ಮಂಗಳೂರು: ಜೋಡಿ ಕೊಲೆ ಪ್ರಕರಣ-ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ನಗರದ ಅತ್ತಾವರದಲ್ಲಿ 2014ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೇರಳ ಕಾಸರಗೋಡಿನ ಚೆರ್ಕಳ ಎಂಬಲ್ಲಿನ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರದ ಇರ್ಷಾದ್ (24) ಹಾಗೂ ಸಫ್ವಾನ್ (24) ಶಿಕ್ಷೆಗೊಳಗಾದ ಆರೋಪಿಗಳು. ಇವರು ನಾಫೀರ್ ಮತ್ತು ಫಾಹಿಮ್ ಎಂಬವರನ್ನು ಕೊಲೆಗೈದಿದ್ದರು. ನಾಫೀರ್ ಮತ್ತು ಫಾಹಿಮ್ ಗೆಳೆಯರಾಗಿದ್ದರು. ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ತಂದಿದ್ದ. ಅವುಗಳನ್ನು ಮಾರಾಟ…

