admin

ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸುವವರಿಗೆ ಮರಣದಂಡನೆ ವಿಧಿಸಲು ಕಾನೂನಿನಲ್ಲಿ ತಿದ್ದುಪಡಿ..!

ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರಿಸುವವರಿಗೆ ಮರಣದಂಡನೆ ವಿಧಿಸಲು ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ, ರಾಜ್ಯದಲ್ಲಿ ಬಲವಂತದ ಧಾರ್ಮಿಕ ಮತಾಂತರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು. ಮಧ್ಯಪ್ರದೇಶ ಸರ್ಕಾರವು ಈ ಹಿಂದೆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡುವವರಿಗೆ ಮರಣದಂಡನೆ ವಿಧಿಸುವ ತಿದ್ದುಪಡಿಯನ್ನು ತಂದಿತ್ತು. ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸುವವರಿಗೆ ಮರಣದಂಡನೆ ವಿಧಿಸುವ ದೇಶದ ಮೊದಲ ರಾಜ್ಯ ಮಧ್ಯಪ್ರದೇಶವಾಗಲಿದೆ ಎಂದು ಯಾದವ್ ಹೇಳಿದರು. “ಮುಗ್ಧ…

Read More

ಕರಾವಳಿಗೆ ವಾಟರ್ ಮೆಟ್ರೋ..! ಮಂಗಳೂರಿಗೆ ಅಂತರಾಷ್ಟ್ರೀಯ ಕ್ರೂಸ್ ಯೋಜನೆ ಘೋಷಣೆ

 ರಾಜ್ಯ ಬಜೆಟ್‌ನಲ್ಲಿ ಕರಾವಳಿಗೆ ಅನೇಕ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ. ಕರ್ನಾಟಕದ ಮೊದಲ “ವಾಟರ್ ಮೆಟ್ರೋ” ಯೋಜನೆಯನ್ನು ಮಂಗಳೂರಿನಲ್ಲಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಮಂಗಳೂರಿಗೆ ಅಂತರಾಷ್ಟ್ರೀಯ ಕ್ರೂಸ್ ಯೋಜನೆ ಮತ್ತು ಕೋಸ್ಟಲ್ ಬರ್ತ್ ಯೋಜನೆ ಕೂಡ ಘೋಷಣೆಗೊಂಡಿದ್ದು, ಇದು ಸಮುದ್ರ ಮತ್ತು ಜಲಮಾರ್ಗಗಳಲ್ಲಿ ಸರಕು-ಪ್ರಯಾಣಿಕರ ಚಲನೆಯನ್ನು ಉತ್ತೇಜಿಸುತ್ತದೆ. ಹೊನ್ನಾವರ ಹಾಗೂ ಮಂಕಿಯಲ್ಲಿ ಬಂದರು ನಿರ್ಮಾಣ, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕೇಂದ್ರ, ಮತ್ತು ನದಿ ಕ್ರೂಸ್ ಪ್ರವಾಸೋದ್ಯಮ ವಿಸ್ತರಣೆಗೆ ಯೋಜನೆ ಸಿದ್ಧವಾಗಿದೆ. ಏನಿದು ವಾಟರ್ ಮೆಟ್ರೋ?ಎಲೆಕ್ಟ್ರಿಕ್-ಹೈಬ್ರಿಡ್ ಫೆರಿಗಳನ್ನು ಬಳಸಿ ಸಮುದ್ರದ…

Read More

ಬಂಟ್ವಾಳ: ಕೊನೆಗೂ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆ!

ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಸುಮಾರು 10 ದಿನದ ಬಳಿಕ ಮಾ.8ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪೊಲಿಸರು ಆತನನ್ನು ಕರೆತರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, 40ಕ್ಕೂ ಅಧಿಕ ಪೋಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿಎಆರ್ ತಂ ಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾ ಡ್, ಡ್ರೋ ನ್ಕ್ಯಾಮೆರಾಗಳನ್ನು ಬಳಿಸಿ ಹುಡುಕಾಟ ನಡೆಸಿದ್ದರು. ಈತ ಮಂಗಳೂರಿನಲ್ಲಿ…

Read More

ಮೊಬೈಲ್ ಬಳಕೆದಾರರೇ ಎಚ್ಚರ : ಈ ಸಂಖ್ಯೆಗಳಿಂದ ‘ಮಿಸ್ಡ್ ಕಾಲ್’ ಬಂದ್ರೆ ತಪ್ಪಿಯೂ ವಾಪಸ್ ಕರೆ ಮಾಡಬೇಡಿ

ನವದೆಹಲಿ : ನಾವು ಕೆಲವು ರೀತಿಯ ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿದ್ದಾಗ ಇದ್ದಕ್ಕಿದ್ದಂತೆ ಫೋನ್ ರಿಂಗಾಗುತ್ತೆ. ಗೊತ್ತಿಲ್ಲದ ನಂಬರ್ ಆಗಿದ್ರೆ ಅದನ್ನು ಸ್ವೀಕರಿಸುವ ಬದಲು ಕಟ್ ಮಾಡುತ್ತೇವೆ. ಮಿಸ್ಡ್ ಕಾಲ್ ಲೋಕಲಾ, ಎಸ್ ಟಿಡಿ, ಐಎಸ್ ಡಿ ನಿಜವಾಗಿಯೂ ನಮ್ಮ ದೇಶಕ್ಕೆ ಸಂಬಂಧಿಸಿದೆಯೇ? ಇಂಟರ್ನ್ಯಾಷನಲ್ ಕಾಲಿಂಗ್.? ಬಹಳಷ್ಟು ಜನರು ಅದನ್ನು ಪರಿಶೀಲಿಸದೆ ಡಯಲ್ ಮಾಡುತ್ತಾರೆ. ಇದಲ್ಲದೆ, ಇದನ್ನು ಮಾಡಿದ ವ್ಯಕ್ತಿಯು ಪ್ರಿಪೇಯ್ಡ್ ಗ್ರಾಹಕರಾಗಿದ್ದರೆ, ಮಾತನಾಡುವಾಗ ನಿಮಿಷಕ್ಕೆ 200 ರಿಂದ 300 ಕಡಿತಗೊಳಿಸಲಾಗುತ್ತದೆ. ಕೆಲವು ಹ್ಯಾಕರ್’ಗಳು ಕರೆ ಸ್ವೀಕರಿಸುವವರ ಮಾಹಿತಿ…

Read More

ಕಲಬುರ್ಗಿ ಯಲ್ಲಿ ನಡೆದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸಿದ್ಧಕಟ್ಟೆಯ ಲಿಖಿತಾ ಸಾಲ್ಯಾನ್ ಗೆ ಪ್ರಥಮ ಸ್ಥಾನ

ಬಂಟ್ವಾಳ: ಕರ್ನಾಟಕ ರಾಜ್ಯ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಇತ್ತೀಚೆಗೆ ಕಲಬುರ್ಗಿ ಯಲ್ಲಿ ನಡೆದ ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಭಾಷಣ ಸ್ಪರ್ಧೆಯಲ್ಲಿ ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಖಿತಾ ಆರ್ ಸಾಲ್ಯಾನ್ ರವರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಶಾಲೆ, ತಾಲೂಕು, ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ನಮ್ಮ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಒಟ್ಟು 105 ಸ್ಪರ್ಧಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ…

Read More

ನಿಮ್ಮ ಹಾಗೆ ಡಿಸಿ ಆಗುವೆ ಎಂದ ವಿದ್ಯಾರ್ಥಿನಿ; ತಮ್ಮ ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿ ! 

ಕಾರವಾರ: ಡಿಸಿ ಆಗಬೇಕೆಂಬ ಗುರಿ ಹೊಂದಿರುವ ವಿದ್ಯಾರ್ಥಿನಿಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ತಮ್ಮ ಕುರ್ಚಿ ಮೇಲೆ ಕೂರಿಸಿದ ಅಪರೂಪದ ಗಳಿಗೆಗೆ ಜಿಲ್ಲಾಧಿಕಾರಿ ಕಚೇರಿ ಸಾಕ್ಷಿಯಾಯಿತು. ಈ ಮೂಲಕ ಐಎಎಸ್ ಕನಸು ಕಂಡಿರುವ ವಿದ್ಯಾರ್ಥಿನಿಗೆ ಉತ್ತರ ಕನ್ನಡ ಡಿಸಿ ಸ್ಫೂರ್ತಿ ತುಂಬಿದ್ದಾರೆ. ಗುರುವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ಉದ್ಘಾಟನೆಗೆ ಆಗಮಿಸಿದ್ದ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಉತ್ಸುಕತೆಯಿಂದ…

Read More

ಉಡುಪಿ: ಖಾಸಗಿ ಬಸ್ ನ ಸ್ಟೇರಿಂಗ್ ಕಟ್..! ಸಂಚಾರ ಅಸ್ತವ್ಯಸ್ತ

ಉಡುಪಿ: ಕರಾವಳಿ ಬೈಪಾಸ್ ನಲ್ಲಿ ಖಾಸಗಿ ಬಸ್ಸೊoದರ ಸ್ಟೇರಿಂಗ್ ಕಟ್ಟಾಗಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಉಡುಪಿ ಕಡೆಯಿಂದ ಬ್ರಹ್ಮಾವರ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ಸಿನ ಸ್ಟೇರಿಂಗ್ ಕಟ್ಟಾಗಿದ್ದರಿಂದ ಕೆಲಹೊತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಸ್ಥಳೀಯರಿಗೆ ಆತಂಕ ಉಂಟಾಯಿತು. ಇದರ ಪರಿಣಾಮವಾಗಿ ಕೆಲಕಾಲ ಕರಾವಳಿ ಬೈಪಾಸ್‌ ಬಳಿ ಟ್ರಾಫಿಕ್ ಸಮಸ್ಯೆ ಎದುರಾಯಿತು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಸ್ಥಳೀಯರ ಸಹಕಾರದೊಂದಿಗೆ ಬಸ್ಸನ್ನು ನಿಯಂತ್ರಣಕ್ಕೆ ತರಲಾಯಿತು. ಉಡುಪಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ…

Read More

ಮೂಡುಬಿದಿರೆ: ಕಾರು-ಆಕ್ಟಿವಾ ಢಿಕ್ಕಿ ಶಿಕ್ಷಕಿ ಮೃತ್ಯು

ಮೂಡುಬಿದಿರೆ: ಶುಕ್ರವಾರ ಸಂಜೆ ಶಿರ್ತಾಡಿ ಬಳಿ ಸಂಭವಿಸಿದ ಕಾರು-ಆಕ್ಟಿವಾ ಅಪಘಾತದಲ್ಲಿ ಆಕ್ಟಿವಾ ಸವಾರೆ,ಶಿಕ್ಷಕಿ ಮೃತಪಟ್ಟಿದ್ದಾರೆ.ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿ ಸುಜಯ ಭಂಡಾರಿ (35) ಮೃತಪಟ್ಟವರು. ಸುಜಯಾ ಅವರು ಶುಕ್ರವಾರ ಶಾಲೆಬಿಟ್ಟು ಮನೆಗೆ ಹೋಗುವಾಗ ಶಿರ್ತಾಡಿ ಸೇತುವೆ ಬಳಿ ಮೂಡುಬಿದಿರೆ ಕಡೆಯಿಂದ ಶಿರ್ತಾಡಿ ಕಡೆ ಬರುತ್ತಿದ್ದ ಹೋಂಡಾ ಸಿಟಿ ಕಾರು ಸುಜಯಾ ಅವರ ಆಕ್ಟಿವಾಕ್ಕೆ ಢಿಕ್ಕಿ ಹೊಡೆದಿದೆ.ಈ‌ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸುಜಯಾ ಅವರ ತಲೆಗೆ ತೀವ್ರ ತರದ ಗಾಯವಾಗಿತ್ತು.ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ….

Read More

ವಿಟ್ಲ: ಹಾಡು ಹಗಲೇ ಮನೆಯೊಳಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿ..!

ವಿಟ್ಲ : ಹಾಡು ಹಗಲೇ ಮನೆಯೊಳಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಉರಿಮಜಲು ಸಮೀಪದ ದೇವಸ್ಯ ರಸ್ತೆ ತಿರುವಿನಲ್ಲಿ ನಡೆದಿದೆ. ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಉರಿಮಜಲು, ದೇವಸ್ಯ ರಸ್ತೆ ತಿರುವು ಸಮೀಪ ಗಣೇಶ್‌ ಗೌಡ ಎಂಬವರ ಮನೆಯಲ್ಲಿ ಹಾಡುಹಹಲೇ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಏಳೂವರೆ ಪವನ್‌ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಸ್ಥಳಕ್ಕೆ ವಿಟ್ಲ ಠಾಣಾಧಿಕಾರಿ ನಾಗರಾಜ್‌ ಹೆಚ್‌.ಇ ಮತ್ತು ಎಸ್‌ ಐ ವಿದ್ಯಾರವರು ಭೇಟಿ ನೀಡಿ ಪರಿಶೀಲನೆ…

Read More

“ಹಲಾಲಾ ಬಜೆಟ್ ” ಮುಸ್ಲಿಂ ಸಮುದಾಯಕ್ಕೆ ರಂಜಾನ್ ಕೊಡುಗೆ- BJP

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಸತ್ ನಲ್ಲಿ ಕರ್ನಾಟಕ ಬಜೆಟ್ 2025-26 ಅನ್ನು ಮಂಡಿಸಿದ್ದು, ಇದು ಮುಸ್ಲಿಂ ತುಷ್ಟೀಕರದ ಉತ್ತುಂಗದ ‘ಹಲಾಲಾ ಬಜೆಟ್’ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ. ಬಜೆಟ್ ಭಾಷಣ ಮಾಡಿರುವ ಸಿಎಂ, ಪ್ರವರ್ಗ 1, 2ಎ, 2ಬಿ (ಮುಸ್ಲಿಂ) ಸಮುದಾಯದವರಿಗೆ 2 ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಕೈಗಾರಿಕಾ ಪ್ರದೇಶ ಭೂಮಿ ಹಂಚಿಕೆಯಲ್ಲೂ ಪ್ರವರ್ಗ 1 2ಎ ಜತೆ 2ಬಿ (ಮುಸ್ಲಿಂ) ಗೆ ಶೇಕಡಾ…

Read More