ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಇನ್ನಿಲ್ಲ…!
ಮಂಗಳೂರು: ಐವತ್ತೆಂಟು ವರ್ಷಗಳಿಗೂ ಮಿಕ್ಕಿ ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನದಲ್ಲಿ ಸೈ ಎನಿಸಿಕೊಂಡ ಖ್ಯಾತ ಕಲಾವಿದ, ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ ಎಂಭತ್ತನಾಲ್ಕು ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಹವ್ಯಾಸಿ ಕಲಾವಿದರಾಗಿ ನಾಲ್ಕು ವರ್ಷ, ಕಟೀಲು, ಸುಬ್ರಹ್ಮಣ್ಯ, ಮಂತ್ರಾಲಯ, ಮಂದಾರ್ತಿ ಹೀಗೆ ಅತ್ಯಂತ ಖ್ಯಾತ ಮೇಳಗಳಲ್ಲಿ ಇವರು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ನವರಾತ್ರಿ ಸಂದರ್ಭ ಕಟೀಲಿನಲ್ಲಿ ಪ್ರತೀ ವರ್ಷ ಬಣ್ಣ ಹಚ್ಚುತ್ತಿದ್ದರು. ಯಕ್ಷಗಾನ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ…

