ಉಪ್ಪಿನಂಗಡಿ: ಚಾಲಕನಿಗೆ ಎದೆನೋವು- ಪ್ರಯಾಣಿಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಘಾತ
ಉಪ್ಪಿನಂಗಡಿ: ಬಸ್ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಾಗ ಪ್ರಯಾಣಿಕರೋರ್ವರ ಸಮಯ ಪ್ರಜ್ಞೆಯಿಂದ ಭಾರಿ ಅಪಘಾತ ತಪ್ಪಿಸಿ ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಉಪ್ಪಿನಂಗಡಿಯ ಪೆರ್ನೆ ಎಂಬಲ್ಲಿ ನಡೆದಿದೆ. ಗುರುವಾರ ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ಕೆಎಸ್ಸಾರ್ಟಿಸಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಗೋವಿಂದ ನಾಯ್ಕ ಎಂಬವರಿಗೆ ಪೆರ್ನೆ ಗ್ರಾಮದ ಕರ್ವೇಲು ಎಂಬಲ್ಲಿ ಸಮೀಪಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಬಸ್ ಚಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಇದನ್ನು ಗಮನಿಸಿದ ಬಸ್ಸಿನಲ್ಲಿದ್ದ ವಕೀಲ ನೆಲ್ಯಾಡಿಯ ಇಸ್ಮಾಯಿಲ್ ಅವರ ಪುತ್ರ ಸಲ್ಮಾನುಲ್ ಫಾರಿಸ್ ತಕ್ಷಣವೇ…

