಿ ಗಣ್ಯರು ದೇಶಕ್ಕೆ ಅಧಿಕೃತ ಭೇಟಿಗಾಗಿ ಬಂದಾಗ ರಾಷ್ಟ್ರಪತಿ ಭವನದಲ್ಲಿ ಉಳಿಯುತ್ತಾರೆ. ಆದರೆ…

Read More

ಉಡುಪಿ: ಜುವೆಲ್ಲರ್ಸ್ ಅಂಗಡಿ ಮಾಲೀಕನಿಗೆ 89 ಲಕ್ಷ ರೂ.ವಂಚನೆ..! ಆರೋಪಿ ಅರೆಸ್ಟ್

ಉಡುಪಿ: ನಗರದ ಬಡಗುಪೇಟೆಯ ಜುವೆಲ್ಲರಿ ಅಂಗಡಿಯ ಮಾಲಕರಿಗೆ ಡಿಜಿಟಲ್ ಎರೆಸ್ಟ್ ಹೆಸರಿನಲ್ಲಿ 89ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಓರ್ವನನ್ನು ಜಿಲ್ಲಾ ಸೆನ್ ಪೊಲೀಸರು ಬಂಧಿಸಿ 7 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಕನ್ನಾರ್‌ ಶಂಕರ್ ಆಚಾರ್ಯರ ಪುತ್ರ ಸಂತೋಷ ಕುಮಾರ್‌ (45)ರಿಗೆ ಕಳೆದ‌ ಸೆ. 11 ರಂದು ಯಾರೋ ಅಪರಿಚಿತರು ಕರೆಮಾಡಿ Telecom Regulatory Authority of India ದಿಂದ ಕರೆ ಮಾಡುತ್ತಿದ್ದು, ಈ ಮೊಬೈಲ್‌ ನಂಬ್ರವು ನಿಮ್ಮ ಹೆಸರಿನಲ್ಲಿ ಇದೆ ಈ ನಂಬ್ರದಲ್ಲಿ ಇಲ್ಲೀಗಲ್‌ ಅಡ್ವಟೈಸ್‌ಮೆಂಟ್‌ ಹಾಗೂ…

Read More