admin

ಮದುವೆಯಾಗಲು ಗೋವಾಗೆ ಹೋದ ಲವರ್ಸ್..! ಯುವತಿ ಕತ್ತು ಸೀಳಿ ಕೊಂದ ಯುವಕ.!

ದಕ್ಷಿಣ ಗೋವಾದ ಪೊಲೀಸರು ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ತನ್ನ ಗೆಳತಿಯ ಕೊಲೆ ಆರೋಪದ ಮೇಲೆ 22 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಈ ಜೋಡಿ ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ, ಆದರೆ ಅವರ ನಡುವಿನ ವಿವಾದ ದುರಂತದಲ್ಲಿ ಕೊನೆಗೊಂಡಿತು. ಬಂಧಿತ ಶಂಕಿತನನ್ನು ಕರ್ನಾಟಕದ ಉತ್ತರ ಬೆಂಗಳೂರಿನ ನಿವಾಸಿ ಸಂಜಯ್ ಕೆವಿನ್ ಎಂ ಎಂದು ಗುರುತಿಸಲಾಗಿದೆ. ಬಲಿಪಶು ರೋಶ್ನಿ ಮೋಸೆಸ್ ಎಂ, 22 ವರ್ಷ ವಯಸ್ಸಿನವಳು, ಅದೇ ಪ್ರದೇಶದವಳು. ಪೊಲೀಸರ ಪ್ರಕಾರ,…

Read More

ಮಂಗಳೂರು: ಕಾರು ಡಿವೈಡರ್‌ ಗೆ ಡಿಕ್ಕಿ- ಇಬ್ಬರು ಯುವಕರು ಸಾವು..!

ಮಂಗಳೂರು: ಕಾರು ಡಿವೈಡರ್‌ ಗೆ ಡಿಕ್ಕಿಯಾಗಿ ಮೋರಿಗೆ ಬಡಿದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಜಪ್ಪಿನಮೊಗರು ನಡುಮುಗೇರ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಮೃತರನ್ನು ಕದ್ರಿ ನಿವಾಸಿ ಅಮನ್‌ ರಾವ್‌ ಹಾಗೂ ಎನ್‌ಎಸ್‌ಯುಐ ಮುಖಂಡ ಓಂ ಶ್ರೀ ಪೂಜಾರಿ ಎಂದು ಗುರುತಿಸಲಾಗಿದೆ.ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ದ.ಕ., ಉಡುಪಿ ಜಿಲ್ಲಾಧಿಕಾರಿಗಳ ವರ್ಗಾವಣೆ..! ದ.ಕ. ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್‌.ವಿ ನೇಮಕ

ಮಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರವು ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ಮಂಗಳವಾರ (ಜೂ.17) ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಇದರಲ್ಲಿ ಐವರು ಜಿಲ್ಲಾಧಿಕಾರಿಗಳು ಸೇರಿದ್ದಾರೆ. ಉಡುಪಿ ಜಿಲ್ಲಾಧಿಕಾರಿಯಾಗಿದ್ದ ವಿದ್ಯಾಕುಮಾರಿ ಅವರನ್ನು ವರ್ಗಾವಣೆ ಮಾಡಿದ್ದು, ಇದುವರೆಗೆ ಇ-ಆಡಳಿತ ನಿರ್ದೇಶಕರಾಗಿದ್ದ ಸ್ವರೂಪ ಟಿ.ಕೆ ಅವರನ್ನು ಉಡುಪಿ ಡಿಸಿ ಆಗಿ ನೇಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೆ ಮುಗಿಲನ್ ಅವರನ್ನು ವರ್ಗಾವಣೆ ಮಾಡಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯಕ್ತರಾಗಿದ್ದ ದರ್ಶನ್ ಎಚ್.ವಿ ಅವರನ್ನು ದ.ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಮುನ್ನೈ…

Read More

ಮಂಗಳೂರು: ಕಾರು ಪಲ್ಟಿಯಾಗಿ ಯುವ ವೈದ್ಯ ಸಾವು..!

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ನಂತೂರು-ಪಂಪ್‌ವೆಲ್ ನಡುವೆ ಕಾರ್ ಪಲ್ಟಿಯಾಗಿ ಯುವ ವೈದ್ಯರೊಬ್ಬರು ಮೃತಪಟ್ಟ ಘಟನೆ ಜೂ.16ರ ಸೋಮವಾರ ತಡರಾತ್ರಿ ನಡೆದಿದೆ. ಮೃತ ದುರ್ದೈವಿಯನ್ನು ಕೇರಳದ ನಿವಾಸಿ, ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಫಿಸಿಯೋಥೆರಪಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ಮೊಹಮ್ಮದ್ ಅಮಲ್ (29) ಎಂದು ಗುರುತಿಸಲಾಗಿದೆ. ನಂತೂರಿನ ತಾರೆತೋಟ ಬಳಿ ಘಟನೆ ನಡೆದಿದ್ದು, ರಾತ್ರಿ ಮಳೆ ಬರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಕಾರು ಸ್ಕಿಡ್ ಆಗಿ ಡಿವೈಡರ್‌ಗೆ ಬಡಿದು ಬಳಿಕ ಮೂರು…

Read More

ಮಂಗಳೂರು: ಮನೆ ಮೇಲೆ ಕುಸಿದು ಬಿದ್ದ ಗುಡ್ಡ..!!

ಮಂಗಳೂರು: ಮಂಗಳೂರಿನಲ್ಲಿ ಸೋಮವಾರ ಮಳೆ ಅಬ್ಬರ ತುಸು ತಡಿಮೆಯಾಗಿದ್ದರೂ ಗುಡ್ಡ ಕುಸಿತ ಸಂಭವಿಸಿದೆ. ಮಂಗಳೂರು ಸಮೀಪದ ಕಣ್ಣೂರಿನ ದಯಂಬು ಎಂಬಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದು, ಕುಟುಂಬವೊಂದು ಕೂದಲೆಲೆ ಅಂತರದಲ್ಲಿ ಪಾರಾಗಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯಲ್ಲಿ ವಾಸವಿದ್ದ ಕುಟುಂಬದವರು, ಗುಡ್ಡ ಕುಸಿತದ ಸದ್ದು ಕೇಳುತ್ತಿದ್ದಂತೆಯೇ ಓಡಿಹೋಗಿ ಬಚಾವಾಗಿದ್ದಾರೆ. ಮೂರು ಮನೆಗಳಿಗೆ ಕುಸಿತದಿಂದ ಹಾನಿಯಾಗಿದೆ. ಕಳೆದ ಶನಿವಾರದಿಂದೀಚೆಗೆ ಸುರಿಯುತ್ತಿರುವ ಭೀಕರ ಮಳೆಗೆ ಮಂಗಳೂರು ನಗರದಲ್ಲಿ ಅನೇಕ ಅನಾಹುತಗಳು ಸಂಭವಿಸದ್ದು, ಜನರು ತತ್ತರಿಸಿ ಹೋಗಿದ್ದಾರೆ. ಭಾರಿ ಮಳೆಯ…

Read More

ಕಾರ್ಕಳ: ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರತಿಮಾಗೆ ಜಾಮೀನು ಮಂಜೂರು

ಕಾರ್ಕಳ: ಅ.20 ರಂದು ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆಯಲ್ಲಿ ನಡೆದ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅವರ ಪತ್ನಿ ಪ್ರತಿಮಾಗೆ ಜಾಮೀನು ಮಂಜೂರಾಗಿದೆ. ಬಾಲಕೃಷ್ಣ ಪೂಜಾರಿ ಪತ್ನಿ  ಪ್ರತಿಮಾ (36)ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ಇನ್ನೋರ್ವ ಆರೋಪಿ ಪ್ರಿಯಕರ ದಿಲೀಪ್‌ ಹೆಗ್ಡೆ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ತನ್ನ ಪತಿ ದಿಲೀಪ್‌ನನ್ನು ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್‌ ಸೇರಿ ಕೊಲೆ ಮಾಡಿರುವ ಆರೋಪದಲ್ಲಿ ಅ.25 ರಂದು ಅಜೆಕಾರು ಠಾಣೆ ಪೊಲೀಸರು ಇಬ್ಬರನ್ನೂ…

Read More

ಮಂಗಳೂರು: ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ ಹತ್ತು ತಿಂಗಳ ಮಗು ದುರ್ಮರಣ

ಮಂಗಳೂರು: ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ 10 ತಿಂಗಳ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಅಡ್ಯಾರ್‌ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್ ಕುಮಾರ್ ಮೃತ ಮಗು. ಶನಿವಾರ ಮಧ್ಯಾಹ್ನ 1.30ರ ವೇಳೆಗೆ ಘಟನೆ ಸಂಭವಿಸಿದೆ. ಅಸ್ವಸ್ಥಗೊಂಡಿದ್ದ ಮಗುವನ್ನು ಅಪರಾಹ್ನ 3.30ರ ವೇಳೆಗೆ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ರವಿವಾರ ಬೆಳಗ್ಗೆ 10.25ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. ಪತಿಯ ನಿರ್ಲಕ್ಷ್ಯವೇ ಕಾರಣ…

Read More

ಬಂಟ್ವಾಳ: ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕ..! ಹಳ್ಳದಲ್ಲಿ ಮೃತದೇಹ ಪತ್ತೆ

ಬಂಟ್ವಾಳ; ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ  ಪತ್ತೆಯಾಗಿದೆ. ಬಂಟ್ವಾಳದ ಬೆಂಜನಪದವು ನಿವಾಸಿ ಸಾಗರ್ ( 28 ) ಮೃತ ಯುವಕ. ಬಂಟ್ವಾಳದ ಬೆಂಜನಪದವು ನಿವಾಸಿ ಸಾಗರ್ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಸಾಗರ್‌ ಗಾಗಿ ಮನೆಮಂದಿ ಹಾಗೂ ಸ್ನೇಹಿತರು ಹುಡುಕಾಟ ನಡೆಸಿದ್ದರು. ಟವರ್ ಲೋಕೇಶನ್ ಪ ತ್ತೆಮಾಡಲು ಪ್ರಕರಣ ದಾಖಲಿಸಿದ್ದರು. ಆದರೆ ಇಂದು ಪಕ್ಕದ ಹಳ್ಳದಲ್ಲಿ ಸಾಗರ್ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Read More

ಉಡುಪಿ: ವಿದ್ಯೋದಯ ಪಬ್ಲಿಕ್ ಶಾಲೆಗೆ ಬೆದರಿಕೆ

ಉಡುಪಿ: ನಗರದ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಸೋಮವಾರ ಇ-ಮೇಲ್ ಮೂಲಕ ಬಾಂಬ್ ಸ್ಪೋಟದ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಪೊಲೀಸರು ಬಿಗು ತಪಾಸಣೆ ನಡೆಸಿದ್ದಾರೆ. ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು, ಶಾಲಾ ಆವರಣದಲ್ಲಿ ತೀವ್ರ ತಪಾಸಣೆ ನಡೆಸಿದರು. ಸದ್ಯ ಯಾವುದೇ ಬಾಂಬ್ ಅಥವಾ ಅಪಾಯಕಾರಿ ಅಂಶ ಪತ್ತೆಯಾಗಿಲ್ಲ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ಶಾಲೆಯಲ್ಲಿ ಬಾಂಬ್ ಇಟ್ಟಿರೋ ಬಗ್ಗೆ ಇ-ಮೇಲ್ ಸ್ವೀಕೃತವಾಗಿರುತ್ತದೆ….

Read More

ಬೆಳ್ತಂಗಡಿ: ಬೈಕ್ ಸಮೇತ ನದಿ ನೀರಿನಲ್ಲಿ ಕೊಚ್ಚಿ ಹೋದ ಸವಾರರು..!

ಬೆಳ್ತಂಗಡಿ: ಯುವಕರಿಬ್ಬರು ಬೈಕ್ ಸಮೇತ ನದಿ ನೀರಿನಲ್ಲಿ ಕೊಚ್ಚಿ ಹೋಗಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದ ಘಟನೆ ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಸಮೀಪದ ರವಿವಾರ ನಡೆದಿದೆ. ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಅಪಾಯದಿಂದ ಪಾರಾದ ಯುವಕರು. ಇವರು ಕೆಲಸಕ್ಕೆ ಹೋಗುವಾಗ ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು…

Read More