ಬೆಂಗಳೂರು: ತಡರಾತ್ರಿ ಕಾಂಗ್ರೆಸ್ ನಾಯಕನ ಬರ್ಬರ ಹತ್ಯೆ
ಬೆಂಗಳೂರು: ಅಶೋಕನಗರದ ಗರುಡ ಮಾಲ್ ಹತ್ತಿರ ಶನಿವಾರ ತಡರಾತ್ರಿ, ಕಾಂಗ್ರೆಸ್ ಮುಖಂಡ ಶೇಖ್ ಹೈದರ್ ಅಲಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲೈವ್ ಬ್ಯಾಂಡ್ ಪ್ರದರ್ಶನವನ್ನು ನೋಡಿ ಹೊರಬಂದ ನಂತರ, ಶೇಖ್ ಹೈದರ್ ಅಲಿ ಮತ್ತು ಅವರ ಸ್ನೇಹಿತ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಆರೋಪಿಗಳು ಬೈಕ್ ಅನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಹೈದರ್ ಅಲಿಯನ್ನು ಪೊಲೀಸರು ತಕ್ಷಣ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಲ್ಲಿಯೇ ಅವರು ಸಾವನ್ನಪ್ಪಿದರು. ಘಟನೆ ಬಳಿಕ, ಬೌರಿಂಗ್ ಆಸ್ಪತ್ರೆ ಬಳಿ…

