admin

ಅಯೋಧ್ಯೆ ರಾಮಮಂದಿರಕ್ಕೆ ಮೊದಲ ಇಟ್ಟಿಗೆ ಇರಿಸಿದ ವಿಎಚ್‌ಪಿ ನಾಯಕ ಕಾಮೇಶ್ವರ್ ಚೌಪಾಲ್ ನಿಧನ

ಅಯೋಧ್ಯೆಯಲ್ಲಿ ರಾಮ ಮಂದಿರದ ಮೊದಲ ಇಟ್ಟಿಗೆಯನ್ನು ಹಾಕಿದ ಕಾಮೇಶ್ವರ ಚೌಪಾಲ್ (68) ನಿಧನರಾದರು. ಅವರು ಬಿಹಾರ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ವಿಶ್ವ ಹಿಂದೂ ಪರಿಷತ್ ನಾಯಕ 68ವರ್ಷ ದ ಕಾಮೇಶ್ವರ್ ಚೌಪಾಲ್ ಶುಕ್ರವಾರ ನಿಧನರಾಗಿದ್ದಾರೆ. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಚೌಪಾಲ್ ಅವರನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕಾಮೇಶ್ವರ ಚೌಪಾಲ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು,…

Read More

ಗುರುಪುರ: ಲಾರಿ ಡಿಕ್ಕಿ, ಬಸ್ ತಂಗುದಾಣ ಹಾಗೂ ಕಚೇರಿ ಸಂಪೂರ್ಣ ಜಖಂ

ಗುರುಪುರ: ಮಣ್ಣು ಸಾಗಿಸುತ್ತಿದ್ದ ಲಾರಿಯೊಂದು ಬಸ್ ತಂಗುದಾಣ ಮತ್ತು ಶ್ರೀ ಶನೀಶ್ವರ ಪೂಜಾ ಸಮಿತಿಯ ಕಚೇರಿಗೆ ಡಿಕ್ಕಿ ಹೊಡೆದಿದ್ದು, ಬಸ್ ತಂಗುದಾಣ ಮತ್ತು ಕಚೇರಿ ಸಂಪೂರ್ಣ ಜಖಂಗೊಂಡ ಘಟನೆ ಗುರುಪುರ ಜಂಕ್ಷನ್ ನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು,ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನ ಕಡೆಗೆ ಹೋಗುತಿದ್ದ ಲಾರಿ ಕೇರಳದತ್ತ ಮಣ್ಣು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.ಘಟನೆಯಲ್ಲಿ ಬಸ್ ತಂಗುದಾಣ ಸಂಪೂರ್ಣ ನುಜ್ಜುಗುಜ್ಜಾಗಿದ್ದು , ಅದೃಷ್ಟವಶಾತ್ ದುರ್ಘಟನೆ ಸಂಭವಿಸಿದ ವೇಳೆ ಬಸ್ ತಂಗುದಾಣದಲ್ಲಿ ಜನರಿರಲಿಲ್ಲ. ಅಪಘಾತ ನಡೆದ ಬಳಿಕ…

Read More

ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ :ಬಹುಮತದ ಗಡಿ ದಾಟಿದ ಬಿಜೆಪಿ

ನವದೆಹಲಿ:ಆರಂಭಿಕ ಪ್ರವೃತ್ತಿಗಳ ಪ್ರಕಾರ, ದೆಹಲಿಯ ಒಟ್ಟು 70 ಸ್ಥಾನಗಳಲ್ಲಿ 36 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಎಎಪಿ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ 26 ವರ್ಷಗಳ ನಂತರ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚಿಸುತ್ತದೆಯೇ ಎಂಬುದನ್ನು ಫಲಿತಾಂಶಗಳು ನಿರ್ಧರಿಸುತ್ತವೆ. ಹಲವಾರು ಚುನಾವಣೋತ್ತರ ಸಮೀಕ್ಷೆಗಳು ದೆಹಲಿಯಲ್ಲಿ 2 ರಿಂದ ಆಡಳಿತ ನಡೆಸುತ್ತಿರುವ ಎಎಪಿಗಿಂತ ಬಿಜೆಪಿಗೆ ಮೇಲುಗೈ ನೀಡಿವೆ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಸತತ…

Read More

ಕುಂಭಮೇಳದಲ್ಲಿ ಸನಾತನ ಧರ್ಮ ಸ್ವೀಕರಿಸಿದ 200 ಮಂದಿ ವಿದೇಶಿಗರು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ ಒಂದೇ ದಿನ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ 61 ವಿದೇಶಿಯರು ಸನಾತನ ಧರ್ಮವನ್ನು ಸ್ವೀಕರಿಸಿದರು. ಕುಂಭ ನಗರದ ಸೆಕ್ಟರ್ 17ರಲ್ಲಿರುವ ಶಕ್ತಿಧಾಮ ಆಶ್ರಮದಲ್ಲಿ ವೇದ ಮಂತ್ರಗಳ ಪಠಣದ ನಡುವೆ ಜಗದ್ಗುರು ಸಾಯಿ ಮಾ ಲಕ್ಷ್ಮಿ ದೇವಿ ಅವರಿಂದ 61 ವಿದೇಶಿಯರೂ ಸನಾತನ ಧರ್ಮ ಸ್ವೀಕರಿಸಿದರು. ಸಾಯಿ ಮಾ ಲಕ್ಷ್ಮಿ ದೇವಿಯ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ, ಶಕ್ತಿಧಾಮದ ಶಿಬಿರದಲ್ಲಿ ನಡೆದ ಈ ಪವಿತ್ರ ಮಹಾಕುಂಭ ಮೇಳದಲ್ಲಿ 200ಕ್ಕೂ ಹೆಚ್ಚು ವಿದೇಶಿಯರು…

Read More

ಮಂಗಳೂರು: ಯಕ್ಷಗಾನದ ಸ್ತ್ರೀವೇಷಧಾರಿ ಯುವಕ ಅರೆಸ್ಟ್..!!

ಮಂಗಳೂರು: ಅರ್ಚಕರೊಬ್ಬರನ್ನು ಎಫ್‌ಬಿಯಲ್ಲಿ ಫ್ರೆಂಡ್ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಪರಸ್ಪರ ಶೇರ್ ಮಾಡಿಕೊಂಡ ಫೋಟೋ, ವಿಡಿಯೋವನ್ನೇ ಮುಂದಿಟ್ಟುಕೊಂಡು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ ಆರೋಪದಲ್ಲಿ ಮಂಗಳೂರಿನ ಯಕ್ಷಗಾನ ಕಲಾವಿದನನ್ನು ಕಾಸರಗೋಡಿನ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಕೊಳಂಬೆ ನಿವಾಸಿ ಅಶ್ವಥ್ ಆಚಾರ್ಯ (33) ಬಂಧಿತ ವ್ಯಕ್ತಿ. ಅಶ್ವತ್ಥ್ ಆಚಾರ್ಯ ಫೇಸ್ ಬುಕ್‌ನಲ್ಲಿ ಕಾಸರಗೋಡು ಮೂಲದ ಅರ್ಚಕರೊಬ್ಬರೊಂದಿಗೆ ತಾನು ಯಕ್ಷಗಾನ ಕಲಾವಿದ ಎಂದು ಪರಿಚಯಿಸಿಕೊಂಡು ಫ್ರೆಂಡ್ ಆಗಿದ್ದ. ಬಳಿಕ ಇಬ್ಬರೂ ಆನ್‌ಲೈನ್‌ನಲ್ಲಿ ಸಂಪರ್ಕದಲ್ಲಿದ್ದು, ಲೈಂಗಿಕವಾಗಿ ಆಕರ್ಷಿಸಿ ಸೆಕ್ಸ್ ಸಂಬಂಧಿಸಿ…

Read More

ಮಂಗಳೂರು: ಬಾಲಕಿಗೆ ಸ್ನ್ಯಾಪ್‌ ಚಾಟ್‌ನಲ್ಲಿ ಅಶ್ಲೀಲ ವೀಡಿಯೋ ಕಳಿಸಿ ಬೆದರಿಕೆ- ಪ್ರಕರಣ ದಾಖಲು

ಮಂಗಳೂರು: ಸ್ನ್ಯಾಪ್‌ಚಾಟ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಅಶ್ಲೀಲ ವೀಡಿಯೋ ಫೈಲ್‌ ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಬಾಲಕಿಯ ದೂರಿನ ಮೇರೆಗೆ ಬೆದರಿಕೆ ಹಾಕಿದವನ ವಿರುದ್ಧ ಮಂಗಳೂರಿನ ಸೆನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಸ್ನ್ಯಾಪ್‌ಚಾಟ್‌ ಖಾತೆಗೆ ಓರ್ವ ವ್ಯಕ್ತಿ ಆತನ ಸ್ನ್ಯಾಪ್‌ಚಾಟ್‌ ಖಾತೆಯಿಂದ ಅಶ್ಲೀಲತೆಯ ವೀಡಿಯೋ ಕಾಲ್‌ನ ಸ್ಕ್ರೀನ್‌ ರೆಕಾರ್ಡ್‌ ಮಾಡಿರುವ ವೀಡಿಯೋ ಫೈಲ್‌ ಅನ್ನು ಕಳುಹಿಸಿ ಬೆದರಿಕೆ ಹಾಕಿದ್ದಾನೆ ಎಂದು ಅಪ್ರಾಪ್ತ ವಯಸ್ಸಿನ ಬಾಲಕಿ ನ್ಯಾಷನಲ್‌ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌ಗೆ (ಎನ್‌ಸಿಸಿಆರ್‌ಪಿ) ದೂರು ನೀಡಿದ್ದಳು.ಅದರಂತೆ ಪೊಲೀಸರು…

Read More

ವೀರೇಂದ್ರ ಹೆಗ್ಗಡೆ ಸಹೋದರನ 7.59 ಎಕರೆ ಭೂ ಮಂಜೂರಾತಿ ರದ್ದುಗೊಳಿಸಿದ ಕೋರ್ಟ್

ಮಂಗಳೂರು: ರಾಜ್ಯಸಭಾ ಸಂಸದ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ಹೆಗಡೆ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೀಡಿದ್ದ 7.59 ಎಕರೆ ಕೃಷಿ ಭೂಮಿಯ ಅನುದಾನವನ್ನು ರದ್ದುಗೊಳಿಸಿ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯ ಆದೇಶ ಹೊರಡಿಸಿದೆ. ಮೈಸೂರು ಭೂ ಮಂಜೂರಾತಿ ನಿಯಮಗಳು, 1969 ರ ಅಡಿಯಲ್ಲಿ 1972 ರಲ್ಲಿ ಹರ್ಷೇಂದ್ರ ಅವರಿಗೆ ಭೂಮಿಯನ್ನು ನೀಡಲಾಗಿತ್ತು. ಆಗ ಸಲ್ಲಿಸಿದ ಅಫಿಡವಿಟ್‌ನಲ್ಲಿ, ವಾರ್ಷಿಕ 1,200 ರೂ. ಆದಾಯವಿರುವ ‘ಭೂರಹಿತ’ ಎಂದು ಗುರುತಿಸಿಕೊಂಡಿದ್ದ ಹರ್ಷೇಂದ್ರ,…

Read More

ವೀಳ್ಯದೆಲೆಯ ಆರೋಗ್ಯ ಗುಣಗಳು

ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿರುವ ವೀಳ್ಯದೆಲೆ ಆರೋಗ್ಯವನ್ನೂ ವೃದ್ಧಿಸುತ್ತದೆ. ವೀಳ್ಯದೆಲೆಯ ಆರೋಗ್ಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ. ಗಾಯದ ನೋವು ನಿವಾರಣೆ: ವೀಳ್ಯದೆಲೆಯ ರಸವನ್ನು ಗಾಯವಾದಲ್ಲಿ ಹಚ್ಚಿದರೆ ಕೀವಾಗದಂತೆ ತಡೆಯುತ್ತದೆ. ಜತೆಗೆ ನೋವನ್ನೂ ಬೇಗನೆ ಕಡಿಮೆ ಮಾಡುತ್ತದೆ. ದೇಹದ ತೂಕ ಇಳಿಸಿಕೊಳ್ಳಲು ವೀಳ್ಯದೆಲೆ ಅತ್ಯತ್ತಮ ಪದಾರ್ಥವಾಗಿದೆ. ವೀಳ್ಯೆದಲೆಯ ಕಷಾಯವನ್ನು ಮಾಡಿ ಸೇವಿದರೆ ದೇಹದಲ್ಲಿನ ಕೊಬ್ಬು ನಿವಾರಣೆಯಾಗುತ್ತದೆ ಎನ್ನುತ್ತಾರೆ ಬಲ್ಲವರು. ಊಟದ ಬಳಿಕ ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ನಿವಾರಿಸಲು ವೀಳ್ಯದೆಲೆ ನೆರವಾಗುತ್ತದೆ. ಅದಕ್ಕೆ…

Read More

ಬೆಳ್ತಂಗಡಿ: ಕತ್ತಲಾದರೆ ಸಾಕು ಈ ಮನೆಯಲ್ಲಿ ಶುರುವಾಗುತ್ತಂತೆ ಪ್ರೇತದ ಕಾಟ..! ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ವಿಚಿತ್ರ ಮುಖ

ಬೆಳ್ತಂಗಡಿ: ಮಾಲಾಡಿ ಗ್ರಾಮ ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಕಾರಣ, ಅಲ್ಲಿರುವ ಮನೆ ಒಂದರಲ್ಲಿ ಪ್ರೇತದ ಕಾಟ ಜೋರಾಗಿದೆ. ಇದರಿಂದ ಇಡೀ ಊರು ಕಂಗಾಲಾಗಿದ್ದು, ಮನೆಯಲ್ಲಿ ನಡೆಯುವ ಆತ್ಮಗಳ ಕಾಟವನ್ನು ಕಣ್ಣಾರೆ ನೋಡಲು ಸುತ್ತಮುತ್ತಲಿನ ಊರಿನ ಜನ ಬರುತ್ತಿದ್ದಾರೆ. ರಾತ್ರಿ ಮನೆಯಲ್ಲಿನ ಪಾತ್ರೆ ಎಸೆದು ರಂಪಾಟ ಮಾಡುತ್ತಂತೆ ಪ್ರೇತ. ಪ್ರೇತಾತ್ಮದ ಕಾಟಕ್ಕೆ ಮಾಲಾಡಿಯ ಜನರು ಬೇಸತ್ತಿದ್ದಾರೆ. ನಮಗೆ ಮಾತ್ರ ತೊಂದರೆ ಆಗುತ್ತಿದೆ, ಯಾರೋ ನಮಗೆ ಮಾಟ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ ಮಾಲಾಡಿಯ ಉಮೇಶ್ ಶೆಟ್ಟಿ ಕುಟುಂಬ ಪ್ರೇತದ ಕಾಟ…

Read More

ಮಂಗಳೂರು : ವಾಟ್ಸ್‌ಆ್ಯಪ್‌ ಸಂದೇಶವನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡರು

ಮಂಗಳೂರು: ಸ್ಟಾಕ್‌ ಕಮ್ಯೂನಿಟಿಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಮೂಲಕ ಬಂದ ಸಂದೇಶವನ್ನು ನಂಬಿ 13,09,245 ರೂ. ಕಳೆದುಕೊಂಡಿರುವ ಕುರಿತಂತೆ ಉರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರಿಗೆ ವಿಐಪಿ3 ಗ್ಲೋಬಲ್‌ ಸೆಕ್ಯುರಿಟೀಸ್‌ ಅಫೀಶಿಯಲ್‌ ಸ್ಟಾಕ್‌ ಕಮ್ಯೂನಿಟಿ ಎನ್ನುವ ಹೆಸರಿನಲ್ಲಿ ಡಿ. 14ರಂದು ವಾಟ್ಸ್‌ಆ್ಯಪ್‌ ಸಂದೇಶ ಬಂದಿದ್ದು, ಅವರು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರ್ಪಡೆಯಾದರು. ಗುಂಪಿನಲ್ಲಿ ಬಂದ ಸಂದೇಶಗಳನ್ನು ನಂಬಿ ಐಪಿಒ ಸ್ಟಾಕ್‌ಗಳಿಗೆ ನೋಂದಾಯಿಸಿ ವಿವಿಧ ಐಪಿಒ ಮೊತ್ತದ ಸ್ಟಾಕ್‌ಗಳನ್ನು ಖರೀದಿಸಿ ಲಕ್ಷಾಂತರ ರೂ. ಮೊತ್ತವನ್ನು ಜಮೆ ಮಾಡಿದ್ದರು. ಅಂತಿಮವಾಗಿ ಇದು…

Read More