admin

ನಾಳೆ ಭಾಗಶಃ ಸೂರ್ಯಗ್ರಹಣ: ಈ ನಗರಗಳು 2025 ರ ಕೊನೆಯ ಗ್ರಹಣಕ್ಕೆ ಸಾಕ್ಷಿಯಾಗಲಿವೆ

ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ರಕ್ತ-ಕೆಂಪು ಬಣ್ಣಕ್ಕೆ ತಿರುಗಿದ ನಂತರ, ನಕ್ಷತ್ರವೀಕ್ಷಕರು ಮುಂದಿನ ಆಕಾಶ ಘಟನೆಯಾದ ಭಾಗಶಃ ಸೂರ್ಯಗ್ರಹಣಕ್ಕೆ ಸಿದ್ಧರಾಗಿದ್ದಾರೆ. ಇದು ವರ್ಷದ ಕೊನೆಯ ಸೂರ್ಯಗ್ರಹಣವಾಗಿದ್ದು, ವಿಶ್ವದ ಹಲವಾರು ಭಾಗಗಳಲ್ಲಿ ಗೋಚರಿಸುವ ಅದ್ಭುತ ಆಕಾಶ ಘಟನೆಯನ್ನು ನೀಡುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯಗ್ರಹಣವು ಭಾಗಶಃ ಅಥವಾ ಸಂಪೂರ್ಣವಾಗಿ ಸೂರ್ಯನನ್ನು ಮಸುಕಾಗಿಸುತ್ತದೆ. ಭಾಗಶಃ ಸೂರ್ಯಗ್ರಹಣದಲ್ಲಿ, ಸೂರ್ಯನ ಒಂದು ಭಾಗವು ಮಾತ್ರ ಚಂದ್ರನಿಂದ ಆವೃತವಾಗಿರುತ್ತದೆ, ಅದರ ಪ್ರಕಾಶಮಾನವಾದ ಡಿಸ್ಕ್ ನಿಂದ “ಕಚ್ಚುವಿಕೆ” ಅನ್ನು ಸೃಷ್ಟಿಸುತ್ತದೆ. ಇದು…

Read More

ಉಡುಪಿ: ನಾಪತ್ತೆಯಾದ ಕಾಲೇಜು ವಿದ್ಯಾರ್ಥಿ ಮೃತದೇಹ ಪತ್ತೆ..!!

ಕುಂದಾಪುರ: ಗುರುವಾರ ಸಂಜೆ ಕಾಲೇಜಿನಿಂದ‌ ಮನೆಗೆ ಬಾರದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯೋರ್ವನ ಮೃತದೇಹ ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ. ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ, ಹೆಮ್ಮಾಡಿ ಸಂತೋಷನಗರ ನಿವಾಸಿ ಲವೇಶ್ ಪೂಜಾರಿ ಇವರ ಪುತ್ರ ನಮೇಶ್ (17) ಮೃತ ವಿದ್ಯಾರ್ಥಿ ಗುರುವಾರ ಸಂಜೆ ಕಾಲೇಜು ಬಿಟ್ಟ ಬಳಿಕ ನಮೇಶ್ ಮನೆಗೆ ವಾಪಾಸಾಗಿರಲಿಲ್ಲ. ಇತ್ತೀಚೆಗಷ್ಟೇ ತಂದೆ ಕೊಡಿಸಿದ್ದ ತನ್ನ ಐಫೋನ್ ಮೊಬೈಲ್ ಅನ್ನು ಮನೆಯಲ್ಲಿಯೇ ಬಿಟ್ಟು ಬೈಕ್‌ನಲ್ಲಿ ತೆರಳಿದ್ದ ನಮೇಶ್ ಹೆಮ್ಮಾಡಿ ಸಮೀಪದ‌ ಕನ್ನಡಕುದ್ರು ನದಿ…

Read More

ಸೆ. 21ರಂದು ವೆನ್‍ಲಾಕ್, ಲೇಡಿಗೋಷನ್ 175ನೇ ವರ್ಷದ ಸಂಭ್ರಮಾಚರಣೆ

ಮಂಗಳೂರು:  ವೆನ್‍ಲಾಕ್, ಲೇಡಿಗೋಷನ್ ಮತ್ತು ಕೆ.ಎಂ.ಸಿ. ಆಸ್ಪತ್ರೆಗಳ ಹಳೆ ವಿದ್ಯಾರ್ಥಿ ಸಂಘ ಇದರ ಉದ್ಘಾಟನಾ ಸಮಾರಂಭ ಹಾಗೂ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಗಳ 175ನೇ ವರ್ಷದ ಸಂಭ್ರಮಾಚರಣೆಯ ಚಾಲನಾ ಕಾರ್ಯಕ್ರಮ ಸೆಪ್ಟೆಂಬರ್  21 ರಂದು  ಮಧ್ಯಾಹ್ನ 2.30 ಗಂಟೆಗೆ ಕಂಕನಾಡಿ ಫಾದರ್ ಮುಲ್ಲರ್ ಕನ್ವೆಂಷನ್ ಸೆಂಟರ್‍ನಲ್ಲಿ ನಡೆಯಲಿದೆ. ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಫರೀದ್ ಘನ ಉಪಸ್ಥಿತಿಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್…

Read More

GST ಪರಿಷ್ಕರಣೆಯಾಗಿರುವ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳ ದರ ಇಳಿಕೆ

ಬೆಂಗಳೂರು: ಜಿಎಸ್‌ಟಿ ಪರಿಷ್ಕರಣೆಯಾಗಿರುವ ಹಿನ್ನೆಲೆಯಲ್ಲಿ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಸೋಮವಾರದಿಂದ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಲಿದೆ. ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು ಶೇ.5ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಪನ್ನಿರ್ ಮತ್ತು ಯುಎಚ್‌ಟಿ ಹಾಲಿಗೆ(ಗುಡ್ ಲೈಫ್) ಮೊದಲು ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಹಾಲು,…

Read More

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹರಡಿದ ಯುವಕ ಅರೆಸ್ಟ್

ಮಂಗಳೂರು: “Karavali_tigers” ಎಂಬ ಇನ್‌ಸ್ಟಾಗ್ರಾಂ ಪೇಜ್ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿದ್ದ ಆರೋಪಿತನನ್ನು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಕೈಫ್ , 22 ಕಿಲ್ಲೂರು ಮನೆ, ಮಾಲವಂತಿಗೆ, ದಕ್ಷಿಣ ಕನ್ನಡ ಬಂಧಿತ ಆರೋಪಿ. 2025ರ ಜುಲೈ 19ರಂದು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ.41/2025) ದಾಖಲಿಸಲಾಗಿತ್ತು. ಆರೋಪಿಯ ವಿರುದ್ಧ ಐಟಿ ಕಾಯ್ದೆಯ ಕಲಂ 66(ಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 56, 353(1), 192 ಅಡಿಯಲ್ಲಿ ಪ್ರಕರಣ ದಾಖಲಾಗಿದೆ….

Read More

ನಾಳೆಯಿಂದ ರಾಜ್ಯಾದ್ಯಂತ 18 ದಿನ ಸರ್ಕಾರಿ ಶಾಲೆಗಳಿಗೆ ‘ದಸರಾ ರಜೆ’ ಘೋಷಣೆ : ಶಿಕ್ಷಣ ಇಲಾಖೆ ಆದೇಶ

ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ದಸರಾ ಹಬ್ಬದ ರಜೆ ಘೋಷಣೆ ಮಾಡಲಾಗಿದೆ. ನಾಳೆಯಿಂದ 18 ದಿನಗಳ ಕಾಲ ಹಬ್ಬದ ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ನಾಳೆಯಿಂದ ಮುಂದಿನ ಅಕ್ಟೋಬರ್ 7 ರವರೆಗೆ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗುವುದು ಕಡ್ಡಾಯ ಎಂದು ತಿಳಿಸಿದೆ.ಈ ಬಗ್ಗೆ ಕರ್ನಾಟಕ ಶಿಕ್ಷಣ ಇಲಾಖೆಯು ಮಾಹಿತಿ…

Read More

ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ಆರೋಪಿ ನಜೀಮ್‌ ಬಂಧನ

ಬಂಟ್ವಾಳ: ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪಟ್ಟುಲಿಕೆ ವಾಸಿಯಾಗಿರುವ ನಜೀಮ್‌ ಅಲಿಯಾಸ್‌ ನಜ್ಜು (30) ವಿರುದ್ಧ ಉಳ್ಳಾಲ, ಕೊಣಾಜೆ, ಮಂಗಳೂರು ನಾರ್ತ್‌, ಬೇಗೂರು (ಬೆಂಗಳೂರು ನಗರ) ಹಾಗೂ ಭಟ್ಕಳ ಪೊಲೀಸ್‌ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಜಾಮೀನು ಪಡೆದು ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ಈತನ ವಿರುದ್ಧ ವಾರೆಂಟ್ ಹಾಗೂ ಪ್ರೋಕ್ಲಮೇಷನ್ ಹೊರಡಿಸಲಾಗಿತ್ತು. ವಿಶೇಷ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

Read More

ಮೆದುಳು ತಿನ್ನುವ ಅಮೀಬಾ ಸೋಂಕು : 69 ಪ್ರಕರಣ, 19 ಸಾವು – ಮುನ್ನೆಚ್ಚರಿಕೆ ಏನು.??

ಕೇರಳ ರಾಜ್ಯದಲ್ಲಿ ಈ ವರ್ಷ “ಬ್ರೇನ್-ಈಟಿಂಗ್ ಅಮೀಬಾ” ಎಂದೇ ಕರೆಯಲ್ಪಡುವ ನೆಗ್ಲೇರಿಯಾ ಫೌಲೇರಿ ಸೋಂಕಿನಿಂದ ಪ್ರಾಥಮಿಕ ಅಮೀಬಿಕ್ ಮೆನಿಂಗೋಎನ್ಸೆಫಾಲಿಟಿಸ್ (PAM) ಪ್ರಕರಣಗಳು ಹೆಚ್ಚುತ್ತಿದ್ದು, ದೃಢೀಕರಿಸಿದ ಪ್ರಕರಣಗಳ ಜೊತೆಗೆ ಸಾವುಗಳೂ ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಇತ್ತೀಚಿನ ಮಾಹಿತಿ ಸೂಚಿಸುತ್ತದೆ. ರಾಜ್ಯದ ಆರೋಗ್ಯ ಸಚಿವ ವೀಣಾ ಜಾರ್ಜ್ ಅವರ ಪ್ರಕಾರ, ಈ ಬಾರಿ ಗುಂಪು ಕ್ಲಸ್ಟರ್‌ಗಳ ಆಗಮನಕ್ಕಿಂತ ಚದುರಿದ, ಏಕಾಂಗಿ ಪ್ರಕರಣಗಳೇ ಹೆಚ್ಚು ಕಂಡುಬಂದಿವೆ ಎಂಬುದು ತಪಾಸಣಾ ತಂಡಗಳಿಗೆ ಸವಾಲಾಗಿದೆ. ಏನು ಈ ರೋಗ? What is Brain-Eating Amoeba? ನೆಗ್ಲೇರಿಯಾ ಫೌಲೇರಿ ಒಂದು ಉಚಿತ-ವಾಸಿ ಅಮೀಬಾ; ಇದು ತಾಪಮಾನ ಜಾಸ್ತಿಯಿರುವ ತಾಜಾ ನೀರು, ಸರೋವರ,…

Read More

 ಮಂಗಳೂರು: ಭೀಕರ ರಸ್ತೆ ಅಪಘಾತ- ಯುವ ಇಂಜಿನಿಯರ್ ಸಾವು

ಮಂಗಳೂರು: ನಗರದ ಯೆಯ್ಯಾಡಿ ಜಂಕ್ಷನ್‌ನಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಯುವ ಎಂಜಿನಿಯರ್ ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಕೌಶಿಕ್ (27) ಮೃತಪಟ್ಟವರು. ನಿತ್ಯವೂ ಬೆಳಗ್ಗೆ ಮನೆಗಳಿಗೆ ಪೇಪ‌ರ್ ಹಾಕುತ್ತಿದ್ದರು. ತಂದೆಯ ಜೊತೆಗೆ ಬೆಳಗ್ಗೆ ಪೇಪರ್ ಹಾಕಿ ಬರುತ್ತಿರಬೇಕಾದರೆ ಕೌಶಿಕ್ ಸವಾರಿ ನಡೆಸುತ್ತಿದ್ದ ಬೈಕ್‌ಗೆ ಆಟೋರಿಕ್ಷಾ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಕೌಶಿಕ್ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ಸಂಚಾರಿ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read More

ಮಂಗಳೂರು: ನಕಲಿ ದಾಖಲೆ ಸಲ್ಲಿಸಿ ಬ್ಯಾಂಕಿಗೆ ಕೋಟ್ಯಂತರ ರೂ.ಪ್ರಕರಣ ವಂಚನೆ- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಅರೆಸ್ಟ್

ಮಂಗಳೂರು: ಎಂಎಸ್‌ಎಂಇ ಯೋಜನೆಯಲ್ಲಿ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕಿಗೆ ಕೋಟ್ಯಂತರ ರೂ. ವಂಚಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಉಜ್ಜೋಡಿಯ ಮುನೀರ್ ಕದಮನ್ ಅಬೂಬಕರ್ (53), ನಂದಿಗುಡ್ಡೆಯ ಹುಸೇನ್. ಪಿ (52) ಮತ್ತು ಜೆಪ್ಪು ನಿವಾಸಿ ಮುಹಮ್ಮದ್ ಮುಸ್ತಾಫ (27) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕಂಪೆನಿ ತೆರೆದು ಸುಳ್ಳು ದಾಖಲಾತಿ ಸೃಷ್ಟಿಸಿ ಲೋನ್ ಹೆಸರಿನಲ್ಲಿ ನಗರದ ಮಲ್ಲಿಕಟ್ಟೆಯ ಬ್ಯಾಂಕ್ ಗೆ ಕೋಟ್ಯಾಂತರ ರೂ. ಮೋಸ ಮಾಡಿದರೆಂದು ಆರೋಪಿಸಲಾಗಿದೆ….

Read More