admin

ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ಆರೋಪಿ ಆಸ್ಪತ್ರೆಯಿಂದ ಜೈಲಿಗೆ ಶಿಫ್ಟ್

ಮಂಗಳೂರು: ರಾಜ್ಯಾದ್ಯಂತ ಹೊಸ ಸಂಚಲನ ಮೂಡಿಸಿದ್ದ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ಇದೀಗ ಆಸ್ಪತ್ರೆಯಿಂದ ನೇರವಾಗಿ ಜೈಲಿಗೆ ಶಿಫ್ಟ್ ಆಗಿದ್ದಾನೆ. ಆರೋಪಿ ಮುರುಗನ್ ಡಿ ಜೈಲಿಗೆ ಸೇರಿರುವ ವ್ಯಕ್ತಿ. ಪೊಲೀಸರ ವಶದಲ್ಲಿದ್ದ ವೇಳೆ ಸ್ಥಳ ಮಹಜರು ಮಾಡುತ್ತಿದ್ದಾಗ ಅಧಿಕಪ್ರಸಂಗ ಮಾಡಲು ಹೋಗಿ ಪೊಲೀಸರಿಂದ ಗುಂಡೇಟು ತಿಂದಿದ್ದ. ಕರ್ನಾಟಕ-ಕೇರಳ ಗಡಿ ಭಾಗದ ಅಜ್ಜಿನಡ್ಕ ಎಂಬಲ್ಲಿ ಈತ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ಸಂದರ್ಭ ಉಳ್ಳಾಲ ಠಾಣಾಧಿಕಾರಿ ಆತನ ಕಾಲಿಗೆ ಗುಂಡು ಹಾರಿಸಿದ್ದರು. ನಂತರ ಆಸ್ಪತ್ರೆಗೆ ದಾಖಲಾಗಿ…

Read More

ಮಂಗಳೂರು : ಮೂರು ಅಡಿಕೆ ಸುಪಾರಿ ಕಂಪನಿ ಮಾಲೀಕರ ಕಚೇರಿ, ಮನೆಗಳಿಗೆ ಐಟಿ ದಾಳಿ – ಕೋಟ್ಯಂತರ ಮೌಲ್ಯದ ಚಿನ್ನ, ನಗದು ಪತ್ತೆ

ಮಂಗಳೂರು: ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ಮೂರು ಅಡಿಕೆ ಸುಪಾರಿ ಕಂಪನಿಗಳ ಮೇಲೆ ಐಟಿ ದಾಳಿ ನಡೆದಿದ್ದು, ಕೋಟ್ಯಂತರ ಮೌಲ್ಯದ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿದೆ. ನಗರದ ಕಾರ್‌ಸ್ಟ್ರೀಟ್ ಬಳಿ ಕಾರ್ಯಾಚರಿಸುತ್ತಿರುವ ಸ್ವಸ್ತಿಕ್ ಟ್ರೇಡಿಂಗ್ ಕಂಪನಿ, ನರೇಶ್ ಆ್ಯಂಡ್ ಕಂಪನಿ, ಶಿವ್‌ ಪ್ರೇಮ್ ಟ್ರೇಡರ್ಸ್, ಪರಮೇಶ್ವರ್ ಟ್ರೇಡಿಂಗ್ ಕಂಪನಿಯ ಶಾಪ್‌ಗಳಿಗೆ ಐಟಿ ದಾಳಿ ನಡೆದಿದೆ. ಈ ಕಂಪನಿಯು ಅಡಿಕೆ ಸುಪಾರಿ, ಗುಟ್ಕಾ ಪಾನ್ ಮಸಾಲ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತರ ಭಾರತಕ್ಕೆ ಪೂರೈಕೆ ಮಾಡುತ್ತಿತ್ತು. ಬಿಹಾರ, ಉತ್ತರಪ್ರದೇಶ, ದೆಹಲಿ ಸೇರಿದಂತೆ…

Read More

ಬೆಳ್ತಂಗಡಿ : ಡಿವೈಡರ್‌ಗೆ ಬೈಕ್ ಢಿಕ್ಕಿ-ಸವಾರ ಸಾವು

ಬೆಳ್ತಂಗಡಿ : ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ಗುರುವಾಯನಕೆರೆ-ವೇಣೂರು ರಸ್ತೆಯ ದ್ವಾರದ ಸಮೀಪ ನಡೆದಿದೆ. ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಉಕ್ಕಿನಡ್ಕ ನಿವಾಸಿ ಪ್ರಶಾಂತ್‌ ಪೂಜಾರಿ (30) ಮೃತಪಟ್ಟವರು. ಗುರುವಾಯನಕೆರೆಯಿಂದ ವೇಣೂರು ಕಡೆಗೆ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ…

Read More

ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಇನ್ನಿಲ್ಲ !

ಕಾರವಾರ : ಹಾಲಕ್ಕಿ ಬುಡಕಟ್ಟು ಸಮುದಾಯದ ಹೋರಾಟಗಾರ್ತಿ, ಹಿರಿಯ ಜಾನಪದ ಹಾಡುಗಾರ್ತಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮ ಗೌಡ (88) ಇಂದು ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಬಡಿಗೇರಿ ಗ್ರಾಮದ ನಿವಾಸಿ ಆಗಿದ್ದರು. ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಅವರನ್ನು ಜಾನಪದ…

Read More

ಮಂಗಳೂರು: ವರ್ಷಾಂತ್ಯದೊಳಗೆ 43 ಸ್ವಯಂಚಾಲಿತ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌, 11 ಸ್ವಯಂಚಾಲಿತ ಟೆಸ್ಟಿಂಗ್‌ ಕೇಂದ್ರ ಸ್ಥಾಪನೆ

ಮಂಗಳೂರು: 43 ನೂತನ ಸ್ವಯಂಚಾಲಿತ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ಗಳು ಹಾಗೂ 11 ಸ್ವಯಂಚಾಲಿತ ಟೆಸ್ಟಿಂಗ್‌ ಕೇಂದ್ರಗಳನ್ನು ಈ ವರ್ಷದೊಳಗೆ ರಾಜ್ಯದ ವಿವಿಧೆಡೆ ಸ್ಥಾಪಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಮಂಗಳೂರು ಆರ್‌ಟಿಒ ಕಚೇರಿಗೆ ಭೇಟಿ ನೀಡಿದ ಅವರು ಮಾತನಾಡಿ, ಸ್ವಯಂಚಾಲಿತ ಡ್ರೈವಿಂಗ್‌ ಟೆಸ್ಟ್‌ ಟ್ರಾಕ್‌ಗಳನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆರಂಭಿಸುತ್ತಿರುವುದು ದೇಶದಲ್ಲೇ ಮೊದಲು. ಏಳೆಂಟು ಜಿಲ್ಲೆಗಳಲ್ಲಿ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಉಳಿದೆಡೆ ಕೆಲಸ ಪ್ರಗತಿಯಲ್ಲಿದೆ. ಇದು ಕಾರ್ಯಾರಂಭವಾದರೆ ಡ್ರೈವಿಂಗ್‌ ಲೈಸನ್ಸ್‌ ಪರೀಕ್ಷಾ ಪ್ರಕ್ರಿಯೆಯು ಸೆನ್ಸಾರ್‌ ಮೂಲಕ…

Read More

ತುಳುನಾಡಿನ ದೈವಗಳ ಮೊರೆ ಹೋದ ತಮಿಳು ನಟ ವಿಶಾಲ್-ಹರಿಪಾದೆ ಜಾರಂದಾಯ ನೇಮ ವೀಕ್ಷಣೆ

ಮುಲ್ಕಿ: ಇತ್ತೀಚೆಗೆ ತೆರೆಕಂಡ ತಮಿಳು ಚಿತ್ರ ಮದಗಜರಾಜ ಚಿತ್ರದ ಪ್ರಚಾರದ ವೇಳೆ ತಮ್ಮ ಅನಾರೋಗ್ಯದಿಂದ ಸುದ್ದಿಯಾಗಿದ್ದ ತಮಿಳಿನಿ ಖ್ಯಾತ ನಟ ವಿಶಾಲ್ ದೈವನ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದರು. ಮಂಗಳವಾರ ರಾತ್ರಿ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದರು ಅನಾರೋಗ್ಯದಿಂದ ವಿಶಾಲ್ ಸುದ್ದಿಯಾಗಿದ್ದರು, ಮದಗಜರಾಜ ಸಿನೆಮಾ ಪ್ರಚಾರದ ವೇಳೆ ನಟನ ಸ್ಥಿತಿ ನೋಡಿ ಅಭಿಮಾನಿಗಳು…

Read More

ಬಂಟ್ವಾಳ: ಡ್ರೈವಿಂಗ್ ವೇಳೆ ಮೂರ್ಛೆ ಹೋದ ಲಾರಿ ಚಾಲಕ- ಡಿವೈಡರ್ ಏರಿ ನಿಂತ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿರುವ ಘಟನೆ ಇಂದು ಬೆಳಗ್ಗೆ 7.45ರ ಸುಮಾರಿಗೆ ನಡೆದಿದೆ. ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು ಹೋಗಿದ್ದಾರೆ. ಡಿವೈಡರ್ ಮೇಲೆ ಅಳವಡಿಸಿದ್ದ ರಸ್ತೆ ಸೂಚನಾ ಫಲಕಕ್ಕೆ ಹಾನಿಯಾಗಿರುವುದು ಬಿಟ್ಟರೆ ಉಳಿದಂತೆ ಯಾವುದೇ ಹಾನಿ ಉಂಟಾಗಿಲ್ಲ.‌ ಲಾರಿಯು ಬೆಂಗಳೂರು ಭಾಗದಿಂದ ಮಂಗಳೂರು ಭಾಗಕ್ಕೆ ಚಲಿಸುತ್ತಿತ್ತು‌ ಎನ್ನಲಾಗಿದೆ.

Read More

ಪಡುಬಿದ್ರಿ: ಬಸ್ ಚಾಲಕನಿಗೆ ಹಠಾತ್ ಎದೆನೋವು- ಇಳಿಜಾರಿಗಿಳಿದ ಬಸ್..!

ಪಡುಬಿದ್ರಿ : ಖಾಸಗಿ ವೇಗದೂತ ಬಸ್ಸಿನ ಚಾಲಕನಿಗೆ ಅಪಸ್ಮಾರ ಸಂಭವಿಸಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಧರಗೆ ಚಲಿಸಿದ ಘಟನೆ ಬುಧವಾರ ಬೆಳಿಗ್ಗೆ ಎರ್ಮಾಳು ತೆಂಕ ಜಾಮಿಯಾ ಮಸೀದಿ ಬಳಿ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ವೇಗದೂತ ಬಸ್ಸಿನ ಚಾಲಕ ಶಂಭು ಮುಲ್ಕಿಯವರು ಎರ್ಮಳು ತೆಂಕ ಸಮೀಪಿಸುತ್ತಿದ್ದಂತೆ ಅವರಿಗೆ ಅಪಸ್ಮಾರ ಸಂಭವಿಸಿದೆ. ಇದೇ ಸಂದರ್ಭ 24 ಬಸ್ಸು ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಧರೆಗೆ ಚಲಿಸಿದೆ. ಈ ಸಂದರ್ಭ ಮೂರು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿ, ವಿದ್ಯುತ್…

Read More

ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ

ಅಯೋದ್ಯ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರದ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ನಿಧನರಾಗಿದ್ದಾರೆ. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಲಕ್ನೋದ ಪಿಜಿಐನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಫೆಬ್ರವರಿ 3 ರಂದು ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರನ್ನು ಗಂಭೀರ ಸ್ಥಿತಿಯಲ್ಲಿ ನರವಿಜ್ಞಾನ ವಾರ್ಡ್‌ನ HDU ಗೆ ದಾಖಲಿಸಲಾಯಿತು. ಆಚಾರ್ಯ ಸತ್ಯೇಂದ್ರ ದಾಸ್ ತಮ್ಮ 85 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

Read More

ಮಗುವಿನೊಂದಿಗೆ ತಾಯಿ ನಾಪತ್ತೆ..! ಪ್ರಕರಣ ದಾಖಲು

ಮಂಗಳೂರು: ಕುಂಜತ್ತಬೈಲು ಬಸವನಗರದ ಬಾಡಿಗೆ ಮನೆಯಲ್ಲಿದ್ದ ಮಹಾದೇವಿ (ಕರಿಯಮ್ಮ – 25) ಮತ್ತು ಮಗಳು ಕಾವೇರಿ (4) ಮನೆಯಿಂದ ನಾಪತ್ತೆಯಾಗಿದ್ದಾರೆ.ಮಹಾದೇವಿಗೆ 7 ವರ್ಷದ ಹಿಂದೆ ಬಾಗಲಕೋಟೆ ಜಿಲ್ಲೆಯ ಕೆರೂರಿನ ಹಾಲಿಗೇರಿ ನಿವಾಸಿ ವೆಂಕಪ್ಪನೊಂದಿಗೆ ವಿವಾಹವಾಗಿತ್ತು. 2 ವರ್ಷದ ಹಿಂದೆ ಪತಿ-ಪತ್ನಿ ಮಧ್ಯೆ ವಿರಸ ತಲೆದೋರಿದ ಕಾರಣ ಕುಳಾಯಿಯಲ್ಲಿರುವ ಅಣ್ಣನ ಮನೆಗೆ ಬಂದು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.ಫೆ. 2ರಂದು ರಾತ್ರಿ 10 ಗಂಟೆಗೆ ಅಲ್ಲಿ ಅತ್ತಿಗೆಯೊಂದಿಗೆ ಜಗಳವಾಗಿತ್ತು. ಬಳಿಕ ಆಕೆಯನ್ನು ಕುಂಜತ್ತಬೈಲಿನ ಬಸವ ನಗರದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಕರೆದುಕೊಂಡು…

Read More