ಬಜೆಟ್ ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಘೋಷಣೆ – ಅಶೋಕ್ ರೈಯವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಕಾರ್ಯಕರ್ತರು
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಹೊಸ ಮೆಡಿಕಲ್ ಕಾಲೇಜ್ ಸ್ಥಾಪಿಸಲಾಗುವುದೆಂದು ಘೋಷಿಸುತ್ತಲೆ ಪುತ್ತೂರಿಗರ ಹರ್ಷಕ್ಕೆ ಎಲ್ಲೆ ಇಲ್ಲದಂತಾಗಿದೆ. ಇಂದಿನ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಂಗಳೂರಿಗೆ ತೆರಳಿದ್ದರು. ಅವರ ಜತೆ ಬ್ಯಾಂಡ್ ವಾದನದ ತಂಡವು ತೆರಳಿತ್ತು. ಬಜೆಟ್ ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆಯಾಗುತ್ತಲೇ, ಪುತ್ತೂರಿನಿಂದ ತೆರಳಿದ ನೂರಾರು ಮಂದಿ ವಿಧಾನ ಸೌಧದ ಮುಂಭಾಗ ಕುಣಿದು ಕುಪ್ಪಳಿಸಿದರು. ಇದೆ ವೇಳೆ ಶಾಸಕ ಅಶೋಕ್ ರೈಯವರು…

