ನವಜಾತ ಶಿಶುವನ್ನು ಕಾರ್ಕಳದ ವ್ಯಕ್ತಿಗೆ ಮಾರಾಟ ಮಾಡಿ ಸಿಕ್ಕಿಬಿದ್ದ ಚಿಕ್ಕಮಗಳೂರಿನ ದಂಪತಿ
ಕಾರ್ಕಳ : ಕೇವಲ ಒಂದು ಲಕ್ಷ ರೂಪಾಯಿ ಹಣದಾಸೆಗಾಗಿ 2 ದಿನದ ಹಸುಗೂಸನ್ನು ಚಿಕ್ಕಮಗಳೂರಿನ ಎನ್‌ಆರ್‌ಪುರದಿಂದ ಕಾರ್ಕಳದ ದಂಪತಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಮಗುವಿನ ಹೆತ್ತವರು, ಮಗುವನ್ನು ಪಡೆದವರು ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನರ್ಸ್ ಕುಸುಮಾ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.ಕಾರ್ಕಳದ ರಾಘವೇಂದ್ರ ಎಂಬವರಿಗೆ 2 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿತ್ತು. ರಾಘವೇಂದ್ರ ಅವರಿಗೆ ಮಕ್ಕಳಿಲ್ಲದ ಹಿನ್ನಲೆಯಲ್ಲಿ ಮಗುವನ್ನು ಸಾಕುವ ಉದ್ದೇಶದಿಂದ ತನ್ನ ಹಿರಿಯ ಸಹೋದರಿ…

