admin

ಬಂಟ್ವಾಳ: ಕಾರಿಗೆ ಖಾಸಗಿ ಬಸ್ ಡಿಕ್ಕಿ..!

ಬಂಟ್ವಾಳ: ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಸರ್ಕಲ್ ಬಳಿ ನಡೆದಿದೆ. ಬಂಟ್ವಾಳ ಕನ್ಯಾನದ ವಿಷ್ಣು ಗ್ಯಾರೇಜ್ ಮಾಲಕ ವಿಶ್ವನಾಥ ಶೆಟ್ಟಿ ಗಾಯಗೊಂಡ ಕಾರು ಚಾಲಕ ಎಂದು ಗುರುತಿಸಲಾಗಿದೆ. ಬಿಸಿರೋಡಿನ ಕಡೆಯಿಂದ ಮೆಲ್ಕಾರ್ ಕಡೆಗೆ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಿದ್ದ ವಿಶ್ವನಾಥ ಅವರ ಕಾರಿಗೆ ಮೆಲ್ಕಾರ್ ಪಾಣೆಮಂಗಳೂರು ಕಡೆಯಿಂದ ಬರುತ್ತಿದ್ದ ಸೆಲಿನಾ ಬಸ್ ವಿರುದ್ಧ ದಿಕ್ಕಿನಲ್ಲಿ ಬಂದು ಡಿಕ್ಕಿ ಹೊಡೆದಿದೆ.ಬಸ್ ಚಾಲಕನ ನಿಯಮ ಮೀರಿದ…

Read More

ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸಾಮರಸ್ಯ ಅತ್ಯಗತ್ಯ: ಸ್ಪೀಕರ್ ಯು.ಟಿ. ಖಾದರ್

ಬೆಂಗಳೂರು:  ಸೌಹಾರ್ದತೆಗೆ ಒತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಜನರನ್ನು ಪ್ರೀತಿಯಿಂದ ಬರುವಂತೆ ಮಾಡಬೇಕು. ಭಯ ಪಡಿಸುವಂತಾಗಬಾರದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಮಂಗಳವಾರ ಹೇಳಿದರು.    ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಘಂಟಿಹೊಳೆ ಅವರು ಕರಾವಳಿ ಪ್ರವಾಸೋದ್ಯಮವನ್ನು ವಿಶೇಷ ಪ್ಯಾಕೇಜ್ ಎಂದು ಪರಿಗಣಿಸುವ ವಿಷಯವನ್ನು ಪ್ರಸ್ತಾಪಿಸಿದರು.    ಇದಕ್ಕೆ ಉತ್ತರಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು, ರಾಜ್ಯದಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಸುಧಾರಿಸುವ ಪ್ರಸ್ತಾಪವನ್ನು ವಿವರಿಸಿದರು.    ಕರಾವಳಿ…

Read More

ಉಡುಪಿ: ಸರಣಿ ಅಪಘಾತ – ಸಿನಿಮೀಯ ಸ್ಟೈಲ್ ನಲ್ಲಿ ಆರೋಪಿಯ ಬಂಧನ..!

ಉಡುಪಿ: ಉಡುಪಿಯಲ್ಲಿ ಸಿನಿಮೀಯ ಸ್ಟೈಲ್ ನಲ್ಲಿ ನಟೋರಿಯಸ್ ಕ್ರಿಮಿನಲ್ ಬಂಧಿಸಲಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯು ಸರಣಿ ಅಪಘಾತ ನಡೆಸಿದ್ದಾನೆ.ಉಡುಪಿಯ ಮಣಿಪಾಲದಲ್ಲಿ ಗರುಡ ಗ್ಯಾಂಗ್ ನ ಕುಖ್ಯಾತ ಸದಸ್ಯ ಇಸಾಕ್ ನನ್ನು ಸೆರೆ ಹಿಡಿಯಲಾಗಿದೆ. ಸೀನಿಮಿಯ ರೀತಿಯಲ್ಲಿ ನಟೋರಿಯಸ್ ಕ್ರಿಮಿನಲ್ ನನ್ನ ಚೇಸ್ ಮಾಡಿ ಮಣಿಪಾಲ ಪೊಲೀಸರು ಸೆರೆ ಹಿಡಿದಿದ್ದಾರೆ.ಉಡುಪಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಘಟನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನ ಬಂಧಿಸಲು ನೆಲಮಂಗಲ ಪೊಲೀಸರು ಆಗಮಿಸಿದ್ದರು.ನೆಲಮಂಗಲ ಪೊಲೀಸರನ್ನು ಕಂಡು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು ಆರೋಪಿಯನ್ನ ಬೆಂಬಿಡದೆ…

Read More

ರಾತ್ರಿ 7-8 ಗಂಟೆಯ ಮೇಲೆ ದಕ್ಷಿಣ ಕನ್ನಡ ಸ್ಥಬ್ಧ- ಡಿಕೆಶಿ

ಬೆಂಗಳೂರು : ರಾತ್ರಿ 7-8 ಗಂಟೆಯ ಮೇಲೆ ದಕ್ಷಿಣ ಕನ್ನಡ ಜಿಲ್ಲೆ ಸ್ಥಬ್ಧವಾಗುತ್ತದೆ. ಯಾವುದೇ ಕಾರ್ಯಚಟುವಟಿಕೆ ಇರುವುದಿಲ್ಲ. ಧಾರ್ಮಿಕವಾದ ಭಜನೆ, ಬಯಲಾಟ ಹೊರತಾಗಿ ಬೇರೆ ಯಾವುದೇ ಚಟುವಟಿಕೆ ಇರುವುದಿಲ್ಲ. ಈ ವಿಚಾರವಾಗಿ ಅಲ್ಲಿನ ಶಾಸಕರೇ ಕೂತು ಚರ್ಚೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿ, ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ…

Read More

 ವಿಟ್ಲ: ಭಾರೀ ಸ್ಫೋಟ- ಮನೆಗಳಿಗೆ ಹಾನಿ..!!

ವಿಟ್ಲ: ಕಲ್ಲಿನ ಕೋರೆಯಲ್ಲಿ ಬಾರಿ ಪ್ರಮಾಣದ ಸ್ಫೋಟ ಸಂಭವಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ. ಸ್ಫೋಟಗೊಂಡ ಶಬ್ದಕ್ಕೆ ವಿಟ್ಲದ ಜನತೆ ಬೆಚ್ಚಿ ಬಿದ್ದಿದ್ದಾರೆ. ವಿಟ್ಲ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆಯ ಸುತ್ತಮುತ್ತಲಿನಲ್ಲಿ ಜೋರಾಗಿ  ಶಬ್ದ ಕೇಳಿದೆ. ಈ ಶಬ್ದಕ್ಕೆ  ಹಲವು ಮಂದಿ ಭೂಕಂಪನ ಸಂಭವಿಸಿರಬಹುದೆಂದು ಊಹಿಸಿದ್ದರು. ಬಳಿಕ ವಿಚಾರಿಸಿದಾಗ ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ಪರಿಣಾಮ ಹಲವು ಮನೆಗಳಿಗೆ ಹಾನಿಯುಂಟಾಗಿದ್ದು ಸ್ಥಳಕ್ಕೆ ವಿಟ್ಲ ಪೊಲೀಸರು, ಎಸ್ಪಿ ಹಾಗೂ ಇತರ ಹಲವು ಅಧಿಕಾರಿಗಳು…

Read More

ನಾಟಕ ಕ್ಷೇತ್ರದಲ್ಲಿ ಹೊಸ ದಾಖಲೆ ಸೃಷ್ಟಿಸಲು ಹೊರಟಿದೆ ಸಾಯಿಶಕ್ತಿ ಕಲಾಬಳಗ : ಒಂದೇ ದಿನ ಮೂರು ರಾಜ್ಯಗಳಲ್ಲಿ ನಾಟಕ ಪ್ರದರ್ಶನ

ಮಂಗಳೂರು : ನಾಟಕ ರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಪ್ರಯತ್ನದಲ್ಲಿ, ಮಂಗಳೂರಿನ ಸಾಯಿಶಕ್ತಿ ಕಲಾಬಳಗ ಈಗಾಗಲೇ ಸಾಕಷ್ಟು ಹೆಸರನ್ನು ಹುಟ್ಟುಹಾಕಿದೆ. ಈ ತಂಡ ಇದೀಗ ಒಂದೇ ದಿನ ಮೂರು ರಾಜ್ಯಗಳಲ್ಲಿ ನಾಟಕ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆಯಲು ಮುಂದಾಗಿದೆ. ಇದು ನಾಟಕ ಕ್ಷೇತ್ರದಲ್ಲಿ ಅಪೂರ್ವ ಪ್ರಯತ್ನವಾಗಿದ್ದು , ನಾಟಕದ ಪ್ರಭಾವವನ್ನು ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆ ಎಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ಪ್ರಯತ್ನದ ಅಂಗವಾಗಿ, ತಂಡದ ಕಲಾವಿದರು ಕರ್ನಾಟಕ, ಕೇರಳ , ಮತ್ತು ಮುಂಬೈ ಮಹಾನಗರಿಯಲ್ಲಿ ಒಂದೇ…

Read More

ಐಡಿಬಿಐ ಬ್ಯಾಂಕಿನಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ

ಐಡಿಬಿಐ ಬ್ಯಾಂಕಿನಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ಖಾಲಿ ಇದ್ದು, ಮಾರ್ಚ್ 1 ರಿಂದ ಅರ್ಜಿ ಪ್ರಕ್ರಿಯೆಯೂ ಆರಂಭವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಯಾವುದೇ ಅಭ್ಯರ್ಥಿಯು IDBI ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ idbibank.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 12, 2025. ಈ ನೇಮಕಾತಿ ಅಭಿಯಾನದಡಿಯಲ್ಲಿ, ಐಡಿಬಿಐ ಬ್ಯಾಂಕ್ ಒಟ್ಟು 650 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ಐಡಿಬಿಐ ಬ್ಯಾಂಕ್ ನೇಮಕಾತಿ ಅರ್ಹತಾ ಮಾನದಂಡಗಳು: ಅರ್ಜಿ ಶುಲ್ಕ ಎಷ್ಟು? ಸಾಮಾನ್ಯ…

Read More

ತಿದ್ದುಪಡಿ ಮಾಡಿದ ಮೇಲೆ ಹಳೆಯ ಜನನ ಪ್ರಮಾಣ ಪತ್ರ ರದ್ದು ಮಾಡಿ- ಕರ್ನಾಟಕ ಹೈಕೋರ್ಟ್

ಬೆಂಗಳೂರು: ಈಗಾಗಲೇ ನೀಡಲಾದ ಜನನ ಪ್ರಮಾಣಪತ್ರದಲ್ಲಿ ಯಾವುದೇ ತಿದ್ದುಪಡಿ ಕಂಡುಬಂದರೆ, ಜನನ ಮತ್ತು ಮರಣ ನೋಂದಣಾಧಿಕಾರಿಗಳು ಹಿಂದಿನ ಜನನ ಪ್ರಮಾಣಪತ್ರವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ನ ಧಾರವಾಡ ಪೀಠ ಹೇಳಿದೆ. ಹಿಂದಿನ ಜನನ ಪ್ರಮಾಣಪತ್ರವನ್ನು ರದ್ದುಪಡಿಸಲಾಗಿದೆ ಎಂಬ ಅನುಮೋದನೆಯೊಂದಿಗೆ, ಸರಿಪಡಿಸಿದ ಜನನ ಪ್ರಮಾಣಪತ್ರವನ್ನು ನೀಡುವಾಗ ಮೂಲ ಜನನ ಪ್ರಮಾಣಪತ್ರವನ್ನು ಹಿಂಪಡೆಯಲು ಎಲ್ಲಾ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ನ್ಯಾಯಾಲಯವು ಈಗ ಪೌರಾಡಳಿತ ನಿರ್ದೇಶಕರಿಗೆ ಸೂಚಿಸಿದೆ. ಅಗತ್ಯ ನಮೂದುಗಳನ್ನು ಇ-ಜನ್ಮ…

Read More

ಭೀಕರ ರಸ್ತೆ ಅಪಘಾತ- ಮೂವರು ದುರ್ಮರಣ

ಕಾಸರಗೋಡು: ಮಂಜೇಶ್ವರದ ವಾಮಂಜೂರಿನಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಉಪ್ಪಳ ಪೈವಳಿಕೆ ಸಮೀಪದ ಬಾಯಿಕಟ್ಟೆ ನಿವಾಸಿಗಳಾದ ಜನಾರ್ದನ, ವರುಣ್ ಮತ್ತು ಕೃಷ್ಣ ಮೃತಪಟ್ಟವರು.ಉಪ್ಪಿನಂಗಡಿ ಮೂಲದ ರತನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ…

Read More

ಬಂಟ್ವಾಳ: ವೀಡಿಯೋ ನೋಡಿದರೆ ಹಣ ಸಿಗುತ್ತದೆ ಎಂದು ನಂಬಿ 1.12 ಲಕ್ಷ ರೂ ಕಳೆದುಕೊಂಡ ವ್ಯಕ್ತಿ

ಬಂಟ್ವಾಳ: ವೀಡಿಯೋ ನೋಡಿದರೆ ಹಣ ಸಿಗುತ್ತದೆ ಎಂಬ ಆ್ಯಪ್‌ವೊಂದರ ಮಾಹಿತಿಯಂತೆ ಕಲ್ಲಡ್ಕ ಕೃಷ್ಣಕೋಡಿಯ ವರುಣ್‌ ಅವರು ಬ್ಯಾಂಕ್‌ ಖಾತೆಯಿಂದ 1.12 ಲಕ್ಷ ರೂ. ಕಳೆದುಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರುಣ್‌ ಮೊಬೈಲ್‌ಗೆ 2024ರ ನ. 8ರಂದು ವಾಟ್ಸ್‌ಆ್ಯಪ್‌ ಮೂಲಕ ಲಿಂಕ್‌ವೊಂದು ಬಂದಿದ್ದು, ಅದನ್ನು ಒತ್ತಿದಾಗ ಮಾಡಿದಾಗ ಆರ್‌ಪಿಸಿ ಆ್ಯಪ್‌ ಓಪನ್‌ ಆಗಿತ್ತು. ಅದರ ಮೂಲಕ ಅಶಕ್ತರಿಗೆ ನೆರವು ನೀಡಲಾಗುತ್ತದೆ ಎಂಬ ಮಾಹಿತಿ ಇದ್ದು, ಜತೆಗೆ ದಿನಕ್ಕೆ 40…

Read More