admin

ಕಾರ್ಕಳ: ಚಾರ್ಜ್‌ಗಿಟ್ಟ ಮೊಬೈಲ್ ಫೋನ್ ಸ್ಪೋಟ..!!

ಚಾರ್ಜ್‌ಗಿಟ್ಟ ಮೊಬೈಲ್‌ ಸ್ಫೋಟಗೊಂಡು ಮನೆಗೆ ಬೆಂಕಿ ತಗುಲಿದ ಘಟನೆ ಇಂದು ಕಾರ್ಕಳದ ತೆಳ್ಳಾರು ರಸ್ತೆಯ‌ ಮರತ್ತಪ್ಪ ಶೆಟ್ಟಿ ಕಾಲೋನಿಯ ಕಿಶೋರ್‌ ಕುಮಾರ್‌ ಶೆಟ್ಟಿ ಎಂಬವರ ಮನೆಯಲ್ಲಿ ಸಂಭವಿಸಿದೆ. ಚಾರ್ಜ್‌ಗಿಟ್ಟ ಮೊಬೈಲ್‌ ಸ್ಫೋಟಗೊಂಡು ಮನೆಯ ಕೋಣೆಗಳಿಗೆಲ್ಲಾ ಬೆಂಕಿ ಆವರಿಸಿ ಸುಮಾರು 7ಲಕ್ಷ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಎಸಿ ಆನ್ ಇದ್ದ ಕಾರಣ ಬೆಂಕಿಯ ಕಿಡಿ ಮನೆ ತುಂಬೆಲ್ಲ…

Read More

ಬಂಟ್ವಾಳ: ಚರಂಡಿಗೆ ಬಿದ್ದ ಆಟೋ ರಿಕ್ಷಾ- ಚಾಲಕ ಸಾವು..!!

ಬಂಟ್ವಾಳ : ನಿಯಂತ್ರಣ ತಪ್ಪಿದ ಆಟೋರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಪ್ರಯಾಣಿಕರಾಗಿದ್ದ ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ಅಮ್ಮುಂಜೆಯಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ (37) ಮೃತಪಟ್ಟವರು. ಮಹಾಬಲ ಪೂಜಾರಿಯವರು ತಮ್ಮ ಸಂಬಂಧಿಗಳ ಮಕ್ಕಳನ್ನು ಮೂಡಬಿದರೆಯ ಮಿಜಾರು ಎಂಬಲ್ಲಿಗೆ ಗರಡಿ ಜಾತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ವಾಪಸ್ ಮನೆಗೆ ಬರುವ ವೇಳೆ ಚಾಲಕ ಮಹಾಬಲ ಪೂಜಾರಿಯವರ ನಿಯಂತ್ರಣ ಕಳೆದಕೊಂಡ ಆಟೋರಿಕ್ಷಾ…

Read More

ಬಂಟ್ವಾಳ : ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಮಣ್ಣು ಅಗೆತ – ದೂರು ದಾಖಲು

ಬಂಟ್ವಾಳ: ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮಣ್ಣು ಅಗೆದು ನಷ್ಟ ಮಾಡಿದ್ದಾರೆ ಎಂದು ಖಾಸಗಿ ಕಂಪೆನಿ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬಿಸಿರೋಡು- ಅಡ್ಡಹೊಳೆ ಚತುಷ್ಪಥ ರಸ್ತೆಯ ಕಾಮಗಾರಿ ನಡೆಸುತ್ತಿರುವ ಕೆ.ಎನ್.ಆರ್.ಸಿ.ಕಂಪೆನಿಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ. ಕಂಪೆನಿಯ ಅಧಿಕಾರಿಗಳಾದ ಪಿ.ಆರ್.ಒ.ನಂದಕುಮಾರ್ ಮತ್ತು ಸೈಟ್ ಇಂಜಿನಿಯರ್ ನಿತಿನ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಮೆಲ್ಕಾರ್ ಹೆದ್ದಾರಿ ಬದಿಯಲ್ಲಿ ಬಾಡಿಗೆಗೆ ಇದ್ದ ಹಳೆಯ ಸಂಚಾರ ಪೊಲೀಸ್…

Read More

ಮಂಗಳೂರು: ಫೆಬ್ರವರಿ 17ರಂದು ವಾಹನಗಳ ಸಂಚಾರ ಗಣತಿ

ಮಂಗಳೂರು,: ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರದ ಗಣತಿಯನ್ನು ನಡೆಸಲಾಗುತ್ತಿದೆ. 2025ನೇ ಸಾಲಿನಲ್ಲಿ ರಸ್ತೆ ಸಂಚಾರ ಗಣತಿಯನ್ನು ಫೆಬ್ರವರಿ 17ರಂದು ಬೆಳಗ್ಗೆ 6ರಿಂದ ಫೆಬ್ರವರಿ 24ರ ಬೆಳಗ್ಗೆ 6ರವರೆಗೆ ಸತತವಾಗಿ 7 ದಿನಗಳ ಕಾಲ ನಡೆಸಲಾಗುವುದು. ದ.ಕ. ಜಿಲ್ಲೆಯಲ್ಲಿ ಈ ಗಣತಿಗೆ ಸುಮಾರು 126 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ಕೆ ಮಾಡಲಾಗಿದೆ. ವಾಹನ ಸಂಚಾರದ ಬೆಳವಣಿಗೆಯ…

Read More

ಫೆ. 17ರಂದು ಉಡುಪಿಯಿಂದ ಪ್ರಯಾಗರಾಜ್‌ಗೆ ವಿಶೇಷ ರೈಲು ವ್ಯವಸ್ಥೆ…!!

ಉಡುಪಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಕರಾವಳಿ ಹಾಗೂ ಮಲೆನಾಡಿನ ಭಾಗದ ಭಕ್ತರಿಗೆ ಅನುಕೂಲವಾಗುವಂತೆ ಕೊಂಕಣ ರೈಲ್ವೆಯು ವಿವಿಧ ಪ್ರಾದೇಶಿಕ ರೈಲ್ವೆಯ ಸಹಯೋಗದೊಂದಿಗೆ ಫೆ.17ರಂದು ಉಡುಪಿಯಿಂದ ನೇರವಾಗಿ ಪ್ರಯಾಗ್‌ರಾಜ್‌ಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಮಹಾಕುಂಭ ಸ್ಪೆಷಲ್ ರೈಲು (ರೈಲು ನಂ.01192) ಫೆ.17ರ ಅಪರಾಹ್ನ 12:30ಕ್ಕೆ ಉಡುಪಿಯಿಂದ ಹೊರಟು ಕುಂದಾಪುರ, ಕಾರವಾರ, ಮಡಗಾಂವ್, ರತ್ನಗಿರಿ, ರೋಹಾ, ಕಲ್ಯಾಣ್, ನಾಸಿಕ್ ಮಾರ್ಗವಾಗಿ ತೆರಳಲಿದ್ದು, ಫೆ.19ರಂದು ಬೆಳಗ್ಗೆ 6:30ಕ್ಕೆ ಪ್ರಯಾಗ್‌ರಾಜ್ ಜಂಕ್ಷನ್ ತಲುಪಲಿದೆ. ಅಲ್ಲಿ ಜನರನ್ನು…

Read More

ಬೆಳ್ತಂಗಡಿ: ಮನನೊಂದು ವಿಚ್ಛೇದ ಮಹಿಳೆ ಜಲಜಾಕ್ಷಿ ಆತ್ಮಹತ್ಯೆ

ಬೆಳ್ತಂಗಡಿ: ಶಿಶಿಲ ಮೀನಗಂಡಿ ನಿವಾಸಿ ವಿಚ್ಛೇದ ಮಹಿಳೆ ಜಲಜಾಕ್ಷಿ(28)ಮನನೊಂದು ಫೆ. 14ರಂದು ಸ್ವಗೃಹದ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ತಾಯಿ, ತಮ್ಮ ಇದ್ದಾರೆ. ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮೂಡುಬಿದಿರೆ: ಬ್ರಹ್ಮಕಲಶಕ್ಕೆ ಶುಭಕೋರಿದ ಬ್ಯಾನರ್ ಹರಿದ ಕಿಡಿಗೇಡಿಗಳು ಅರೆಸ್ಟ್..!

ಮೂಡುಬಿದಿರೆ: ಲಾಡಿ ಶ್ರೀಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಅಳವಡಿಸಿರುವ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾನಿಗೈದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಹೊಟೇಲ್ ಕಾರ್ಮಿಕರಾದ ಮಹಮ್ಮದ್ ಕಾಮ್ದು ಝಮಾನ್ ಮತ್ತು ಜಾರ್ಖಾಂಡ್‌ನ ಮಹಮ್ಮದ್ ಸಿರಾಜ್ ಅನ್ಸಾರಿ ಬಂಧಿತ ಆರೋಪಿಗಳು. ಮೂಡುಬಿದಿರೆ ಪುರಸಭಾ ಸದಸ್ಯ ಇಟ್ಬಾಲ್ ಕರೀಂ ಲಾಡಿ ಶ್ರೀಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಹಾಕಿರುವ ಬ್ಯಾನರ್ ಅನ್ನು ಹರಿದು ಹಾನಿಗೊಳಿಸಲಾಗಿತ್ತು. ಈ ಬಗ್ಗೆ ಮೂಡುಬಿದಿರೆ ಪೊಲೀಸ್‌ ಠಾಣೆಗೆ ಕರೀಂ…

Read More

ಮಂಗಳೂರು: ನಿಲ್ಲಿಸಿದ್ದ ಟ್ಯಾಂಕರ್ ಚಲಿಸಿ ಸರಣಿ ಅಪಘಾತ…!

ಮಂಗಳೂರು: ನಗರದ ಸಮೀಪ ಸುರತ್ಕಲ್‌ ನಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಚಲಿಸಿದ ಪರಿಣಾಮ ಸರಣಿ ಅಪಘಾತ ಗುರುವಾರ ರಾತ್ರಿ ಹೊನ್ನಕಟ್ಟೆ ಜಂಕ್ಷನ್‌ ನಲ್ಲಿ ಸಂಭವಿಸಿದೆ. ಕುಳಾಯಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಟ್ಯಾಂಕರ್‌ ನಿಲ್ಲಿಸಿ ಅದರ ಚಾಲಕ ಹೊಟೇಲ್ ಗೆ ತೆರಳಿದ್ದರು. ಈ ವೇಳೆ ಲಾರಿ ಏಕಾಏಕಿ ಇಳಿಜಾರಾಗಿರುವ ರಸ್ತೆಯಾಗಿ ರಾಷ್ಟೀಯ ಹೆದ್ದಾರಿ 66ನ್ನು ದಾಟಿಕೊಂಡು ಹೊಟೇಲಗೆ ಢಿಕ್ಕಿ ಹೊಡೆದಿದೆ. ಅಲ್ಲದೆ, ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೊ ರಿಕ್ಷಾ ಹಾಗೂ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ ಎಂದು…

Read More

ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಕಾಲ್ತುಳಿತದಲ್ಲಿ ಮೃತಪಟ್ಟ ವ್ಯಕ್ತಿ ಜೀವಂತ ವಾಪಸ್

ಮಹಾಕುಂಭ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ ಎಂದು ಭಾವಿಸಲಾದ ಪ್ರಯಾಗ್ರಾಜ್ನ ವ್ಯಕ್ತಿ ಮಂಗಳವಾರ ಮನೆಗೆ ಮರಳಿದರು, ಆದರೆ ವ್ಯಕ್ತಿಯ ಸಾವಿನ 13 ನೇ ದಿನದಂದು ನಡೆದ ಅವರ ತೆಹ್ರ್ವಿ ಆಚರಣೆಗಾಗಿ ನೆರೆಹೊರೆಯವರು ಜಮಾಯಿಸಿದ್ದರು ಘಟನೆಗಳ ವಿಲಕ್ಷಣ ತಿರುವು ಸಮುದಾಯವನ್ನು ಆಘಾತಕ್ಕೀಡು ಮಾಡಿತು ಮತ್ತು ಶೀಘ್ರದಲ್ಲೇ ಅನಿರೀಕ್ಷಿತ ಆಚರಣೆಯಾಗಿ ಮಾರ್ಪಟ್ಟಿತು . ಪ್ರಯಾಗ್ರಾಜ್ನ ಝೀರೋ ರೋಡ್ ಪ್ರದೇಶದ ಚಾಹ್ಚಂದ್ ಗಲ್ಲಿ ನಿವಾಸಿ ಖುಂಟಿ ಗುರು ಜನವರಿ 29 ರಂದು ಕುಂಭಮೇಳದಲ್ಲಿ ಕಾಲ್ತುಳಿತದ ನಂತರ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಆದಾಗ್ಯೂ, ಕೆಲವು ಸಾಧುಗಳೊಂದಿಗೆ…

Read More

ಭಾರತೀಯ ಅಂಚೆ ಇಲಾಖೆಯಲ್ಲಿ 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ಅಂಚೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂಡಿಯಾ ಪೋಸ್ಟ್‌ನಲ್ಲಿ ಬೃಹತ್ ಉದ್ಯೋಗ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ 21,413 ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 10ನೇ ತರಗತಿ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸೈಕಲ್ ಅಥವಾ ಸ್ಕೂಟರ್ ಓಡಿಸುವ ಸಾಮರ್ಥ್ಯ ಹೊಂದಿರಬೇಕು. 10 ನೇ ತರಗತಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು…

Read More