ವಿಜಯನಗರದಲ್ಲಿ ನಡೆದ ಖೇಲೋ ಇಂಡಿಯಾ ವುಮೆನ್ಸ್ ವುಶು ಲೀಗ್ ನಲ್ಲಿ ಮಂಗಳೂರಿನ ಸಮೃದ್ಧಿ ಕುಲಾಲ್ ಗೆ ಕಂಚಿನ ಪದಕ
ಮಂಗಳೂರು : ವಿಜಯನಗರ ಜಿಲ್ಲೆ ಹೊಸಪೇಟೆ ವುಶು ಅಸೋಷಿಯೇಷನ್ ಇದರ ವತಿಯಿಂದ ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ವುಮೆನ್ಸ್ ವುಶು ಲೀಗ್ ನಲ್ಲಿ ಸುರತ್ಕಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಇದರ ವಿದ್ಯಾರ್ಥಿನಿ ಸಮೃದ್ಧಿ ಎಂ ಕುಲಾಲ್ ಅವರು ಕಂಚಿನ ಪದಕ ಪಡೆದಿದ್ದಾರೆ. ಇವರು ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಮರೋಳಿ ನಿವಾಸಿ ಮನೋಜ್ ಕುಮಾರ್ ಮತ್ತು ಗೀತಾ ಮನೋಜ್ ದಂಪತಿಯ ಸುಪುತ್ರಿ.

