admin

ಧರ್ಮಸ್ಥಳ ಕೇಸ್ : ಬಂಗ್ಲೆಗುಡ್ಡದಲ್ಲಿ ಮಹಜರಿಗೆ SITಗೆ ಅರಣ್ಯ ಇಲಾಖೆ ಒಪ್ಪಿಗೆ

 ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಸಂಬಂಧ ಸ್ಥಳ ಮಹಜರು ನಡೆಸಲು ಎಸ್​​ಐಟಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ನೇತ್ರಾವತಿ ನದಿ ತೀರದ ಬಂಗ್ಲಗುಡ್ದ ಪ್ರದೇಶದಲ್ಲಿ ವಿಠಲಗೌಡ ಬುರುಡೆ ತಂದಿರುವ ಜಾಗದಲ್ಲಿ ಎಸ್ ಐಟಿ ಅಧಿಕಾರಿಗಳು ಇಂದು ಮಹಜರು ನಡೆಸಲಿದ್ದಾರೆ.   ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದ್ದು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, SOCO ಟೀಮ್ , ಕಂದಾಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಹಾಜರಿರುವಂತೆ…

Read More

ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬಿಗ್ ಶಾಕ್..!

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಬುರುಡೆ ಚಿನ್ನಯ್ಯಗೆ ಕೋರ್ಟ್ ಶಾಕ್ ನೀಡಿದೆ. ಸದ್ಯಕ್ಕೆ ಚಿನ್ನಯ್ಯಗೆ ಜೈಲುವಾಸವೇ ಗತಿಯಾಗಿದೆ. ಧರ್ಮಸ್ಥಳದ ಬಳಿ ನೂರಾರು ಶವಗಳನ್ನು ತಾನು ಹೂತು ಹಾಕಿರುವುದಾಗಿ ಆರೋಪಿಸಿದ್ದ ಚಿನ್ನಯ್ಯ 17 ಜಾಗಗಳನ್ನು ತೋರಿಸಿದ್ದ. ಆದರೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಜಾಗಗಳಲ್ಲಿ ನಡೆಸಿದ ಉತ್ಖನನದ ವೇಳೆ ಕೆಲವೊಂದು ಸ್ಥಳಗಳನ್ನು ಬಿಟ್ಟು ಉಳಿದೆಡೆ ಯಾವುದೇ ಮಾನವ ಕಳೇಬರಗಳು ಪತ್ತೆಯಾಗಿರಲಿಲ್ಲ. ಶಿವಮೊಗ್ಗ ಜೈಲು ಸೇರಿರುವ ಬುರುಡೆ ಚಿನ್ನಯ್ಯ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದಕ್ಷಿಣ…

Read More

ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ..!

ಮಂಗಳೂರು: ಕೆಂಪುಕಲ್ಲು ವಿಷಯದಲ್ಲಿ ಎದುರಾದ ಕಾನೂನಾತ್ಮಕ ತೊಡಕನ್ನು ಈಗಾಗಲೇ ಸರಿಪಡಿಸಿ ಸರಳೀಕರಣ ಮಾಡಿ ಸಚಿವ ಸಂಪುಟ ಹಾಗೂ ಮುಖ್ಯಮಂತ್ರಿಯವರ ಅನುಮತಿ ಪಡೆಯಲಾಗಿದೆ. ಸರಳೀಕರಣ ಮಾಡಿರುವ ಹೊಸ ನೀತಿ ಜಿಲ್ಲಾಡಳಿತದ ಮೂಲಕ ಅನುಷ್ಟಾನಗೊಳ್ಳಲಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದ‌ರ್ ತಿಳಿಸಿದ್ದಾರೆ. ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೆಂಪುಕಲ್ಲು ತೆಗೆಯಲು ಅನುಮತಿ ಕೋರಿ ದ.ಕ. ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ 53 ಅರ್ಜಿಗಳಲ್ಲಿ 25 ಅರ್ಜಿಗಳಿಗೆ ಅನುಮತಿಯನ್ನೂ ಸಂಬಂಧಪಟ್ಟ ಇಲಾಖೆಯಿಂದ ನೀಡಲಾಗಿದೆ ಎಂದರು. ಕೆಂಪುಕಲ್ಲು ವಿಚಾರದಲ್ಲಿ ಹಲವು…

Read More

ರಾಜ್ಯದಲ್ಲಿ ಇನ್ಮುಂದೆ ಯೂಟ್ಯೂಬ್ ಚಾನೆಲ್ ಆರಂಭಕ್ಕೆ ಲೈಸೆನ್ಸ್ ಕಡ್ಡಾಯ..!! 

 ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು. ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು. ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ…

Read More

ಮಂಗಳೂರು-ಸುಬ್ರಹ್ಮಣ್ಯ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಸಂಚಾರಕ್ಕೆ ದಿನಾಂಕ ಘೋಷಣೆ

ಮಂಗಳೂರು: ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆ ಪೂರ್ಣಗೊಂಡಿದ್ದು, ಈ ಮೂಲಕ ರೈಲ್ವೇ ಪ್ರಯಾಣಿಕರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಂತಾಗಿದೆ. ಹೌದು, ಸೆಪ್ಟೆಂಬರ್ 15ರಿಂದ ರೈಲುಗಳು ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿದೆ. ಸೆ. 10ರಂದು ವಿದ್ಯುತ್ ಚಾಲಿತ ಎಂಜಿನ್ ಮಂಗಳೂರು-ಸುಬ್ರಹ್ಮಣ್ಯ ರೋಡ್ ನಡುವೆ ಯಶಸ್ವಿ ಸಂಚಾರ ನಡೆಸಿದೆ. ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಸಮಯದ ಎರಡೂ ಬದಿಯ, ಮೂರು ಹೊತ್ತಿನ ರೈಲುಗಳೂ ಕೂಡಾ ವಿದ್ಯುದೀಕರಣ ಆಗಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು-ಮಂಗಳೂರು ವಂದೇ…

Read More

ಇಂದು ಮಧ್ಯಾಹ್ನ1 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ಮೈಸೂರು : ಸೆಪ್ಟೆಂಬರ್ 22ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹತೋತ್ಸವ ನಡೆಯಲಿದ್ದು, ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 1 ಗಂಟೆವರೆಗೆ ಮೈಸೂರು ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಿಂಹಾಸನ ಜೋಡಣೆ ಕಾರ್ಯ ನಡೆಯುವ ಹಿನ್ನೆಲೆ ಮೈಸೂರಿನ ಅರಮನೆಗೆ ಮಧ್ಯಾಹ್ನ 1 ಗಂಟೆವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನೆರವೇರಲಿದೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕ್ರತಿಕ ನಗರಿ ಮೈಸೂರು ಸಜ್ಜಾಗಿದೆ. 2025ನೇ ಸಾಲಿನ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು…

Read More

ಮಂಗಳೂರು: ಇಂಜಿನ್ ಬಂದ್ ಆಗಿ ಮೀನುಗಾರಿಕಾ ಬೋಟ್ ಪಲ್ಟಿ..!! ಅಪಾರ ನಷ್ಟ

ಮಂಗಳೂರು: ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ಬೋಟ್ ಎಂಜಿನ್ ವೈಫಲ್ಯದಿಂದ ಸಮುದ್ರ ತಟದ ಕಲ್ಲು ಬಂಡೆಗೆ ಬಡಿದು ಪಲ್ಟಿಯಾದ ಘಟನೆ ಮಂಗಳೂರು ಹೊರ ವಲಯದ ಉಳ್ಳಾಲ ಸೀಗ್ರೌಂಡ್‌ನಲ್ಲಿ ನಡೆದಿದೆ. ಬೋಟ್‌ನಲ್ಲಿದ್ದ 13 ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.  ಅಶ್ಫಾಕ್ ಎಂಬವರ ಮಾಲಕತ್ವದ ಬುರಾಖ್ ಹೆಸರಿನ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದೆ. ಈ ಸಂದರ್ಭ ಚಾಲಕ ಸಹಿತ ಬೋಟ್‌ನಲ್ಲಿದ್ದ ಹದಿಮೂರು ಮಂದಿ ಮೀನುಗಾರರು ಈಜಿ ದಡ ಸೇರಿದ್ದಾರೆ. ಇಂದು ಮುಂಜಾನೆ 2.30 ಗಂಟೆಗೆ ಮಂಗಳೂರಿನ ಧಕ್ಕೆಯಿಂದ ಹದಿಮೂರು ಮಂದಿಯನ್ನು ಹೇರಿಕೊಂಡು…

Read More

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ, ಪ್ರತಾಪ್‌ ಸಿಂಹ ಸಲ್ಲಿಸಿದ್ದ PIL ವಜಾ

ಬೆಂಗಳೂರು:ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನವನ್ನು ಪ್ರಶ್ನಿಸಿದ್ದ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ. ಇದರೊಂದಿಗೆ ಮೂವರು ಕೂಡ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿಯಲ್ಲಿ ಉಲ್ಲೇಖ ಮಾಡಿರುವಂತೆ ಯಾವುದೇ ಸಾರ್ವಜನಿಕವಾಗಿ ಹಕ್ಕು ಉಲ್ಲೇಖವಾಗಿಲ್ಲ ಅಂತ ತಿಳಿಸಿದೆ. ಇದರೊಂದಿಗೆ ಪ್ರತಾಪ್‌ ಸಿಂಹ ಸಲ್ಲಿಸಿದ್ದ ವಜಾ ಮಾಡಿದೆ. ಬಾನು ಮುಷ್ತಾಕ್ ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.,…

Read More

ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ ಅರ್ಜಿಗಳ ಕುರಿತು ಇಂದು ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಲಿದೆ. ಮೇ ತಿಂಗಳಲ್ಲಿ ವಿಚಾರಣೆಗೆ ಬರಬೇಕಿದ್ದ ಅರ್ಜಿಗಳ ಕುರಿತು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು ತೀರ್ಪು ನೀಡಲಿದೆ. ಬಳಕೆ ಅಥವಾ ನೋಂದಣಿ ಮೂಲಕ ವಕ್ಫ್ ಆಗಿರುವ ಭೂಮಿಯಲ್ಲಿ ಯಥಾಸ್ಥಿತಿ ಮುಂದುವರಿಯುತ್ತದೆಯೇ ಎಂಬ ನಿರ್ಣಾಯಕ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಇಂದು ಉತ್ತರಿಸಲಿದೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ವಕ್ಫ್ ಕೌನ್ಸಿಲ್ ಮತ್ತು ಮಂಡಳಿಗಳಿಗೆ ಹೊಸ ನೇಮಕಾತಿಗಳನ್ನು…

Read More

ರಾಜ್ಯಾದ್ಯಂತ 7.76 ಲಕ್ಷ `BPL ರೇಷನ್ ಕಾರ್ಡ್’ ರದ್ದು.!

ಬೆಂಗಳೂರು : ರಾಜ್ಯಾದ್ಯಂತ ಬರೋಬ್ಬರಿ 7.76 ಲಕ್ಷ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಲು ಆಹಾರ ಇಲಾಖೆ ಮುಂದಾಗಿದೆ. ಆಹಾರ ಇಲಾಖೆಯ ವಿಶೇಷ ಕಾರ್ಯಾಚರಣೆ ವೇಳೆ ರಾಜ್ಯದಲ್ಲಿ ಬರೋಬ್ಬರಿ 7.76 ಲಕ್ಷ ಮಂದಿ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯೇ ನೀಡಿದೆ. ಹೀಗಾಗಿ ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಇಂದು ಆಹಾರ ಇಲಾಖೆಯ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ…

Read More