ಹೀರೆಕಾಯಿಯ ಆರೋಗ್ಯ ಪ್ರಯೋಜನಗಳು..!
ಹಸಿರೆಲೆ ತರಕಾರಿಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಹೀರೆಕಾಯಿ. ಆರೋಗ್ಯದ ವಿಚಾರದ ಬಗ್ಗೆ ಹೇಳುವುದಾದರೆ, ನಾವು ಯಾವ ಬಗೆಯ ತರಕಾರಿಯನ್ನು ಕೂಡ ಕಡೆಗಣಿ ಸುವ ಹಾಗಿಲ್ಲ! ಇದಕ್ಕೆ ಪ್ರಮುಖ ಕಾರಣಗಳು ಏನೆಂದರೆ, ಎಲ್ಲಾ ಬಗೆಯ ತರಕಾರಿಗಳಿಂದಲೂ ಕೂಡ ನಮಗೆ ಒಂದೊಂದು ಬಗೆಯ ಆರೋಗ್ಯ ಪ್ರಯೋಜನಗಳು ಸಿಗುತ್ತಾ ಹೋಗುತ್ತವೆ. ಉದಾಹರಣೆಗೆ ಹೇಳುವುದಾದರೆ, ಕೆಲವು ತರಕಾರಿಗಳಲ್ಲಿ ಆರೋಗ್ಯಕ್ಕೆ ಅವಶ್ಯಕವಾಗಿ ಬೇಕಾಗಿರುವ ವಿಟಮಿನ್ಸ್‌ಗಳು ಹೆಚ್ಚಾಗಿದ್ದರೆ, ಇನ್ನು ಕೆಲವೊಂದರಲ್ಲಿ ಖನಿಜಾಂಶಗಳು, ಕಬ್ಬಿಣಾಂಶದ…

