ಮೊಂಟೆಪದವು ಗುಡ್ಡ ಕುಸಿತ ದುರಂತದಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ಗಾಯಾಳು ಅಶ್ವಿನಿ
ಮಂಗಳೂರು : ನಿನ್ನೆ ಮಂಜನಾಡಿಯ ಮೊಂಟೆಪದವು ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಸಾವನಪ್ಪಿದ್ದರು. ಒಂದೇ ಕುಟುಂಬದ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಒಂದು ದುರಂತದಲ್ಲಿ ಮೃತಪಟ್ಟ ಬಾಲಕರ ತಾಯಿ ಅಶ್ವಿನಿ ಗಾಯಗೊಂಡಿದ್ದು ಇದೀಗ ಅಶ್ವಿನಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಹೌದು ಮಂಗಳೂರಿನ ಮಂಜನಾಡಿಯ ಮೊಂಟೆಪದವು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಯಾಳು ಅಶ್ವಿನಿ ದುರಂತದಲ್ಲಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಅಶ್ವಿನಿ ಸಂಪೂರ್ಣವಾಗಿ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ಅಶ್ವಿನಿಯ…

