ಖ್ಯಾತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕಾಪು ಕ್ಷೇತ್ರಕ್ಕೆ ಭೇಟಿ
ಉಡುಪಿ: ಖ್ಯಾತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕಾಪು ಗದ್ದುಗೆ ಪ್ರತಿಷ್ಠೆಯ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡಿದರು. ಪತ್ನಿ ದೇವಿಶಾ ಶೆಟ್ಟಿ ಜೊತೆ ಭಾರತ ಟಿ -20 ತಂಡದ ಕ್ಯಾಪ್ಟನ್ ಆಗಮಿಸಿದರು. ಈ ಹಿಂದೆಯೂ ಕ್ಷೇತ್ರಕ್ಕೆ ಬಂದು ದೇಗುಲಕ್ಕೆ ಕಂಬವನ್ನು ಸೇವಾ ರೂಪದಲ್ಲಿ ದಂಪತಿ ಕೊಟ್ಟಿದ್ದರು. ಸೂರ್ಯ ಕುಮಾರ್ ಯಾದವ್ ಪತ್ನಿ ಕರಾವಳಿ ಮೂಲದವರು. ನಿರ್ಮಾಣ ಹಂತದಲ್ಲಿದ್ದ ಕಾಪು ಮಾರಿಯಮ್ಮನ ಗುಡಿಯನ್ನು ಕಂಡು ಸೂರ್ಯ ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದರು. ಬ್ರಹ್ಮಕಲಶೋತ್ಸವದ ವೇಳೆ ದೇಗುಲಕ್ಕೆ ಬರುವುದಾಗಿ ಯಾದವ್ ಹೇಳಿದ್ದರು. ಟಿ…

