ಮಂಗಳೂರಿನಲ್ಲಿ ಅಪಾಯಕಾರಿ ಬೈಕ್ ಸವಾರಿಗೆ ಬ್ರೇಕ್ ಹಾಕಿ: ಸಾರ್ವಜನಿಕರ ಆಗ್ರಹ
ಮಂಗಳೂರು, ಜೂ. 12 : ನಗರದಲ್ಲಿ ಅಪಾಯಕಾರಿ ಹಾಗೂ ಕಾನೂನುಬಾಹಿರ ಬೈಕ್ ಸವಾರಿಯ ಎರಡು ಘಟನೆಗಳು ಬೆಳಕಿಗೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೊದಲ ಘಟನೆ ಜೂನ್ 7 ರಂದು ಸಂಜೆ ಯೆನೆಪೋಯ (ದೇರಳಕಟ್ಟೆ)ಯಿಂದ ಕೆ.ಎಸ್. ಹೆಗ್ಡೆ ಮಾರ್ಗದಲ್ಲಿ ಸಂಭವಿಸಿದೆ. KA 19 HL 7316 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ನಾಲ್ವರು ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಇದು ಸಂಚಾರ ನಿಯಮದ ಉಲ್ಲಂಘನೆಯಾಗಿರುತ್ತದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ನಾಲ್ವರ ಈ…

