ವಿಟ್ಲ: ಆಕಸ್ಮಿಕ ಬೆಂಕಿ ತಗುಲಿ ಹಲವಾರು ಅಂಗಡಿಗಳು ಭಸ್ಮ!!
ವಿಟ್ಲ: ಶ್ರೀ ಎಲೆಕ್ಟ್ರೋನಿಕ್ಸ್ ಶಾಪ್‌ಗೆ ಭಾರೀ ಬೆಂಕಿ ತಗಲಿದ ಪರಿಣಾಮ ಹಲವು ಅಂಗಡಿಗಳು ಭಸ್ಮವಾಗಿದ್ದು, ಬಿಸಿರೋಡ್ ನಿಂದ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ವಿಟ್ಲ ಪಟ್ಟಣದ ಮಂಗಳೂರು ರಸ್ತೆಯಲ್ಲಿರುವ ಶ್ರೀ ಎಲೆಕ್ಟ್ರೋನಿಕ್ಸ್ ಅಂಗಡಿಗೆ ಇಂದು ಭಾರೀ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಸಿರೋಡ್‌ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಹರ ಸಾಹಸ ಪಡುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ…

