3 ಕೋಟಿ ವಿಮೆಗಾಗಿ ತಂದೆಗೆ ಹಾವು ಕಚ್ಚಿಸಿ ಕೊಂದ ಪುತ್ರರು!!
ತಂದೆ ಸತ್ತ ನಂತರ ಅವರ 3 ಕೋಟಿ ರೂ.ವಿಮೆ ಹಣವನ್ನು ಪಡೆಯಬಹುದು ಎಂಬ ದುರುದ್ದೇಶದಿಂದ ಸ್ವಂತ ಪುತ್ರರೇ ಅತ್ಯಂತ ವಿಷಪೂರಿತ ಕಟ್ಟುಹಾವನ್ನು ತಂದು, ತಂದೆಗೆ ಕಚ್ಚಿಸಿ ಕೊಂದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಸಂಬಂಧ ಮೃತನ ಇಬ್ಬರು ಪುತ್ರರು ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಪೊಥತೂರ್ಪೆಟ್ಟೆ ಎಂಬಲ್ಲಿ ಸರ್ಕಾರಿ ಶಾಲೆಯ ಪ್ರಯೋಗಾಲಯದ ಸಹಾಯಕರಾಗಿದ್ದರು. ಇವರಿಗೆ ಇಬ್ಬರು ಪುತ್ರರು 3 ಕೋಟಿ ರೂ. ಜೀವವಿಮೆ ಮಾಡಿಸಿದ್ದರು. ಈ ನಡುವೆ, ಗಣೇಶನ್ ಕಳೆದ ಅಕ್ಟೋಬರ್‌ನಲ್ಲಿ ಹಾವು…

