admin

ಬಂಟ್ವಾಳ: ಅಡುಗೆ ಅನಿಲ ಸೋರಿಕೆ -ಸೊತ್ತುಗಳು ಸುಟ್ಟು ಭಸ್ಮ, ಓರ್ವ ಗಾಯ..!

ಬಂಟ್ವಾಳ: ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್‌ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ನಡೆದಿದೆ. ಸುಭಾಷ್ ನಗರ ನಿವಾಸಿ ಗಣೇಶ್ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂದಿಸಲು ಹೋದ ಗಣೇಶ್ ಅವರ ಕೈ ಗೆ ಗಾಯವಾಗಿದೆ. ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.ಮನೆಯ ಗ್ಯಾಸ ಗೀಸರ್ ಫ್ರಿಡ್ಜ್ ಸುಟ್ಟು ಭಸ್ಮವಾಗಿದೆ. ಸುಮಾರು 75 ಸಾವಿರ ರೂ .ನಷ್ಟ ಸಂಭವಿಸಿದೆ…

Read More

ಮಂಗಳೂರು : ಕಾಂಪೌಂಡ್ ಗೋಡೆಗೆ ಗುದ್ದಿದ ಕಾರು, ಇಬ್ಬರಿಗೆ ಗಾಯ

ಮಂಗಳೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಗುದ್ದಿದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಪಂಚಾಯತ್ ಕಚೇರಿ ಬಳಿಯ ಪಾಡ್ಯರ್ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕೊಂಪದವು ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಗುದ್ದಿದ್ದು, ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಮೂಡಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

Read More

ಬಂಟ್ವಾಳ: ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ..!

ಬಂಟ್ವಾಳ: ಸಮೀಪ ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸೋಮವಾರ ಮಧ್ಯರಾತ್ರಿ ಬಂಟ್ವಾಳ ತಾಲೂಕಿನ ಬಡಕಬೈಲ್ ಎಂಬಲ್ಲಿ ಸಂಭವಿಸಿದೆ. ಘಟನೆಯಿಂದಾಗಿ ಇಲ್ಲಿನ ನಿವಾಸಿ ಮುಹಮ್ಮದ್ ಯಾನೆ ಮೋನಾಕ ಎಂಬವರ ಗೋಣಿ ಚೀಲ ದಾಸ್ತಾನು ಇರಿಸುವ ಗೋದಾಮು ಸಂಪೂರ್ಣ ಸುಟ್ಟು ಹೋಗಿದ್ದು, ಪಕ್ಕದ ಹಮೀದ್ ಹಾಗೂ ಸರ್ಪುದ್ದೀನ್ ಎಂಬವರ ಮನೆಗೂ ಬೆಂಕಿ ತಗುಲಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ತಡರಾತ್ರಿ ಘಟನೆ ಈ ಘಟನೆ ನಡೆದಿದ್ದು ಬೆಂಕಿ‌ ನಂದಿಸಲು ಅಗ್ನಿ ಶಾಮಕದಳ ಹಾಗೂ ಸಾರ್ವಜನಿಕರು ಹರಸಾಹಸ ಪಡಬೇಕಾಯಿತು….

Read More

ಮಂಗಳೂರಿನ ವೆನ್ಲಾಕ್ ಗೆ ʼರೀಜನಲ್ ಆಸ್ಪತ್ರೆʼ ಸ್ಥಾನ-ಮಾನ ನೀಡುವಂತೆ ಸಿಎಂಗೆ ಸಂಸದ ಕ್ಯಾ. ಚೌಟ ಆಗ್ರಹ

ಮಂಗಳೂರು: ಮಡಿಕೇರಿಯಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರ ಬಾಲಕನ ಎದೆಗೂಡಿನ ಭಾಗಕ್ಕೆ ಚುಚ್ಚಿಕೊಂಡಿದ್ದ ತೆಂಗಿನ ದಿಂಡು ಹಾಗೂ ಲೋಹದ ಸರವನ್ನು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಪ್ರಾಣ ಉಳಿಸಿದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯವೈಖರಿಯನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶ್ಲಾಘಿಸಿದ್ದಾರೆ. ಅಸ್ಸಾಂ ಮೂಲದ 12 ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ಅವಘಡ ಸಂಭವಿಸಿ ಎದೆಗೂಡಿಗೆ ತೆಂಗಿನ ದಿಂಡು ಹಾಗೂ ಲೋಹದ ಸರ ಸೇರಿಕೊಂಡಿತ್ತು. ವೆನ್ಲಾಕ್‌ಗೆ ಕರೆತರಲಾಗಿದ್ದ ಬಾಲಕನಿಗೆ ಕಾರ್ಡಿಯೋಥೋರಾಸಿಕ್​ ಮತ್ತು…

Read More

ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ US F -35 ಮತ್ತು ರಷ್ಯಾದ S-U-57 ಯುದ್ದ ವಿಮಾನಗಳು ಭಾಗಿ

ಬೆಂಗಳೂರು:ಏರೋ ಇಂಡಿಯಾದ ಮೊದಲ ದಿನವಾದ ಸೋಮವಾರ ರಷ್ಯಾದ ಸು -57 ಮತ್ತು ಅಮೆರಿಕದ ಎಫ್ -35 ಲೈಟ್ನಿಂಗ್ 2 – ವಿಶ್ವದ ಅತ್ಯಂತ ಸುಧಾರಿತ ಐದನೇ ತಲೆಮಾರಿನ ಯುದ್ಧ ವಿಮಾನಗಳು ಬೆಂಗಳೂರಿನ ಆಕಾಶಕ್ಕೆ ಹಾರಿದವು. ಅವರ ಪ್ರದರ್ಶನಗಳು ಸ್ಪಷ್ಟ ಪ್ರದರ್ಶನಕಾರರಾಗಿದ್ದವು, ಸೂರ್ಯ ಕಿರಣ್ ತಂಡದ ಸಾಂಪ್ರದಾಯಿಕ ಚಮತ್ಕಾರಿಕ ಪ್ರದರ್ಶನವನ್ನು ಸಹ ಮೀರಿಸಿದರು. ಇದು ಏರೋ ಇಂಡಿಯಾದಲ್ಲಿ ಸು -57 ನ ಚೊಚ್ಚಲ ಪಂದ್ಯವಾಗಿತ್ತು. ಲಾಕ್ಹೀಡ್ ಮಾರ್ಟಿನ್ ತಯಾರಿಸಿದ ಎಫ್ -35 ಪ್ರಮುಖ ರಕ್ಷಣಾ ಪ್ರದರ್ಶನದ ಹಿಂದಿನ ಆವೃತ್ತಿಯಲ್ಲಿ…

Read More

ಬಂಟ್ವಾಳ: ಕಾರುಗಳ ನಡುವೆ ಅಪಘಾತ- ನಾಲ್ವರಿಗೆ ಗಾಯ..!

ಬಂಟ್ವಾಳ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ನಾಲ್ಕು ಜನರು ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕಾವಲ್ ಕಟ್ಟೆ ಸಮೀಪ ಈ ಅಪಘಾತ ಸಂಭವಿಸಿದ್ದು, ಎಡಭಾಗದಲ್ಲಿ ಬರುತ್ತಿದ್ದ ಕಾರು ಬಲಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಇನ್ನೋವಾ ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದ ಕಾರು ಪಲ್ಟಿ ಹೊಡೆದಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ಅಪಘಾತದಲ್ಲಿ ನಾಲ್ಕು ಜನರಿಗೆ ಸಣ್ಣ ಪುಟ್ಟ…

Read More

ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಬಾಲಾಲಯ ಪ್ರತಿಷ್ಠೆ

ಮಂಗಳೂರು : ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರದ ರಜತಮಹೋತ್ಸವದ ಪ್ರಯುಕ್ತ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಪುನಃಪ್ರತಿಷ್ಠೆ ಕಾರ್ಯಕ್ರಮಗಳಿಗೆ ಪೂರ್ವಭಾವಿಯಾಗಿ ಬಾಲಾಲಯ ಪ್ರತಿಷ್ಠೆಯು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪ್ರಾತಃಕಾಲ ಬ್ರಹ್ಮಶ್ರೀ ಕದ್ರಿ ಕೃಷ್ಣ ಅಡಿಗರ ನೇತೃತ್ವದಲ್ಲಿ ಗಣಪತಿ ಹೋಮ, ಮೃತ್ಯುಂಜಯ ಹೋಮ ನಡೆದು, ಸಾನಿಧ್ಯದಲ್ಲಿ ಸಂಕೋಚದ ವಿಧಿ ವಿಧಾನಗಳನ್ನು ನಡೆಸಿ ಶ್ರೀ ಕೃಷ್ಣದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಶ್ರೀ ವಿಶ್ವಕರ್ಮ ಪ್ರಾರ್ಥನೆ ಹಾಗೂ ವೀಳ್ಯ ಮುಹೂರ್ತ ನೆರವೇರಿಸಲಾಯಿತು. ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಸುಂದರ್…

Read More

ಏನಿದು ‘ಧರ್ಮ ಸಂಸದ್’.? ಸನಾತನ ಧರ್ಮದಿಂದ ‘ರಾಹುಲ್ ಗಾಂಧಿ’ ಹೊರಹಾಕಲು ‘ಧಾರ್ಮಿಕ ಸಂಸತ್ತು’ ಪ್ರಸ್ತಾವ

ನವದೆಹಲಿ : ರಾಹುಲ್ ಗಾಂಧಿ ಅವರನ್ನು ಸನಾತನ ಧರ್ಮದಿಂದ ಹೊರಹಾಕಲು ಶಂಕರಾಚಾರ್ಯರು ಪ್ರಸ್ತಾಪಿಸಿದ ನಿರ್ಣಯವನ್ನ ಧರ್ಮ ಸಂಸದ್ (ಧಾರ್ಮಿಕ ಸಂಸತ್ತು) ಸರ್ವಾನುಮತದಿಂದ ಅಂಗೀಕರಿಸಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯಕ್ಕೆ ಅವಮಾನ ಎಂದು ಭಾವಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ಬಂದಿದೆ. ರಾಹುಲ್ ಗಾಂಧಿ ಹೇಳಿಕೆಗೆ ಖಂಡನೆ.!ರಾಹುಲ್ ಗಾಂಧಿ ಅವರ ಹೇಳಿಕೆಯನ್ನ ಬಲವಾಗಿ ಖಂಡಿಸಿರುವ ಧರ್ಮ ಸಂಸದ್, ಅವರ ಹೇಳಿಕೆಗಳು ಸನಾತನ ಧರ್ಮಕ್ಕೆ ಅಗೌರವ ತೋರಿದೆ ಎಂದು ಹೇಳಿದೆ. ಧಾರ್ಮಿಕ ಮುಖಂಡರ ಸಭೆ ಅಂತಹ ನಡವಳಿಕೆ ಸ್ವೀಕಾರಾರ್ಹವಲ್ಲ ಮತ್ತು ನಂಬಿಕೆ ಮತ್ತು…

Read More

ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಚುನಾವಣೆ: 17 ಮಂದಿ ಅಭ್ಯರ್ಥಿಗಳು ಜಯಭೇರಿ

ಬಂಟ್ವಾಳ: ಇಲ್ಲಿನ ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆದಿದ್ದು, 17 ಮಂದಿ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಿಗೆ ಈ ಬಾರಿಯೂ ಸೋಲಾಗಿದೆ. ಸಾಮಾನ್ಯ ಕ್ಷೇತ್ರದಿಂದ ಅರುಣ್, ಅರುಣ್ ಕುಮಾರ್ ಕೆ., ಕಿರಣ್ ಕುಮಾರ್ ಎ., ಪ್ರೇಮನಾಥ ಬಂಟ್ವಾಳ, ಭೋಜ ಸಾಲಿಯಾನ್, ರಮೇಶ್ ಸಾಲಿಯಾನ್, ಸತೀಶ್,ರಮೇಶ್ ಸಾಲಿಯಾನ್, ಸುರೇಶ್ ಕುಲಾಲ್, ಸುರೇಶ್ ಕುಲಾಲ್ ಎನ್., ಹರೀಶ್, ಮಹಿಳಾ ಕ್ಷೇತ್ರದಿಂದ ಮಾಲತಿ ಮಚ್ಚೇಂದ್ರ, ವಿದ್ಯಾ,…

Read More

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ರಾಷ್ಟ್ರಪತಿ ಮುರ್ಮು 

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸ್ನಾನ ಮಾಡಿದ ನಂತರ ಅವರು ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರಯಾಗ್ ರಾಜ್ ಗೆ ಆಗಮಿಸಿದ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಮೊದಲು ರಾಷ್ಟ್ರಪತಿ ಮುರ್ಮು ಈ…

Read More