admin

ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಅತಿಮಹಾರುದ್ರ ಪಾರಾಯಣ

ಬಂಟ್ವಾಳ:ಮೊಗರ್ನಾಡು ಸಾವಿರ ಸೀಮೆಯ ಒಡೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ವಠಾರದಲ್ಲಿ ಜರಗಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ 2ನೇ ದಿನವಾದ ನಿನ್ನೆ ಶ್ರೀ ದೇವರಿಗೆ ಅತಿಮಹಾರುದ್ರ ಪಾರಾಯಣ ನಡೆಯಿತು. ಪ್ರತಿನಿತ್ಯ ಶ್ರೀ ಕ್ಷೇತ್ರದಲ್ಲಿ ಈ ಪಾರಾಯಣ ಮೇ 4 ರಂದು ನಡೆಯುವ ಯಾಗದವರೆಗೂ ನಡೆಯಲಿದೆ. ನಿತ್ಯ ಅನ್ನದಾನವೂ ನಡೆಯುತ್ತದೆ. ವಾರಾಣಾಸಿ ಕಾಶಿಮಠ ಶ್ರೀಮದ್ ಕಾಶಿಜ್ಞಾನ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಈ…

Read More

ಬೆಲೆ ಏರಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯದಾದ್ಯಂತ ಹೋರಾಟ: 2ರಿಂದ ಅಹೋರಾತ್ರಿ ಧರಣಿ

ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 2ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಸಾಮಾನ್ಯ ಜನರಿಗೆ ಸಿಕ್ಕಿರುವ ಏಕೈಕ ಖಾತರಿ ಬೆಲೆ ಏರಿಕೆ… ಈ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತಿದ್ದಾರೆ” ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು. ಬೆಲೆ ಏರಿಕೆ ವಿರುದ್ಧ ಏಪ್ರಿಲ್ 2ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 5 ರಂದು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಬಿಜೆಪಿ…

Read More

ಎಪ್ರಿಲ್ 1 ರಿಂದ 3ರವರೆಗೆ ಕರಾವಳಿ ಜಿಲ್ಲೆಗಳಲ್ಲಿ  ಬಿರುಗಾಳಿ ಸಹಿತ ಭಾರಿ ಮಳೆ..!

ಉಡುಪಿ: ಏಪ್ರಿಲ್‍ ತಿಂಗಳ ಮೊದಲ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ  ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ, ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಏಪ್ರಿಲ್ ತಿಂಗಳ ಆರಂಭದ ಮೂರು ದಿನಗಳಲ್ಲಿ ಗಂಟೆಗೆ 10 ರಿಂದ 3 ಕಿಲೋಮೀಟ‌ರ್ ವೇಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read More

ಬೆಳ್ತಂಗಡಿ: ಬೈಕ್‌ಗಳ ನಡುವೆ ಅಪಘಾತ- ಭಾಗವತ ಸತೀಶ್ ಆಚಾರ್ಯ ಮೃತ್ಯು

ಬೆಳ್ತಂಗಡಿ: ಬೈಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಅಂಡಿಂಜೆಯ ಕಿಲಾರ ಮಾರಿಕಾಂಭ ದೇವಸ್ನಾನದ ತಿರುವು ರಸ್ತೆಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಅಂಡಿಂಜೆ ಗ್ರಾಮದ ಪಿಯೂಲಿರು ನಿವಾಸಿ ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ಅಂಡಿಂಜೆ (40) ಎಂದು ಗುರುತಿಸಲಾಗಿದೆ. ಮಂಗಳಾದೇವಿ ಯಕ್ಷಗಾನ ಮೇಳದ ಯಕ್ಷಗಾನ ಭಾಗವತರಾದ ಸತೀಶ್ ಆಚಾರ್ಯ ರವರು ಮಾ. 31ರಂದು ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ 4 ಗಂಟೆಗೆ ಅವರು ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿರುವ…

Read More

ಉಳ್ಳಾಲ: ಲಕೋಟೆಯಲ್ಲಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಪತ್ತೆ..!

ಉಳ್ಳಾಲ: ಲಕೋಟೆಯೊಂದರಲ್ಲಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಉಳ್ಳಾಲ ಪರಿಸರದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಶನಿವಾರ ರಾತ್ರಿ ಪತ್ತೆಯಾಗಿ ಜನತೆಯನ್ನು ಬೆಚ್ಚಿಬೀಳಿಸಿದ್ದು, ಇದರ ಹಿಂದಿನ ಅಸಲಿಯತ್ತು ಈಗ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶನಿವಾರ ನಡುರಾತ್ರಿ ಚಿತ್ರಾಂಜಲಿ ನಗರದ ಮನೆಯ ಆವರಣದ ಬಳಿ ಪ್ರಯೋಗಾಲಯದ ಮಾದರಿಯ ಅಸ್ಥಿಗಳು ಲಕೋಟೆಯಲ್ಲಿ ಸಂಸ್ಕರಿಸಿದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಸುದ್ದಿ ಕಾಡಿಚ್ಚಿನಂತೆ ಹಬ್ಬಿ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಳ್ಳಾಲ ಪೊಲೀಸರು ಅಸ್ಥಿಗಳು ತುಂಬಿದ್ದ ಲಕೋಟೆಯನ್ನ ವಶಕ್ಕೆ…

Read More

ಮನೆ ಕಟ್ಟೋರಿಗೆ ಮೋದಿ ಸರ್ಕಾರದಿಂದ  ಗಿಫ್ಟ್ : 8 ಲಕ್ಷ ರೂ. ಗೃಹ ಸಾಲದ ಮೇಲೆ ಶೇ.4 ಬಡ್ಡಿ ಸಬ್ಸಿಡಿ

ನವದೆಹಲಿ : ಮನೆ ಕಟ್ಟೋರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, 8 ಲಕ್ಷ ರೂ. ಗೃಹ ಸಾಲದ ಮೇಲೆ ಶೇ.4 ಬಡ್ಡಿ ಸಬ್ಸಿಡಿ ನೀಡುತ್ತಿದೆ. ಹೌದು, ಮನೆ ಕಟ್ಟಬೇಕು ಅನ್ನೋ ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ಇದನ್ನು ವಾಸ್ತವಗೊಳಿಸುವುದು ಅಷ್ಟು ಸುಲಭವಲ್ಲ. ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರವು ನಿಮ್ಮ ಮನೆ ಹೊಂದುವ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ಅಡಿಯಲ್ಲಿ, ಸರ್ಕಾರವು…

Read More

ATM ನಿಂದ `LPG’ ವರೆಗೆ ಏ.1 ರಿಂದ ಬದಲಾಗಲಿವೆ ಈ ಪ್ರಮುಖ ನಿಯಮಗಳು

ನವದೆಹಲಿ : ಮುಂದಿನ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1, 2025 ರಿಂದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ, ಇದು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರರ್ಥ ಮನೆಯಲ್ಲಿ ಅಡುಗೆಮನೆಯಿಂದ ಹಿಡಿದು ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರವರೆಗೆ ಎಲ್ಲರೂ ಪರಿಣಾಮ ಬೀರಲಿದ್ದಾರೆ. ಏಪ್ರಿಲ್ 1 ರಿಂದ, ನಿಗದಿತ ಎಟಿಎಂ ವಿತ್‌ಡ್ರಾ ಮಿತಿಯನ್ನು ಮೀರಿದರೆ ನೀವು 2 ರಿಂದ 23 ರೂ.ಗಳವರೆಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್…

Read More

ಉಡುಪಿ: ಜೀನಾ ಮರಿಲ್‌, ಅಕ್ರಂ ಮದುವೆಗಾಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ- ಎಸ್ಪಿ ಮಾಹಿತಿ

ಉಡುಪಿ: ಉಡುಪಿಯ ಕೊಡವೂರಿನಿಂದ ಕಾಣೆಯಾಗಿದ್ದ ಜೋಡಿ ಜೀನಾ ಮರಿಲ್‌ ಮತ್ತು ಮುಹಮ್ಮದ್‌ ಅಕ್ರಂ ಮದುವೆಗಾಗಿ ಉಡುಪಿಯ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾಗಿ ಉಡುಪಿ ಎಸ್ಟಿ ಡಾ.ಅರುಣ್‌ ತಿಳಿಸಿದ್ದಾರೆ. ತಮ್ಮಮಗಳನ್ನು ಕಿಡ್ನಾಪ್‌ ಮಾಡಿದ್ದಾಗಿ ಜೀನಾ ಪೋಷಕರು ದೂರು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಈ ಜೋಡಿ ಪೊಲೀಸ್‌ ರಕ್ಷಣೆಗೆ ಪತ್ರ. ಬರೆದು ನಾವಿಬ್ಬರೂ ಪ್ರೌಢರಿದ್ದೇವೆ ಎಂದು ಹೇಳಿದ್ದರು. ಇದೇ ವೇಳೆ ಪೋಷಕರು ಹೈಕೋರ್ಟ್‌ ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್‌ ಗೆ ಜೋಡಿಯ ಪರ ಪಕೀಲರು…

Read More

ಮೂಡುಬಿದಿರೆ: ಬಜರಂಗದಳ ಮಾಜಿ ಸಂಚಾಲಕನ ಹಟ್ಟಿಯಿಂದಲೇ ದನಗಳ ಕಳವು..! ಓರ್ವ ಅರೆಸ್ಟ್

ಮೂಡುಬಿದಿರೆ: ಬಜರಂಗದಳದ ಮಾಜಿ ಸಂಚಾಲಕನ ಮನೆಯ ಹಟ್ಟಿಯಿಂದಲೇ ದನಗಳನ್ನು ಕದ್ದೊಯ್ದ ಓರ್ವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು. ಬಂಧಿಸಿದ್ದಾರೆ. ಪುತ್ತಿಗೆ ನಿವಾಸಿ ಮೊಹಮ್ಮದ್‌ ಆರೀಫ್‌ (25) ಬಂಧಿತ ಆರೋಪಿ.10 ದಿನಗಳ ಹಿಂದೆ ಮೂಡುಬಿದಿರೆ ತಾಲೂಕಿನ ಬಜರಂಗದಳದ ಮಾಜಿ ಸಂಚಾಲಕ ಬೆಳುವಾಯಿ ಗ್ರಾಮದ ಖಂಡಿಗ ದರ್ಖಾಸು ನಿವಾಸಿ ಸೋಮನಾಥ ಕೋಟ್ಯಾನ್‌ರವರ ಮನೆಯ ಹಟ್ಚಿಗೇ ನುಗ್ಗಿ ದನಗಳನ್ನು ಕಳವುಗೈೆಯಲಾಗಿತ್ತು. ನಾಯಿ ಬೊಗಳಿದ ಶಬ್ದಕ್ಕೆ ಮನೆಯವರು ಹೊರಗೆ ಬಂದು ನೋಡಿದಾಗ ಸಿಲ್ವರ್‌ ಬಣ್ಣದ ಕಾರೊಂದು ಮನೆಯ ಹಿಂಭಾಗ ನಿಂತಿತ್ತು. ಡ್ರೈವರ್‌ ಸೀಟ್‌ ನಲ್ಲಿ…

Read More

ಮಂಗಳೂರು: ಮುತ್ತೂಟ್ ಫೈನಾನ್ಸ್ ದರೋಡೆ ಯತ್ನ..! ಇಬ್ಬರ ಬಂಧನ ಓರ್ವ ಎಸ್ಕೇಪ್

ಮಂಗಳೂರು : ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಖದೀಮರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಶನಿವಾರ ತಡರಾತ್ರಿ ಸುಮಾರು 1.30 ಗಂಟೆಗೆ ಘಟನೆ ನಡೆದಿದೆ. ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಹೆಚ್.ಎಂ. ಟಿಂಬರ್ಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್ ಗೆ ಕೇರಳ ಮೂಲದ ಮೂವರು…

Read More