ಬಾಲಿವುಡ್ ನಟ ಸಂಜಯ್ ದತ್ ಗೆ 72 ಕೋಟಿ ರೂಪಾಯಿಯ ಆಸ್ತಿ ಉಯಿಲು ಮಾಡಿ ಹೋದ ಮಹಿಳಾ ಅಭಿಮಾನಿ..!
ಹೊಸದಿಲ್ಲಿ: ಬಾಲಿವುಡ್ ನಟ ಸಂಜಯ್ ದತ್ ಅವರ ಮಹಿಳಾ ಅಭಿಮಾನಿಯೊಬ್ಬರು ತಮ್ಮ ನಿಧನಕ್ಕೂ ಮುನ್ನ 72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಉಯಿಲು ಮಾಡಿ ಹೋಗಿರುವುದು ಅಚ್ಚರಿ ಮೂಡಿಸಿದೆ. ‘ರಾಕಿ’ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ಸಂಜಯ್ ದತ್ 135ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಆರಂಭದ ದಿನಗಳ ವರ್ಚಸ್ಸು ಹಲವಾರು ಹೃದಯಗಳನ್ನು ಗೆದ್ದಿತ್ತು. ಈ ಪೈಕಿ ಓರ್ವ ಮಹಿಳಾ ಅಭಿಮಾನಿಯು ತಾವು ನಿಧನರಾಗುವುದಕ್ಕೂ ಮುನ್ನ ಹಲವಾರು ಕೋಟಿ ಮೌಲ್ಯದ…

